ಅಜಮ್‌ಘರ್(ಉತ್ತರ ಪ್ರದೇಶ) : ಒಂದು ಕಾಲದಲ್ಲಿ ಬನಾರಸ್ ಸೀರೆಗಳಿಗೆ ಹೆಸರುವಾಸಿಯಾಗಿದ್ದ ಉತ್ತರಪ್ರದೇಶದ ಮುಬಾರಕ್‌ಪುರವು ಈಗ ಕೊರೊನಾ ವೈರಸ್ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
ಇದರಿಂದ ಪಟ್ಟಣದ ನೇಕಾರರು ಮತ್ತು ಅವರ ಕುಟುಂಬಗಳಿಗೆ ಜೀವನ ನಡೆಸುವುದು ಕಷ್ಟಕರವಾಗಿಸಿದೆ. ಕೊರೊನಾ ವೈರಸ್ ಹರಡುವುದನ್ನು ಪರೀಕ್ಷಿಸಲು ಮಾರ್ಚ್ 22ರಿಂದ ಇಲ್ಲಿನ ಮಗ್ಗಗಳನ್ನು ಮುಚ್ಚಲಾಯಿತು. ಆದರೂ ಏಪ್ರಿಲ್ 11ರಂದು ಚಕ್ಸಿಕತಿ ಪ್ರದೇಶದಲ್ಲಿ COVID-19 ಪ್ರಕರಣ ಪತ್ತೆಯಾದ ನಂತರ ಇಡೀ ಪಟ್ಟಣವನ್ನು ಬಂದ್ ಮಾಡಲಾಗಿದೆ ಎಂದು ನೇಕಾರರು ತಿಳಿಸಿದ್ದಾರೆ.
ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲದೆ ಸಾವಿರಾರು ನೇಕಾರರು ತಮ್ಮ ಅಲ್ಪ ಉಳಿತಾಯದಿಂದ ಜೀವನ ನಡೆಸುತ್ತಿದ್ದಾರೆ. "ಜನರು ನಿರಾಶೆಗೊಳ್ಳುತ್ತಿರುವುದರಿಂದ ಜಗಳಗಳು ಹೆಚ್ಚುತ್ತಿವೆ. ಉದ್ಯಮಿಗಳು ಮಾತ್ರ ಸಂತೋಷವಾಗಿದ್ದು, ನೇಕಾರರು ಕಷ್ಟಪಡುತ್ತಿದ್ದಾರೆ" ಎಂದು ಸ್ಥಳೀಯ ನೇಕಾರ ಜಾವೇದ್ ಎಂಬುವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ವಿಡಿಯೋದಲ್ಲಿ ಹೇಳಿದ್ದಾರೆ. ದಿನ ಕಳೆದಂತೆ ನೇಕಾರರು ಸುಮ್ಮನೆ ಕುಳಿತು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ಜಾವೇದ್ ದೂರಿದ್ದಾರೆ.
ಮತ್ತೊಬ್ಬ ನೇಕಾರ ಮಸೂದ್ ಅಖ್ತರ್ ಅವರ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಯಮವನ್ನು ಒಂದು ಜಿಲ್ಲೆಯಡಿ ಇಟ್ಟಿದ್ದಾರೆ. ಇದಕ್ಕೆ ಕೊರೊನಾ ವೈರಸ್ ಕಾರಣ ರಾಜ್ಯ ಸರ್ಕಾರ ಆರ್ಥಿಕ ಸ್ಥಿತಿ ಸುಧಾರಿಸಲು ಏನೂ ಮಾಡಲಾಗುವುದಿಲ್ಲ. ನೇಕಾರರ ದುಃಸ್ಥಿತಿ ಗಮನಿಸಿದ ಶಾಸಕ ಷಾ ಆಲಂ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಅವರಿಗೆ ಸಹಾಯ ಕೋರಿ 27,000 ನೇಕಾರರ ಪಟ್ಟಿ ಕಳುಹಿಸಿದ್ದಾರೆ. ಅದರಂತೆ ಕಾರ್ಯನಿರ್ವಹಿಸಿದ ಡಿಸಿ ನೇಕಾರರ ಸಮಿತಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪಟ್ಟಿಯ ಪ್ರಕಾರ ಪ್ರತಿ ನೇಕಾರರಿಗೆ 1,000 ರೂ.ನೀಡಿದ್ದಾರೆ.
"ನಾವು ಸ್ಥಳೀಯರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದೇವೆ. ಮುಬಾರಕ್ಪುರ ಪ್ರದೇಶವನ್ನು ಬಂದ್ ಮಾಡಿರುವುದರಿಂದ,ನಾವು ಅವರಿಗೆ ಪರಿಹಾರ ನೀಡುತ್ತಿದ್ದೇವೆ" ಎಂದು ಸಿಂಗ್ ಹೇಳಿದರು.