ನವದೆಹಲಿ: ಆರೋಗ್ಯ ಸಚಿವಾಲಯವು ದೇಶಿಯ ರೈಲ್ವೆ ಪ್ರಯಾಣಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರಯಾಣಿಕರಿಗೆ ತಮ್ಮ ಮೊಬೈಲ್ನಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಲು ಸಲಹೆ ನೀಡಿದೆ.



ಜೂ.1ರಿಂದ ಆರಂಭವಾಗುವ ರೈಲ್ವೆ ಪ್ರಯಾಣಕ್ಕೆ ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ. ರೈಲ್ವೆ ನಿಲ್ದಾಣಗಳಲ್ಲಿರುವ ಟಿಕೆಟ್ ಹಾಗೂ ರಿಸರ್ವೇಷನ್ ಕೌಂಟರ್‌ಗೆ ತೆರಳುವಂತಿಲ್ಲ. ಸಾರ್ವಜನಿಕರು ಭಾರತೀಯ ರೈಲ್ವೆ ಇಲಾಖೆ ಆನ್‌ಲೈನ್ ಇಂಡಿಯನ್ ರೈಲ್ವೆ ಕೆಟರಿಂಗ್ ಮತ್ತು ಟ್ರಾವೆಲ್ಸ್ ಕಾರ್ಪೋರೇಶನ್ ಲಿಮಿಟೆಡ್ (ಐಆರ್‌ಸಿಟಿಸಿ) ಮೂಲಕ ಮೊಬೈಲ್‌ನಿಂದಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.
ಭಾರತೀಯ ರೈಲ್ವೆ ಇಲಾಖೆ ಜೂನ್ 1ರಿಂದ 200 ರೈಲುಗಳ ಸಂಚಾರದ ಬಗ್ಗೆ ಕಳೆದವಾರ ಮಾಹಿತಿ ನೀಡಿತ್ತು. ಜೂನ್ 1ರಿಂದ ಎಸಿ ರಹಿತ 200 ವಿಶೇಷ ರೈಲುಗಳ ಸೇವೆ ಆರಂಭಿಸಲಾಗುವುದು. ಶೀಘ್ರವೇ ಬುಕ್ಕಿಂಗ್ ಪ್ರಕ್ರಿಯೆ ಸಹ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದರು.



ಜನಪ್ರಿಯ ರೈಲುಗಳಾದ ಡುರೊಂಟೋಸ್, ಸಂಪರ್ಕ್ ಕ್ರಾಂತಿ, ಜಾನ್ ಶತಾಬ್ದಿ ಮತ್ತು ಪೂರ್ವ ಎಕ್ಸ್‌ಪ್ರೆಸ್ ಅನ್ನು ಕಾರ್ಯರೂಪಕ್ಕೆ ತಂದ ನಂತರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.


