ETV Bharat / bharat

ವಿಶ್ವದ ಅತಿ ದೊಡ್ಡ ಕೋವಿಡ್​ ಕೇರ್​ ಸೆಂಟರ್​ ಸಿದ್ದವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ - ರಾಧಾ ಸ್ವಾಮೀ ​ಸತ್ಸಂಗ್​ ಬಿಯಾಸ್​ನಲ್ಲಿ ವಿಶ್ವದ ಅತೀ ದೊಡ್ಡ ಕೋವಿಡ್​ ಕೇರ್​ ಸೆಂಟರ್​

10 ಸಾವಿರ ಹಾಸಿಗೆಗಳೊಂದಿಗೆ ವಿಶ್ವದ ಅತೀ ದೊಡ್ಡ ಕೋವಿಡ್​ ಕೇರ್​ ಸೆಂಟರ್​ ಆಗಿರುವ ದೆಹಲಿಯ ರಾಧಾ ಸ್ವಾಮೀ ಸತ್ಸಂಗ್​ ಬಿಯಾಸ್​ನ ಸರ್ದಾರ್​ ಪಟೇಲ್ ಕೋವಿಡ್​ ಕೇರ್​​ ಸೆಂಟರ್​, ಕೇವಲ ಒಂದು ತಿಂಗಳ ಅವಧಿಯಲ್ಲಿ ಸಿದ್ದಪಡಿಸಲಾಗಿದೆ. ಕಡಿಮೆ ಸಮಯದಲ್ಲಿ ಈ ಬೃಹತ್​​ ಕೋವಿಡ್​ ಸೆಂಟರ್​ ಹೇಗೆ ಸಿದ್ದಪಡಿಸಲಾಯಿತು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ. ಇದಕ್ಕೂ ದೊಡ್ಡದಾದ ಕೇಂದ್ರ ಬೆಂಗಳೂರಿನಲ್ಲೂ ಸಿದ್ಧವಾಗುತ್ತಿದೆ

World largest covid care center build in Delhi
ವಿಶ್ವದ ಅತೀ ದೊಡ್ಡ ಕೋವಿಡ್​ ಕೇರ್​ ಸೆಂಟರ್
author img

By

Published : Jul 9, 2020, 1:29 PM IST

ನವದೆಹಲಿ : ನಗರದ ದಕ್ಷಿಣ ಭಾಗದಲ್ಲಿರುವ ರಾಧಾ ಸ್ವಾಮೀ ​ಸತ್ಸಂಗ್​ ಬಿಯಾಸ್ ಕೇಂದ್ರವನ್ನು ಈಗ ಬೃಹತ್​ ಕೋವಿಡ್​ ಕೇರ್​ ಸೆಂಟರ್ ಆಗಿ ಪರಿವರ್ತಿಸಲಾಗಿದೆ. 1,700 x 700 ಚದರ ಅಡಿಯ ಈ ಕೇಂದ್ರವು ವಿಶ್ವದ ಅತೀ ದೊಡ್ಡ ಕೋವಿಡ್​ ಕೇರ್​ ಸೆಂಟರ್​ ಆಗಿ ಪರಿವರ್ತಿನೆಯಾಗಿದೆ. ಸರ್ದಾರ್​ ಪಟೇಲ್​ ಕೋವಿಡ್​ ಕೇರ್ ಸೆಂಟರ್​ ಆಗಿ ಬದಲಾಗಿರುವ ಈ ಬೃಹತ್​ ಪ್ರಾಂಗಣದಲ್ಲಿ ಈಗಾಗಲೇ 10 ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಗುಣ ಲಕ್ಷಣಗಳಿಲ್ಲದ ಕೋವಿಡ್​ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ವಿಶ್ವದ ಅತೀ ದೊಡ್ಡ ಕೋವಿಡ್​ ಕೇರ್​ ಸೆಂಟರ್

ಜುಲೈ 5 ರಿಂದ ಕಾರ್ಯಾರಂಭ :

ಎರಡು ಸಾವಿರ ಹಾಸಿಗೆಗಳೊಂದಿಗೆ ಜುಲೈ 5 ರಂದು ಈ ಬೃಹತ್​ ಕೋವಿಡ್​ ಕೇರ್​ ಸೆಂಟರ್​ ಕಾರ್ಯಾರಂಭ ಮಾಡಿದ್ದು, ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಅನಿಲ್ ಬೈಜಾಲ್ ಈ ಕೇಂದ್ರದ ಉದ್ಘಾಟನೆ ಮಾಡಿದ್ದಾರೆ. ಸದ್ಯ ಇಲ್ಲಿ 200 ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್​ ಎರಡನೇ ವಾರದಲ್ಲಿ ನಗರದಲ್ಲಿ ದಿನಕ್ಕೆ ಎರಡು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾದಾಗಿ, ಒಟ್ಟು ಸೋಂಕಿತರ ಸಂಖ್ಯೆ 40 ಸಾವಿರ ದಾಟಿತ್ತು. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸರ್ಕಾರ ತಾತ್ಕಾಲಿಕ ಕೋವಿಡ್​ ಕೇಂದ್ರದ ಸ್ಥಾಪನೆಗೆ ಯೋಜನೆ ರೂಪಿಸಿತ್ತು.

ಜೂನ್​ 15 ರಂದು ಅಧಿಕೃತ ಭೇಟಿ:

ತಾತ್ಕಾಲಿಕ ಕೋವಿಡ್​ ಕೇಂದ್ರ ಸ್ಥಾಪನೆಗೆ ದಕ್ಷಿಣ ದೆಹಲಿಯಲ್ಲಿರುವ ರಾಧಾ ಸ್ವಾಮೀ ​ಸತ್ಸಂಗ್​ ಬಿಯಾಸ್ ಕೇಂದ್ರ ಸೂಕ್ತ ಸ್ಥಳವೆಂದು ನಿರ್ಧರಿಸಿದ ಸ್ಥಳೀಯ ಅಧಿಕಾರಿ ಬಿಎಂ ಮಿಶ್ರಾ, ಯೋಜನೆ ರೂಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಯೋಜನೆ ಪ್ರಕಾರ ಜೂನ್​ 14 ರಂದು ರಾಧಾ ಸ್ವಾಮೀ ​ಸತ್ಸಂಗ್​ ಬಿಯಾಸ್ ಕೇಂದ್ರದಲ್ಲಿ ಕೋವಿಡ್ ಆರೈಕೆ ಕೇಂದ್ರದ ನಿರ್ಮಾಣಕ್ಕೆ ಸಿದ್ದತೆಗಳು ಪ್ರಾರಂಭಗೊಂಡವು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ , ಕೋವಿಡ್​ ಕೇಂದ್ರ ಸ್ಥಾಪನೆಗೆ ಹಸಿರು ನಿಶಾನೆ ತೋರಿದ್ದರು.

ಗೃಹ ಸಚಿವರಿಗೆ ಮುಖ್ಯಮಂತ್ರಿಗಳ ಪತ್ರ:

ಒತ್ತಡದ ಮಧ್ಯೆಯೂ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಜೂನ್​ 18 ರಂದು ಕೋವಿಡ್​ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಜೂನ್​ 23 ರಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಸಿಎಂ ಕೇಜ್ರಿವಾಲ್, ಕೋವಿಡ್​ ಕೇಂದ್ರವನ್ನು ಪರಿಶೀಲಿಸಲು ಆಹ್ವಾನಿಸಿದ್ದರು ಮತ್ತು ಕೇಂದ್ರದ ನಿರ್ವಹಣೆಯನ್ನು ಇಂಡೋ - ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಗೆ ನೀಡುವಂತೆ ಮನವಿ ಮಾಡಿದ್ದರು.

ಜೂನ್ 27 ರಂದು ಏಕಕಾಲಕ್ಕೆ ತಪಾಸಣೆ :

ಅರವಿಂದ್ ಕೇಜ್ರಿವಾಲ್ ಅವರ ಈ ಪತ್ರಕ್ಕೆ ಟ್ವೀಟ್ ಮೂಲಕ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, 10 ಸಾವಿರ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್​ನ್ನು ನಿರ್ವಹಿಸುವ ಜವಾಬ್ದಾರಿಯನ್ನು ಗೃಹ ಸಚಿವಾಲಯ ಈಗಾಗಲೇ ಐಟಿಬಿಪಿಗೆ ವಹಿಸಿದೆ. ಇಲ್ಲಿ ಹೆಚ್ಚಿನ ಸೌಲಭ್ಯಗಳು ಜೂನ್ 26 ರಿಂದ ಪ್ರಾರಂಭವಾಗಲಿವೆ. ಮೂರು ದಿನಗಳ ಹಿಂದೆಯೇ ನಮ್ಮ ಸಭೆಯಲ್ಲಿ ಇದನ್ನು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು. ಜೂನ್ 27 ರಂದು ಈ ಇಬ್ಬರು ನಾಯಕರು ಜೊತೆಗೂಡಿ ಏಕಕಾಲಕ್ಕೆ ಕೋವಿಡ್ ಕೇರ್ ಸೆಂಟರ್​ ಪರಿಶೀಲಿಸಿದ್ದರು.

50 - 50 ಹಾಸಿಗೆಗಳ 200 ಬ್ಲಾಕ್​ :

ಕೇಂದ್ರ ಗೃಹ ಸಚಿವ ಮತ್ತು ಸಿಎಂ ಕೇಜ್ರಿವಾಲ್ ಭೇಟಿಯ ವೇಳೆಗೆ ಕೋವಿಡ್​ ಕೇಂದ್ರದ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದವು ಮತ್ತು 2 ಸಾವಿರ ಹಾಸಿಗೆಗಳ ಸಿದ್ದತೆಯನ್ನು ಅಂತಿಮಗೊಳಿಸಲಾಗಿತ್ತು. 50-50 ಹಾಸಿಗೆಗಳ 200 ಬ್ಲಾಕ್​ಗಳನ್ನು ಸಿದ್ದಪಡಿಸಲಾಗಿತ್ತು. ಈ ಬಗ್ಗೆ ಐಟಿಬಿಪಿಯ ಡಿಜಿ ಗೃಹ ಸಚಿವರು ಮತ್ತು ಸಿಎಂಗೆ ಮಾಹಿತಿ ನೀಡಿದ್ದರು. ಜುಲೈ 5 ರಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕೇಂದ್ರ ಉದ್ಘಾಟನೆ ಮಾಡಿದರು.

ಡಿಡಿಯು ಆಸ್ಪತ್ರೆಯೊಂದಿಗೆ ಜೋಡಣೆ :

ಸದ್ಯ ಈ ಬೃಹತ್ ಕೋವಿಡ್ ಸೆಂಟರ್​ ರೋಗ ಲಕ್ಷಣಗಳಿಲ್ಲದ ಮತ್ತು ಸಣ್ಣ ಪುಟ್ಟ ಲಕ್ಷಣಗಳಿರುವ ಕೊರೊನಾ ಸೋಂಕಿತರ ಆರೈಕೆ ಮಾಡಲು ಸಿದ್ದವಾಗಿದ್ದು, ಆಮ್ಲಜನಕ ಮತ್ತು ಆ್ಯಂಬುಲೆನ್ಸ್​ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿ ದಾಖಲಾದ ಯಾರಿಗಾದರೂ ಆರೋಗ್ಯ ಹದೆಗೆಟ್ಟರೆ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಸರ್ದಾರ್​ ಪಟೇಲ್ ಕೋವಿಡ್​ ಕೇಂದ್ರವನ್ನು ಡಿಡಿಯು ಆಸ್ಪತ್ರೆಯೊಂದಿಗೆ ಜೋಡಿಸಲಾಗಿದೆ.

ಬೆಂಗಳೂರಿನಲ್ಲೂ ನಿರ್ಮಾಣವಾಗ್ತಿದೆ ಅತಿ ದೊಡ್ಡ ಕೇಂದ್ರ: ಬೆಂಗಳೂರಿನಲ್ಲೂ ಇಂತಹುದೇ ಕೋವಿಡ್​ ಕೇರ್​ ಸೆಂಟರ್​ ನಿರ್ಮಾಣಗೊಳ್ಳುತ್ತಿದೆ. ಮುಂದಿನ ವಾರ ಇದು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. 10,100 ಕ್ಕೂ ಹೆಚ್ಚಿನ ಬೆಡ್​​ಗಳನ್ನ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.