ETV Bharat / bharat

ಜೆಎಂಬಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಉಗ್ರ ಅರೆಸ್ಟ್ - ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ

ಬಾಂಗ್ಲಾದೇಶ ಉಗ್ರ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್​​ನ ಪ್ರಮುಖ ನಾಯಕನ್ನು ಕೋಲ್ಕತ್ತಾ ವಿಶೇಷ ಪೊಲೀಸ್ ಪಡೆ ಬಂಧಿಸಿದೆ.

JMB terrorist arrested
ಜೆಎಂಬಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಉಗ್ರ ಅರೆಸ್ಟ್
author img

By

Published : Jun 8, 2020, 7:26 PM IST

ಕೋಲ್ಕತಾ (ಪಶ್ಚಿಮ ಬಂಗಾಳ) : ಕೊಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹೂಗ್ಲಿ ಜಿಲ್ಲೆಯಲ್ಲಿ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದನೆ ಸಂಘಟನೆಯ ಪ್ರಮುಖ ಉಗ್ರನನ್ನು ಬಂಧಿಸಿದೆ.

ಜೆಎಂಬಿ ಸಂಘಟನೆಯ ಪ್ರಮುಖ ಆಪರೇಟಿವ್ ಆಗಿರುವ ಶೇಖ್ ರೆಜಾಲ್ ಅಲಿಯಾಸ್ ಕಿರೋನ್​ನನ್ನು ಹೂಗ್ಲಿ ಜಿಲ್ಲೆಯ ಡಾಂಕುನಿ ಎಂಬಲ್ಲಿನ ಅಡಗುತಾಣದಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜೆಎಂಬಿ ಪ್ರಮುಖ ನಾಯಕರಲ್ಲಿ ಒಬ್ಬನಾದ ಸಲಾವುದ್ದೀನ್ ಅವರೊಂದಿಗೆ ಈತ ನಿಕಟವರ್ತಿಯಾಗಿದ್ದ. ಜೆಎಂಬಿ ಭಯೋತ್ಪಾದಕರ ಸಭೆಗಳನ್ನು ಇತರ ಜನರೊಂದಿಗೆ ಸಂಯೋಜಿಸುತ್ತಿದ್ದ ಈತ, ಕಳೆದ ಕೆಲ ದಿನಗಳಿಂದ ತಲೆ ಮರೆಸಿಕೊಂಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಂಧಿತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.