ಕಾಸರಗೋಡು: ಇತ್ತೀಚೆಗೆ ಇಲ್ಲಿ ವಿವಿಧ ಬಣ್ಣದ ಮಣ್ಣಿನ ಮಡಿಕೆಗಳು ಮತ್ತು ಲ್ಯಾಟರೈಟ್ ಕಲ್ಲಿನ ಶವ ಪೆಟ್ಟಿಗೆಗಳು (ಚೆಂಗಲ್ಲಾರ) ಪತ್ತೆಯಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯು ಮೆಗಾಲಿಥಿಕ್ ಯುಗದ ನಾಗರಿಕತೆಯ ಸಾವಿರಾರು ಅವಶೇಷಗಳ ನಿಧಿಯಾಗಿದೆ. ಇತಿಹಾಸಕಾರರು ಕಾಸರಗೋಡಿನ ವಿವಿಧ ಭಾಗಗಳಿಂದ ಮೆಗಾಲಿಥಿಕ್ ಯುಗದ ಲೇಖನಗಳು ಮತ್ತು ರಚನೆಗಳನ್ನು ಕಂಡುಹಿಡಿಯುತ್ತಲೇ ಬಂದಿದ್ದಾರೆ. ಕನ್ಹಂಗಾದ್ ಬಳಿಯ ಕಿನನೂರ್ - ಕರಿಂತಲಂ ಪಂಚಾಯತ್‌ನಲ್ಲಿರುವ ಭೀಮನದಿಯಲ್ಲಿ ಹಿಂದಿನ ನಾಗರಿಕತೆಯ ಹಲವು ಕುರುಹುಗಳನ್ನು ಪತ್ತೆಮಾಡಲಾಗಿದೆ. ಸದ್ಯ ಪತ್ತೆಯಾಗಿರುವ ವಿಷಯ ಸೇರಿ ಕಾಸರಗೋಡು ಜಿಲ್ಲೆಯಲ್ಲಿ ಪತ್ತೆಯಾದ ಶಿಲಾಯುಗದ ಅವಶೇಷಗಳ ಸಂಖ್ಯೆ 100 ದಾಟಿದೆ.
ಈ ಸುದ್ದಿಯನ್ನೂ ಓದಿ: ಕೈ ನಾಯಕನ ಕಾರ್ಯವೈಖರಿ ನೆನೆದು ಭಾವುಕರಾದ ಮೋದಿ: 'ಗುಲಾಮ್ಗೆ ಸಲಾಂ' ಎಂದ ಅಠಾವಳೆ
ಲ್ಯಾಟರೈಟ್ ಕಲ್ಲಿನ ಸಮಾಧಿ ಕೋಣೆ/ಪಟ್ಟಿಗೆಗಳು ಮತ್ತು ಮುನಿಯಾರಾ (ಮೆಗಾಲಿಥಿಕ್ ಯುಗದಲ್ಲಿದ್ದ ಮತ್ತೊಂದು ರೀತಿಯ ಸಮಾಧಿ ಕೋಣೆಯ/ಪೆಟ್ಟಿಗೆಯ ರಚನೆ), ಜೊತೆಗೆ ವಿವಿಧ ಬಣ್ಣ, ಆಕಾರ, ಗಾತ್ರದ ಮಣ್ಣಿನ ಮಡಿಕೆಗಳು ಕಂಡು ಬಂದಿದೆ. ಸ್ಥಳೀಯ ನಿವಾಸಿಗಳ ಮಾಹಿತಿಯ ಮೇರೆಗೆ, ಕೆಲವು ಇತಿಹಾಸಕಾರರು ಮತ್ತು ಸಂಶೋಧಕರು ಇಲ್ಲಿಗೆ ಬಂದ ಬಳಿಕ 10 ಲ್ಯಾಟರೈಟ್ ಕಲ್ಲಿನ ಸಮಾಧಿ ಪೆಟ್ಟಿಗೆಗಳನ್ನು ಪತ್ತೆಹಚ್ಚಿದ್ದಾರೆ.