ETV Bharat / bharat

ತುರ್ತು ಉಸಿರಾಟಕ್ಕೆ ಸಹಾಯ ಯಂತ್ರ ಅಭಿವೃದ್ಧಿಪಡಿಸಿದ ಕೇರಳ ಸಂಸ್ಥೆ - ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ ಸಂಸ್ಥೆ

ವೆಂಟಿಲೇಟರ್​ಗಳು ಲಭ್ಯವಿಲ್ಲದಿದ್ದಾಗ ತಾತ್ಕಾಲಿಕವಾಗಿ ನೆರವು ನೀಡಲು ಕೇರಳ ಸಂಸ್ಥೆ ತುರ್ತು ಉಸಿರಾಟದ ಸಹಾಯ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

ತುರ್ತು ಉಸಿರಾಟದ ಸಹಾಯ ಯಂತ್ರ
ತುರ್ತು ಉಸಿರಾಟದ ಸಹಾಯ ಯಂತ್ರ
author img

By

Published : Jul 7, 2020, 8:43 PM IST

ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇರುವುದರಿಂದ ಶ್ರೀ ಚಿತ್ರಾ ತಿರುಣಾಲ್ ಇನ್​ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (ಎಸ್‌ಸಿಟಿಐಎಂಎಸ್​ಟಿ)ಸಂಸ್ಥೆ ತುರ್ತು ಉಸಿರಾಟದ ಸಹಾಯ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

ಕೋವಿಡ್​ಗೆ ತುತ್ತಾದವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಅವರಿಗೆ ವೆಂಟಿಲೇಟರ್​ ಅವಶ್ಯಕತೆ ಇರುತ್ತದೆ. ಎಲ್ಲಾರಿಗೂ ವೆಂಟಿಲೇಟರ್‌ಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ವೆಂಟಿಲೇಟರ್​ ಬದಲಿಗೆ ಈ ಯಂತ್ರವನ್ನು ಬಳಸಬಹುದಾಗಿದೆ. ಸಾಂಕ್ರಾಮಿಕ ರೋಗದ ಮಧ್ಯೆ ವೆಂಟಿಲೇಟರ್‌ಗಳ ಕೊರತೆಯನ್ನು ನೀಗಿಸಲು SCTIMST ಈ ತುರ್ತು ಉಸಿರಾಟದ ಸಹಾಯ ಸಾಧನವನ್ನು ಅಭಿವೃದ್ಧಿಪಡಿಸಿದೆ.

ಈ ಯಂತ್ರವನ್ನು ಕೆಲವು ಗಂಟೆ, ಕೆಲವು ದಿನಗಳವರೆಗೆ ಪರ್ಯಾಯ ಸಾಧನವಾಗಿ ಬಳಸಿಕೊಂಡು ರೋಗಿಯನ್ನು ಸ್ಥಿರಗೊಳಿಸಬಹುದು. ಶ್ರೀ ಚಿತ್ರಾ ಜೈವಿಕ ತಂತ್ರಜ್ಞಾನ ವಿಭಾಗದ ಎಂಜಿನಿಯರ್‌ಗಳಾದ ಶರತ್, ವಿನೋದ್ ಮತ್ತು ನಾಗೇಶ್ ಮತ್ತು ಎಸ್‌ಸಿಟಿಐಎಂಎಸ್‌ಟಿಯ ಅರಿವಳಿಕೆ ವಿಭಾಗದ ವೈದ್ಯರಾದ ಪ್ರೊಫೆಸರ್ ಡಾ. ಥಾಮಸ್ ಕೋಶಿ, ಪ್ರೊಫೆಸರ್ ಡಾ. ಮಣಿಕಂದನ್ ಈ ಸಾಧನವನ್ನು ಅಭಿವೃದ್ಧಿಪಡಿಸುವಲ್ಲಿ ಕೈಜೋಡಿಸಿದ್ದಾರೆ. ತಂಡವು ಈ ಯಂತ್ರ ತಯಾರಿಕೆಗಾಗಿ ವಿಪ್ರೋ ಸಹಾಯವನ್ನು ಪಡೆದಿದೆ.

ಬ್ಯಾಗ್ ವಾಲ್ವ್ ಮಾಸ್ಕ್ ವಾತಾಯನ ತಂತ್ರವನ್ನು ಬಳಸಿ, ಯಂತ್ರವು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರಕ್ರಿಯೆಯ ಮೂಲಕ ವಾಯು ಸೇತುವೆ ಸಕಾರಾತ್ಮಕ ಗಾಳಿಯ ಒತ್ತಡವನ್ನು ಒದಗಿಸುತ್ತದೆ ಮತ್ತು ರೋಗಿಯ ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುತ್ತದೆ.

ಕನಿಷ್ಠ ವೆಚ್ಚದಲ್ಲಿ ಕಾರ್ಯನಿರ್ವಹಿಸಬಹುದಾದ ಈ ಯಂತ್ರವನ್ನು ನಿರ್ವಹಿಸಲು ವಿಶೇಷ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯ ಸಹಾಯದ ಅಗತ್ಯವಿಲ್ಲ. ಇದನ್ನು ದಾದಿಯರು ಸೇರಿದಂತೆ ಮೂಲ ಆರೋಗ್ಯ ಕಾರ್ಯಕರ್ತರು ಮಾಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.