ಕೊಚ್ಚಿ: ಕೇರಳ ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಕೊರೊನಾ ಹರಡುವುದನ್ನು ತಡೆಗಟ್ಟಲು 14 ದಿನಗಳ ಕಾಲ ಸ್ವತಃ ಹೋಂ ಕ್ಯಾರಂಟೈನ್ ಆಗಿದ್ದಾರೆ.
ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮಾರ್ಚ್ 28 ರಂದು ಕೊಚ್ಚಿಯಿಂದ ಚೆನ್ನೈನ ವೆಲ್ಚೇರಿಗೆ ರಸ್ತೆ ಮಾರ್ಗವಾಗಿ ತೆರಳಿದ್ದು ಏಪ್ರಿಲ್ 28ಕ್ಕೆ ಮರಳಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಎರಡೂ ರಾಜ್ಯಗಳ ಗೃಹ ಕಾರ್ಯದರ್ಶಿಗಳ ಚರ್ಚೆಯಲ್ಲಿ ಭಾಗವಹಿಸಲು ಅವರು ಪ್ರಯಾಣಿಸಿದ್ದರು. ಹಾಗಾಗಿ, ಚೆನ್ನೈನಲ್ಲಿದ್ದಾಗ ಅವರು ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು ಹಾಗೂ ಅವರ ವಾಹನದಲ್ಲಿದ್ದ ಅವರ ಸಿಬ್ಬಂದಿ ಕೂಡ ಎರಡು ವಾರಗಳ ಕಾಲ ಪ್ರತ್ಯೇಕ ವಾಸದಲ್ಲಿರುತ್ತಾರೆ ಎಂದು ಮೂಲಗಳು ತಿಳಿಸಿವೆ.