ಕೊಚ್ಚಿ (ಕೇರಳ): ದುಬೈನಿಂದ ಫ್ಲೈದುಬೈ ವಿಮಾನ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 275 ಗ್ರಾಂ ಚಿನ್ನವನ್ನು ಕೋಯಿಕ್ಕೋಡ್ ವಾಯು ಗುಪ್ತಚರ ಘಟಕ (ಎಐಯು) ವಶಪಡಿಸಿಕೊಂಡಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 11 ಲಕ್ಷ ಮೌಲ್ಯದ 275 ಗ್ರಾಂ ಬಂಗಾರವನ್ನ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಅಂದಾಜು 1 ಲಕ್ಷ ರೂ. ಮೌಲ್ಯದ ಚಿನ್ನದ ಜೊತೆಗೆ 1 ಲಕ್ಷ ಬೆಲೆಬಾಳುವ 1 ಕೆಜಿ ಕೇಸರಿ(ಸ್ಯಾಫ್ರನ್) ಮತ್ತು 20,000 ರೂ. ಮೌಲ್ಯದ 5,000 ಸಿಗರೇಟ್ ಸ್ಟಿಕ್ಗಳನ್ನು ಎಐಯು ವಶಕ್ಕೆ ಪಡೆದಿದೆ.
ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.