ದೆಹಲಿ: ತಮ್ಮ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅಂತಹವರ ಬಾಯಿಯನ್ನ ಮುಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗ್ತಾರೆ ಅಂತಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ. ನಿನ್ನೆ ರೋಡ್ ಶೋ ವೇಳೆ ತಮ್ಮ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೋದಿ ವಿರುದ್ಧ ಮಾತಾಡುವವರ ಬಾಯಿ ಮುಚ್ಚಿಸೋದಕ್ಕಾಗಿಯೇ ಇಂತಹ ಘಟನೆಗಳು ನಡೆಯುತ್ತವೆ ಅಂತಾ ಆರೋಪಿಸಿದ್ದಾರೆ.
ಇಂತಹ ಘಟನೆಗಳನ್ನು ಬೇಕೆಂದೆ ನಡೆಸಲಾಗುತ್ತದೆ. ಈ ರೀತಿಯ ಗೂಂಡಾಗಳನ್ನ ಕಳಿಸುವ ಉದ್ದೇಶವೇ ಮೋದಿ ವಿರುದ್ಧ ಧ್ವನಿ ಎತ್ತಿದವರ ಪಾಡು ಹೇಗಾಗುತ್ತದೆ ಎಂಬ ಸಂದೇಶ ನೀಡಲು. ಇದು ಅವರ ವಿರುದ್ಧ ಮಾತನಾಡುವ ಪ್ರತಿ ವ್ಯಕ್ತಿಯ ಬಾಯಿಯನ್ನೂ ಮುಚ್ಚಲಾಗುತ್ತದೆ ಎಂದು ಸ್ಪಷ್ಟವಾಗಿತ್ತದೆ.
ಇದೇನು ಮೊದಲ ಬಾರಿಯಲ್ಲ. ಈ 5 ವರ್ಷದ ಅವಧಿಯಲ್ಲಿ ಇದು 9ನೇ ಬಾರಿ ನನ್ನ ಮೇಲೆ ಹಲ್ಲೆ ನಡೆದಿದೆ. ಈ ತರಹ ರಾಜ್ಯದ ಮುಖ್ಯಮಂತ್ರಿಯ ಮೇಲೆಯೇ ಹಲ್ಲೆ ನಡೆದ ನಿದರ್ಶನ ದೇಶದ ಇತಿಹಾಸದಲ್ಲಿ ಇನ್ನೊಂದಿಲ್ಲ ಎನ್ನಬಹುದು. ಮುಖ್ಯಮಂತ್ರಿಯ ಸೆಕ್ಯುರಿಟಿಗಳ ಮೇಲೆ ಬಿಜೆಪಿಯಂತ ವಿರೋಧ ಪಕ್ಷ ಹಿಡಿತ ಸಾಧಿಸುತ್ತಿರುವುದು ದೆಹಲಿಯಲ್ಲೇ ಮೊದಲಿರಬಹುದು ಎಂದು ವಿಷಾದ ವ್ಯಕ್ತಪಡಿಸಿದರು.