ETV Bharat / bharat

ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಹೊರಟಿದ್ದನಂತೆ ಕಸಬ್​!

26/11 ಮುಂಬೈ ಭಯೋತ್ಪಾದಕ ದಾಳಿಯನ್ನು 'ಹಿಂದೂ ಭಯೋತ್ಪಾದನೆ' ಪ್ರಕರಣ ಎಂದು ಬಿಂಬಿಸಲು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯೋಜಿಸಿತ್ತು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರು ತಮ್ಮ 'ಲೆಟ್ ಮಿ ಸೇ ಇಟ್ ನೌ' (Let Me Say It Now) ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.

'Kasab was to die as Hindu with sacred red thread around wrist'
ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಹೊರಟ್ಟಿದ್ದ ಕಸಬ್
author img

By

Published : Feb 18, 2020, 10:01 PM IST

ಮುಂಬೈ: 26/11 ಮುಂಬೈ ಭಯೋತ್ಪಾದಕ ದಾಳಿಯನ್ನು 'ಹಿಂದೂ ಭಯೋತ್ಪಾದನೆ' ಪ್ರಕರಣ ಎಂದು ಬಿಂಬಿಸಲು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯೋಜಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ.

ಅವರು ತಮ್ಮ 'ಲೆಟ್ ಮಿ ಸೇ ಇಟ್ ನೌ' (Let Me Say It Now) ಆತ್ಮಕಥನದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಪಾಕಿಸ್ತಾನದ ಉಗ್ರ ಮೊಹಮ್ಮದ್​ ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ದಿನೇಶ್​ ಚೌಧರಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಯಲು ಪ್ರಯತ್ನಗಳು ನಡೆದಿದ್ದವು. ಇದಕ್ಕೆ ಪಾಕಿಸ್ತಾನ ಬೆಂಬಲ ಸಹ ಇತ್ತು ಎಂದು ಹೇಳಿದ್ದಾರೆ.

ದಾಳಿಗೂ ಮುನ್ನ ಕಸಬ್ ತನ್ನ ಕೈಗೆ ಕೇಸರಿ ದಾರವನ್ನು ಧರಿಸಿದ್ದ. ಅದು ಪವಿತ್ರ ಹಿಂದೂ ದಾರ. ಹೀಗಾಗಿ ಇದೊಂದು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಬಹುದು ಎಂದುಕೊಂಡಿದ್ದ ಕಸಬ್​. ಅಂದು ಎಲ್ಲವೂ ಅಂದುಕೊಂಡಂತೆ ಜರುಗಿದ್ದರೆ, ಬೆಂಗಳೂರು ನಿವಾಸಿ ಸಮೀರ್ ಅವರಂತೆ ಕಸಬ್ ಸಾವಿಗೀಡಾಗಬಹುದಿತ್ತು. ಮತ್ತು ಈ ದಾಳಿಗೆ ಮಾಧ್ಯಮಗಳು 'ಹಿಂದೂ ಭಯೋತ್ಪಾದಕ' ಎಂದು ದೂಷಿಸುತ್ತಿದ್ದವು. ಭಯೋತ್ಪಾದಕರ ಬಳಿ ನಕಲಿ ವಿಳಾಸಗಳ ಗುರುತಿನ ಚೀಟಿಗಳು ಆತನ ಬಳಿ ಇದ್ದವು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

'Kasab was to die as Hindu with sacred red thread around wrist'
ಕೈಯಲ್ಲಿ ಕೇಸರಿ ದಾರ

ಕೈಗೆ ಕೆಂಪು ದಾರ ಕಟ್ಟಿಕೊಂಡಿದ್ದ ಕಸಬ್​ನ ಚಿತ್ರವೊಂದು ಕೇಂದ್ರ ತನಿಖಾ ಸಂಸ್ಥೆಗಳು ಹಂಚಿಕೊಂಡಿವೆ ಎಂದು ಮಾಧ್ಯಮಗಳು ಈ ದಾಳಿಗೆ ಹಿಂದೂಗಳು ಹೇಗೆ ಕಾರಣರಾಗುತ್ತಾರೆ ಎಂದು ವರದಿ ಮಾಡಿದ್ದವು. ಸಮೀರ್​ ಕುಟುಂಬ ಸದಸ್ಯರ ಸಂದರ್ಶನವನ್ನೂ ಮಾಧ್ಯಮಗಳು ಬಿತ್ತರಿಸಿದ್ದವು.

ಮುಂಬೈ ದಾಳಿ ವೇಳೆ ಕಸಬ್​​ನನ್ನು ಹುತಾತ್ಮ ಮುಂಬೈ ಕಾನ್ಸ್​ಟೇಬ​ಲ್ ತುಕಾರಾಮ್​ ಓಂಬ್ಳೆ ಅವರು ಜೀವಂತವಾಗಿ ಸೆರೆಹಿಡಿದರು. ಸೆರೆ ಸಿಕ್ಕ ಅಜ್ಮಲ್‌ ಕಸಬ್‌ ನಕಲಿ ಗುರುತಿನ ಚೀಟಿ ಹೊಂದಿದ್ದ. ಅದರಲ್ಲಿ ಆತನ ಹೆಸರು ಸಮೀರ್‌ ದಿನೇಶ್​ ಚೌಧರಿ ಎಂದು ನಮೂದಾಗಿತ್ತು. ಬೆಂಗಳೂರಿನ ವಿಳಾಸ ಹೊಂದಿತ್ತು. ಬಳಿಕ ಈತನ ನಿಜವಾದ ರೂಪ ಬಯಲಾಯಿತು ಎಂದು ಉಲ್ಲೇಖಿಸಿದ್ದಾರೆ. ಕಸಬ್​ ದರೋಡೆಕೋರನಾಗಿ ಎಲ್ಇಟಿ ಸೇರಿಕೊಂಡ. ಜಿಹಾದಿಗೂ ತನಗೂ ಸಂಬಂಧವಿಲ್ಲ ಎಂದು ಬಿಂಬಿಸಿದ್ದ. ಭಾರತದಲ್ಲಿ ಮುಸ್ಲಿಮರಿಗೆ ನಮಾಜ್​ ಮಾಡಲು ಅವಕಾಶ ನೀಡುತ್ತಿಲ್ಲವೆಂದು ಎಲ್​ಇಟಿ ಈತನ ತಲೆ ಕೆಡಿಸಿತ್ತು.

ಮುಂಬೈ ದಾಳಿಗೂ ಮುನ್ನ ಎಲ್​ಇಟಿ ಕಸಬ್​ಗೆ ಒಂದು ವಾರ ರಜೆ ಮತ್ತು 1.25 ಲಕ್ಷ ರೂಪಾಯಿ ಹಣ ಕೊಟ್ಟಿತ್ತು. ಈ ಹಣವನ್ನು ತನ್ನ ಸಹೋದರಿ ಮದುವೆಗೆ ಕಸಬ್​ ನೀಡಿದ್ದ ಎಂದೂ ಪುಸ್ತಕದಲ್ಲಿ ಮಾಜಿ ಪೊಲೀಸ್​ ಆಯುಕ್ತರು ಬರೆದಿದ್ದಾರೆ.

ಭಾರತದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ 2008ರ ನವೆಂಬರ್ 26ರಂದು ಮುಂಬೈನಲ್ಲಿ ಪಾಕಿಸ್ತಾನದ 10 ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ ದಾಳಿ ಕರಿಛಾಯೆ ಆಗಿದೆ. ಈ ದಾಳಿಯಲ್ಲಿ ಸಹವರ್ತಿ ಇಸ್ಮಾಯಿಲ್​ ಖಾನ್​ ಜೊತೆ ಕಸಬ್​ 72 ಜನರನ್ನು ಕೊಂದಿದ್ದ. ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡರು. ದಾಳಿಯ ವೇಳೆ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಭಯೋತ್ಪಾದಕ ಕಸಬ್​​ನನ್ನು 2012ರ ನವೆಂಬರ್ 21ರಂದು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.