ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ವಿಪರೀತ ಏರಿಕೆ ಕಾಣುತ್ತಿದೆ. ಪರಿಣಾಮ ಸರ್ಕಾರ ಪಾಸಿಟಿವ್ ಕೇಸ್ಗಳ ನಿಯಂತ್ರಣಕ್ಕೆ ಭಾರಿ ಹರಸಾಹಸ ಪಡುತ್ತಿದೆ.
ಈ ನಡುವೆ ನಿನ್ನೆ ರಾತ್ರಿ ಎಂಟರಿಂದಲೇ ಸೆಕ್ಷನ್ 144 ಜಾರಿಯಾಗಿದ್ದು, ರಾತ್ರಿ ಕಾವಲನ್ನ ಪೊಲೀಸರು ತೀವ್ರಗೊಳಿಸಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ನಿನ್ನೆ ಬೆಂಗಳೂರು ನಗರದಲ್ಲಿ ಪೊಲೀಸರು ಚುರುಕಾಗಿದ್ದರು. ರಾತ್ರಿ ಎಂಟು ಗಂಟೆ ಮೇಲೆ ಬೇಕಾಬಿಟ್ಟಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ನಗರದ ಬಹುತೇಕ ಕಡೆ ರಾತ್ರಿ ಅನಗತ್ಯವಾಗಿ ಓಡಾಡುವವರನ್ನ ತಡೆದು ವಿಚಾರಣೆ ನಡೆಸುತ್ತಿರುವ ದೃಶ್ಯಗಳು ಕಂಡು ಬಂದವು.