ತಿರುವನಂತಪುರಂ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬ ಸಮೇತರಾಗಿ ಕೇರಳಕ್ಕೆ ಪ್ರಯಾಣ ಕೈಗೊಂಡಿದ್ದು, ವಿಶೇಷ ಹೋಮ-ಹವನಗಳಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನಿಂದ ಕೇರಳಕ್ಕೆ ಅವರು ಕುಟುಂಬ ಸಮೇತರಾಗಿ ಪ್ರಯಾಣ ಬೆಳಸಿ, ಈಗಾಗಲೇ ತಿರುವನಂತಪುರದ ಅನಂತಪದ್ಮನಾಭ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದ್ದು, ಇದೇ ವೇಳೆ ಕೇರಳದ ವಿಶೇಷ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಮುಂದಿನ 3 ವರ್ಷಗಳ ಕಾಲ ಸರ್ಕಾರ ಸುಸ್ಥಿರವಾಗಿ ನಡೆದುಕೊಂಡು ಹೋಗುವ ಉದ್ದೇಶದಿಂದ ಈ ವಿಶೇಷ ಪೂಜೆಯಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.