ETV Bharat / bharat

ಗಂಡ ದೇಶಕ್ಕಾಗೇ ಹುತಾತ್ಮ.. ಧೃತಿಗೆಡದೆ ಸಣ್ಣ ಮಗು ಬಿಟ್ಟು ಸೇನೆ ಸೇರಿದಳು 'ವೀರನಾರಿ'.. - ಹುತಾತ್ಮ ಯೋಧನ ಪತ್ನಿ

ಕೈಯಲ್ಲಿ 4 ವರ್ಷದ ಮಗು, ಹೃದಯದಲ್ಲಿ ಯೋಧನಾಗಿದ್ದ ಪತಿ ಕಳೆದುಕೊಂಡ ದುಃಖ. ಮನಸ್ಸಲ್ಲಿ ಹೇಳಲಾರದಷ್ಟು ನೋವು, ಸಮಾಜವನ್ನು ಸಮರ್ಥವಾಗಿ ಎದುರಿಸಬೇಕಾದ ಸವಾಲು, ದೇಶ ಸೇವೆ ಮಾಡಲೇಬೇಕೆಂಬ ತುಡಿತ. ಇದು ಹುತಾತ್ಮ ವೀರ ಯೋಧ ಕೌಸ್ತುಭ್ ರಾಣೆಯ ಪತ್ನಿ ಕನಿಕಾ ರಾಣೆಯ ವ್ಯಥೆಯಾಗಿತ್ತು. ಬೆಟ್ಟದಷ್ಟು ಸವಾಲುಗಳಿದ್ದರೂ ಎದುರಿಸಿದ ಈ 'ವೀರ ನಾರಿ'ಯ ಹೃದಯ ಮಾತ್ರ ದೇಶ ಸೇವೆಗೆ ಪ್ರತಿ ಕ್ಷಣ ತುಡಿಯುತ್ತಿತ್ತು.

ದೇಶ ಸೇವೆಗೆ ತೊಡೆ ತಟ್ಟಿ ನಿಂತಳು ಹುತಾತ್ಮ ಯೋಧನ ಪತ್ನಿ
author img

By

Published : Aug 17, 2019, 5:53 PM IST

ಹೈದರಾಬಾದ್​: ದೇಶ ಕಾಯುತ್ತಿದ್ದ ವೀರ ಯೋಧನ ಪತ್ನಿಯೊಬ್ಬಳು, ತನ್ನ ಪತಿ ಹುತಾತ್ಮನಾದ ನೋವಿದ್ದರೂ, ದೇಶಕ್ಕಾಗಿ ಆತನ ಸ್ಥಾನ ತುಂಬಲು ಸಜ್ಜಾಗಿದ್ದಾಳೆ. ಅದಕ್ಕಾಗಿ ಬೇಕಾದ ಎಲ್ಲಾ ಅರ್ಹತೆಯನ್ನೂ ಪಡೆದುಕೊಂಡಿದ್ದಾಳೆ.

Kanika Rane all set to join the Indian Army
ತನ್ನ ಪುಟ್ಟ ಮಗುವಿನೊಂದಿಗೆ ಕನಿಕಾ ರಾಣೆ

ಈಕೆಯ ಹೆಸರು ಕನಿಕಾ ರಾಣೆ. ಕಳೆದ ಒಂದು ವರ್ಷದ ಹಿಂದೆ ದೇಶ ಕಾಯುತ್ತಿದ್ದ ಈಕೆಯ ಪತಿ, ವೀರ ಯೋಧ ಕೌಸ್ತುಭ್ ರಾಣೆ, ಉತ್ತರ ಕಾಶ್ಮೀರದ ಗಡಿ ರೇಖೆಯಲ್ಲಿ​ ನಡೆದ ಉಗ್ರರ ಜತೆಗಿನ ಕಾಳಗದಲ್ಲಿ ಹುತಾತ್ಮನಾಗಿದ್ದರು. ಅದಕ್ಕೂ ಮೊದಲೇ ಇಬ್ಬರು ಉಗ್ರರನ್ನ ನೆಲಕ್ಕುರುಳಿಸಿದ್ದರು. ಪತಿ ದೇಶಕ್ಕಾಗಿ ಪ್ರಾಣ ಬಿಟ್ಟಾಗ ಮಡದಿ ಕೈಯಲ್ಲಿ ಆಗ ಪುಟ್ಟ ಮಗುವಿತ್ತು. ಭಾರತಾಂಬೆಗಾಗಿ ತನ್ನನ್ನು ಮುಡಿಪಾಗಿಟ್ಟ ಗಂಡನನ್ನು ಕಳೆದುಕೊಂಡ ನೋವು ಆಕೆಯನ್ನು ಕಣ್ಣೀರಲ್ಲಿ ಕೈತೊಳೆಸಿತ್ತು. ಮನಸ್ಸಲ್ಲಿ ಹೇಳಲಾರದಷ್ಟು ನೋವು-ಅಸಹಾಯಕತೆ ಮನೆಮಾಡಿತ್ತು. ಆ ನಡುವೆಯೂ ದೇಶ ಸೇವೆ ಮಾಡಲೇಬೇಕೆಂಬ ಆಕೆಯ ಮನದ ತುಡಿತ ಮಾತ್ರ ಇಂದು ಆಕೆಯನ್ನು ಹೆಮ್ಮೆಯ ಭಾರತ ಸೇನೆಗೆ ಸೇರಲು ಸಜ್ಜಾಗುವಂತೆ ಮಾಡಿದೆ.

ವೀರ ಯೋಧ ಕೌಸ್ತುಭ್ ರಾಣೆ

ಕನಿಕಾ ರಾಣೆ ಭಾರತೀಯ ಸೇನೆಗೆ ಎಂಟ್ರಿ ಕೊಡೋಕೆ ಟೊಂಕ ಕಟ್ಟಿ ನಿಂತಿದ್ದಾರೆ. ಇದಕ್ಕಾಗಿ ಎಲ್ಲಾ ಅರ್ಹತೆ ಹಾಗೂ ಸಿದ್ಧತೆಗಳನ್ನೂ ಮುಗಿಸಿದ್ದಾರೆ. ಕನಿಕಾ ಈಗಾಗಲೇ ಸೇವಾ ಆಯ್ಕೆ ಮಂಡಳಿಯ ಪರೀಕ್ಷೆಯಲ್ಲಿ ಮೆರಿಟ್​ನೊಂದಿಗೆ ಪಾಸ್​ ಆಗಿದ್ದಾರೆ. ಅದಾದ ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್​ಡಿಎ)ಯಲ್ಲಿ 49 ವಾರಗಳ ತರಬೇತಿಯನ್ನೂ ಸಹ ಮುಗಿಸಿದ್ದಾರೆ.

ಕೌಸ್ತುಭ್ ರಾಣೆ - ಕನಿಕಾ ರಾಣೆ

ಈ ಬಗ್ಗೆ ಖಾಸಗಿ ದಿನಪತ್ರಿಕೆಯೊಂದಕ್ಕೆ ತಮ್ಮ ಅಭಿಪ್ರಾಯ ತಿಳಿಸಿರುವ ಕನಿಕಾ, ನನ್ನ ಪತಿ ಯಾವಾಗಲೂ, ಜೀವನ ನಿಮ್ಮನ್ನು ಕೆಳಗೆ ತಳ್ಳಲು ಪ್ರಯತ್ನಪಟ್ಟರೆ, ನೀವು ಮತ್ತೆ ಪುಟಿದೇಳಬೇಕು. ಸವಾಲುಗಳನ್ನ ಹಿಮ್ಮೆಟ್ಟಿಸಲು ಸದಾ ಸಜ್ಜಾಗಿರಬೇಕು ಎಂದು ಹೇಳುತ್ತಿದ್ದರು ಎಂದು ತಮ್ಮ ಪತಿಯ ಮಾತನ್ನು ನೆನೆಸಿಕೊಳ್ಳುತ್ತಾರೆ.

'ವೀರನಾರಿ'

ತಮ್ಮ ಸ್ವಇಚ್ಛೆಯಿಂದಲೇ ಕನಿಕಾ ತಮ್ಮ 4 ವರ್ಷದ ಮಗನನ್ನು ಕೂಡಾ ದೇಶಕ್ಕಾಗಿ ಸಜ್ಜುಗೊಳಿಸುತ್ತಿದ್ದಾರೆ. ನೋವು, ಸವಾಲುಗಳು ಸಾವಿರವಿದ್ದರೂ, ದೇಶಕ್ಕಾಗಿ ತನ್ನ ಪತಿಯ ಹಾದಿಯಲ್ಲೇ ಮುಂದುವರಿಯುತ್ತಿರುವ ಈ ದಿಟ್ಟ ನಾರಿ ಹಾಗೂ ಇವರಂತಹ ನೂರಾರು ಇತರ ಮಹಿಳೆಯರ ತ್ಯಾಗಕ್ಕೆ ಸೆಲ್ಯೂಟ್​ ಹೊಡೆಯಲೇಬೇಕಲ್ವಾ..

Intro:Body:

It's been a whole year since Major Kaustubh Rane was martyred during an encounter on the Line of Control (LoC) in North Kashmir's Gurez sector of Bandipora district. 

And now, carrying forward the legacy of her late husband, Kanika has decided to join the Indian Army. 

According to a Mirror Now report, Kanika recently cleared the Service Selection Board exam with merit and is gearing up to commence her service to the nation after a 49-week training at the National Defence Academy (NDA).

Speaking to the Daily, Kanika, who is addressed as Veer Nari after the passing of her husband said,'Kaustubh used to say that if life pushes you down, you always have the harness to pull yourself back,'

It's been an extremely tough year for Kanika Rane and through all the trials and tribulations, she has set her heart and channeled all her energy into paying a tribute to her husband who served the nation by joining the army. 

During the firing broke out at the LoC when a group of armed militants attempted to infiltrate the Indian territory. While prompt response by the soldiers foiled the infiltration attempt, India lost four brave Army men in the exchange of gunfire. 29-year-old Kaustubh is known as the 'Kohinoor' of the Army's 36 Rashtriya Rifles unit. 

Kanika is also raising her four-year-old son on her own. This Independence Day we salute the grit and courage of Kanika and hundreds of other women who have gone through the same pain of sacrificing their loved ones for the country. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.