ETV Bharat / bharat

ಕಂಗನಾ ಡ್ರಗ್ಸ್​ ಸೇವಿಸಿದ ಆರೋಪ: ತನಿಖೆ ನಡೆಸಲಾಗುವುದು ಎಂದ ಅನಿಲ್​ ದೇಶ್​​ಮುಖ್​!

ಮನಾಲಿಯಲ್ಲಿರುವ ನಟಿ ಕಂಗನಾ ರಣಾವತ್​ ನಾಳೆ ಮುಂಬೈಗೆ ಆಗಮಿಸುತ್ತಿದ್ದು,ಇದರ ಮಧ್ಯೆ ತಮ್ಮ ಮೇಲೆ ಕೇಳಿ ಬಂದಿರುವ ಡ್ರಗ್ಸ್​ ಆರೋಪದ ಬಗ್ಗೆ ಮಾತನಾಡಲು ಅವರು ಹಿಂದೇಟು ಹಾಕಿದ್ದಾರೆ.

Kangana Ranaut
Kangana Ranaut
author img

By

Published : Sep 8, 2020, 3:16 PM IST

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದೀಗ ಡ್ರಗ್ಸ್​ ಸೇವನೆ ಮಾಡಿರುವ ಆರೋಪದ ಮೇಲೆ ಅವರನ್ನ ವಿಚಾರಣೆಗೊಳಪಡಿಸಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ಹೇಳಿದ್ದಾರೆ.

ಕಂಗನಾ ವಿರುದ್ಧ ತನಿಖೆ ಎಂದ ಗೃಹ ಸಚಿವ ದೇಶ್​ಮುಖ್​​

ಕಂಗನಾ ಡ್ರಗ್ಸ್​ ಸೇವಿಸಿದ ಆರೋಪದ ಮೇಲೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಹೇಳಿರುವ ಗೃಹ ಸಚಿವರು, ಅಭಯನ್​ ಸುಮನ್​​ ಅವರು ನಟಿಯ ಮೇಲೆ ಗಂಭೀರ ಆರೋಪ ಮಾಡಿದ್ದರಿಂದ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸುಮನ್​ ಅವರು ಕಂಗನಾ ಡ್ರಗ್ಸ್​ ತೆಗೆದುಕೊಳ್ಳುವುದಾಗಿ ಹಾಗೂ ತಮಗೂ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಕ್ರಮ ನಿರ್ಮಾಣ ಆರೋಪ: ಕಂಗನಾ ಕಚೇರಿ ಸೀಲ್ ಮಾಡಿದ ಬಿಎಂಸಿ

ಇದರ ಮಧ್ಯೆ ಮುಂಬೈನ ಉಪನಗರದ ಬಾಂದ್ರಾದ ಪಾಲಿಹಿಲ್​​ ಪ್ರದೇಶದಲ್ಲಿರುವ ಕಂಗನಾ ರಣಾವತ್​​ ಅವರ ಕಚೇರಿಯನ್ನ ಬೃಹತ್​ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್​​ ಸೀಲ್​ ಮಾಡಿದೆ. ನಿಯಮ ಮೀರಿ ಕಚೇರಿ ನಿರ್ಮಾಣ ಮಾಡಿದ್ದಾರೆ ಎಂದ ಆರೋಪದ ಮೇಲೆ ನೋಟಿಸ್​ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕಂಗಾನಾ ಪ್ರತಿಕ್ರಿಯೆ ನೀಡಲು ನಿರಾಕರಣೆ

ಪ್ರತಿಕ್ರಿಯೆ ನೀಡಲು ಕಂಗನಾ ನಿರಾಕರಣೆ

ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ನಟಿ ಕಂಗನಾ ರಣಾವತ್​ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾವುದೇ ಉತ್ತರ ನೀಡುವುದಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.