ETV Bharat / bharat

ಅಮೆರಿಕ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್​ ಆಯ್ಕೆ; ತಮಿಳುನಾಡಿನ ಗ್ರಾಮದಲ್ಲಿ ಸಂಭ್ರಮ - ಅಮೆರಿಕ ಅಧ್ಯಕ್ಷೀಯ ಚುನಾವಣೆ

ಕಳೆದ ಆಗಸ್ಟ್​ 12ರಂದು, ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್​ ಆಗಿರುವ ಕಮಲಾ ಹ್ಯಾರಿಸ್​ ಅವರನ್ನು ಉಪಾಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಜೋ ಬಿಡೆನ್​ ಘೋಷಿಸಿದ್ದಾರೆ. ಹೀಗಾಗಿ ಕಮಲಾ ಹ್ಯಾರಿಸ್​ ಅವರ ಪೂರ್ವಜರು ಬಾಳಿ ಬದುಕಿರುವ ತಮಿಳುನಾಡಿನ ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

Kamala Harris
ಕಮಲಾ ಹ್ಯಾರಿಸ್
author img

By

Published : Aug 16, 2020, 2:40 PM IST

Updated : Aug 16, 2020, 3:05 PM IST

ತಿರುವಾವೂರ್ ​(ತಮಿಳುನಾಡು): ಜಿಲ್ಲೆಯ ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲೀಗ ಹಬ್ಬದ ವಾತಾವರಣವಿದೆ. ಗ್ರಾಮದೆಲ್ಲೆಡೆ ಸಂಭ್ರಮವೋ ಸಂಭ್ರಮ. ಈ ಗ್ರಾಮ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವುದೇ ಇದಕ್ಕೆ ಕಾರಣ.

Kamala Harris
ಕಮಲಾ ಹ್ಯಾರಿಸ್

ಇದೇ ವರ್ಷದ ನವೆಂಬರ್​ ತಿಂಗಳಿನಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆ​ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಡೆಮಾಕ್ರೆಟಿಕ್ ಪಕ್ಷದಿಂದ ಸ್ಪರ್ಧಿಸಲಿರುವ ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್​, ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್​ ವಿರುದ್ಧ ಸ್ಪರ್ಧಿಸಲು ತೊಡೆ ತಟ್ಟಿ ನಿಂತಿದ್ದಾರೆ. ಇದಲ್ಲದೆ ಇದಕ್ಕಾಗಿ ಭಾರಿ ಸಿದ್ಧತೆಯನ್ನು ನಡೆಸಿದ್ದಾರೆ.

ಕಳೆದ ಆಗಸ್ಟ್​ 12ರಂದು, ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಕ್ಯಾಲಿಫೋರ್ನಿಯಾ ಕ್ಷೇತ್ರದ ಸೆನೆಟರ್​ ಆಗಿರುವ ಕಮಲಾ ಹ್ಯಾರಿಸ್​ ಅವರನ್ನು ಉಪಾಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಬಿಡೆನ್​ ಘೋಷಿಸಿದ್ದಾರೆ. ಕಪ್ಪು ಜನರ ಮತಗಳನ್ನು ಆಕರ್ಷಿಸುವಲ್ಲಿ ಬಿಡೆನ್​ ಅವರ ಈ ನಿರ್ಧಾರ ಮಹತ್ವದ್ದಾಗಲಿದೆ ಎಂದು ಹೇಳಲಾಗಿದೆ. ಬಿಡೆನ್​ ಅವರ ಈ ನಿರ್ಧಾರವೇ ತಮಿಳುನಾಡಿನ ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಲು ಕಾರಣವಾಗಿದೆ.

Kamala Harris
ಹ್ಯಾರಿಸ್​ ಕುಟುಂಬಸ್ಥರು ಪೂಜಿಸುತ್ತಾ ಬರುತ್ತಿದ್ದ ದೇಗುಲ

ಕಮಲಾ ಹ್ಯಾರಿಸ್​ ಅವರ ಅಜ್ಜಿ(ತಾಯಿಯ ತಾಯಿ) ಇದೇ ಗ್ರಾಮದವರು. ಹೀಗಾಗಿ ನಮ್ಮೂರಿನ ಹೆಣ್ಣು ಮಗಳು ಅಮೆರಿಕದಲ್ಲಿ ಉನ್ನತ ಸ್ಥಾನಕ್ಕೇರುತ್ತಿರುವುದು ಹೆಮ್ಮೆ ಹಾಗೂ ಸಂತಸದ ವಿಷಯವೆಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಕ್ಕೆ ಪ್ರವೇಶಿಸುವ ರಸ್ತೆಗಳ ಬದಿಯಲ್ಲಿ ಕಮಲಾ ಹ್ಯಾರಿಸ್​ಗೆ ಶುಭಕೋರಿರುವ ಫ್ಲೆಕ್ಸ್​ ಹಾಗೂ ಬ್ಯಾನರ್​ಗಳು ರಾರಾಜಿಸುತ್ತಿವೆ. ಹ್ಯಾರಿಸ್​ ನಮ್ಮ ಮಣ್ಣಿನ ಹೆಮ್ಮೆಯ ಮಗಳು ಎಂದೇ ಈ ಗ್ರಾಮದ ಪ್ರತಿಯೊಬ್ಬರು ಉದ್ಘರಿಸುತ್ತಿದ್ದಾರೆ.

ಪೈಂಗಾಡು ತುಲಸೇಂದ್ರಪುರಂ ಗ್ರಾಮದಲ್ಲಿ ಸಂಭ್ರಮ

ಹ್ಯಾರಿಸ್ ಅವರ ತಾತ ವಿ.ಟಿ.ಗೋಪಾಲನ್, ಸರ್ಕಾರಿ ಹುದ್ದೆಯಲ್ಲಿದ್ದರು. ಅವರ ಅಜ್ಜಿ ರಾಜಮ್ ಕೂಡಾ ಇದೇ ಗ್ರಾಮದ ನಿವಾಸಿ. ಇದೇ ಗ್ರಾಮದಲ್ಲಿ ಹ್ಯಾರಿಸ್​ ಅವರ ಪೂರ್ವಜರ ಮನೆಯೂ ಇದೆ. ಅವರ ಕುಟುಂಬ ಆರಾಧಿಸುತ್ತಾ ಬಂದಿದ್ದ ದೇವಾಲಯವೂ ಇದೆ. ಸದ್ಯ ಹ್ಯಾರಿಸ್​ ಅವರು ಸಪ್ತಸಾಗರದಾಚೆಗಿನ ದೇಶದಲ್ಲಿ ಉನ್ನತ ಸ್ಥಾನಕ್ಕೇರುತ್ತಿರುವುದು ಅವರ ಕುಟುಂಬಸ್ಥರು ಹಾಗೂ ಗ್ರಾಮದವರಿಗೆ ಎಲ್ಲಿಲ್ಲದ ಸಂತಸ ತರಿಸಿದೆ.

Last Updated : Aug 16, 2020, 3:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.