ನವದೆಹಲಿ: ಮಧ್ಯಪ್ರದೇಶ ಸರ್ಕಾರ ಉರುಳುವ ಹಂತದಲ್ಲಿದೆ. 16ಕ್ಕೂ ಹೆಚ್ಚು ಶಾಸಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಸಿಎಂ ಕಮಲನಾಥ್ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಮಾಡ್ತಿದ್ದಾರೆ. ಮತ್ತೊಂದೆಡೆ ಜ್ಯೋತಿರಾದಿತ್ಯ ಸಿಂದಿಯಾ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿದ್ದು, ಭಾರಿ ಬೆಳವಣಿಗೆಗೆ ಕಾರಣವಾಗಿದೆ.
ಪ್ರಧಾನಿ ನಿವಾಸಕ್ಕೆ ಬಂದಿರುವ ಜ್ಯೋತಿರಾದಿತ್ಯ ಸಿಂದಿಯಾ ಪಕ್ಷ ಸೇರ್ಪಡೆ ಆಗುವ ಸಂಬಂಧ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಿಎಂ ನಿವಾಸದಲ್ಲಿ ಗೃಹ ಸಚಿವ ಅಮಿತ್ ಶಾ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
25ಕ್ಕೂ ಹೆಚ್ಚು ಶಾಸಕರು ಕಮಲ್ನಾಥ್ ಸರ್ಕಾರದ ವಿರುದ್ಧ ಬಂಡಾಯ ಎದಿದ್ದು, ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಇವರೆಲ್ಲ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಬೆಂಬಲಿಗರು ಎಂದು ತಿಳಿದು ಬಂದಿದೆ.
ಅಜ್ಜಿ ವಿಜಯರಾಜೇ ಸಿಂಧಿಯಾ ಬಿಜೆಪಿ ನಾಯಕಿ ಆಗಿದ್ದವರು. ಅತ್ತೆ ವಸುಂಧರಾ ರಾಜೆ ರಾಜಸ್ಥಾನದ ಮಾಜಿ ಸಿಎಂ ಆಗಿದ್ದವರು. ಜ್ಯೋತಿರಾದಿತ್ಯ ಸಿಂದಿಯಾ ತಂದೆ ಮಾಧವರಾವ್ ಸಿಂದಿಯಾ ಕಾಂಗ್ರೆಸ್ ನಾಯಕರಾಗಿದ್ದರು. ಹೀಗಾಗಿ ಪುತ್ರ ಸಹ ಮಧ್ಯಪ್ರದೇಶದಮಾಸ್ ಲೀಡರ್ ಆಗಿ ಬೆಳವಣಿಗೆ ಹೊಂದಿದ್ದರು. ಪಕ್ಷದ ಗೆಲುವಿಗೆ ಕಾರಣರಾಗಿದ್ದ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನ ಕಾಂಗ್ರೆಸ್ ಕಡೆಗಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಬೇಸರಗೊಂಡಿದ್ದರು.