ನವದೆಹಲಿ: ಪ್ರಗತಿಪರ ಹೋರಾಟಗಾರಕನ್ಹಯ್ಯಾ ಕುಮಾರ್ ಸೇರಿದಂತೆ ಇನ್ನಿತರರ ಮೇಲೆ ದಾಖಲಾಗಿರುವ ದೇಶ ದ್ರೋಹ ಪ್ರಕರಣ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ದೆಹಲಿ ಸರ್ಕಾರ ಒಂದು ತಿಂಗಳ ಸಮಯಾವಕಾಶ ಕೋರಿದೆ.
2016 ರಲ್ಲಿ ಜೆಎನ್ಯು ಕ್ಯಾಂಪಸ್ನಲ್ಲಿ ಅಫ್ಜಲ್ ಗುರು ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎಂಬ ಆರೋಪ ಕನ್ಹಯ್ಯಾ ಕುಮಾರ್ ಸೇರಿ ಇನ್ನಿತರರ ಮೇಲೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ದೆಹಲಿ ಪೊಲೀಸರು ಇತ್ತೀಚೆಗೆ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.
ಈ ಬಗ್ಗೆ ಇಂದು ವಿಚಾರಣೆ ಕೈಗೆತ್ತಿಕೊಂಡ ಚೀಫ್ ಮೆಟ್ರೋಪಾಲಿಟಿಯನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್, ಎಎಪಿ ಸರ್ಕಾರಕ್ಕೆ ನಿರ್ದಿಷ್ಟ ಸಮಯದೊಳಗೆ ಸರಿಯಾದ ಪ್ರತ್ಯುತ್ತರ ನೀಡುವಂತೆ ನಿರ್ದೇಶನ ನೀಡಿದರು.
ದೆಹಲಿ ವಿಶೇಷ ತನಿಖಾ ದಳದ ಡಿಸಿಪಿ ವಿಚಾರಣೆಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ವಿಚಾರಣೆಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.