ETV Bharat / bharat

ಪ್ಲಾಸ್ಟಿಕ್‌ ನಿರ್ಮೂಲನೆಗೆ 'ಯುಟೆನ್ಸಿಲ್‌ ಬ್ಯಾಂಕ್‌' ಆರಂಭಿಸಿದ ಜುಗ್‌ಸಲೈ ಪುರಸಭೆ!

author img

By

Published : Jan 18, 2020, 2:50 AM IST

ದೇಶದಲ್ಲಿ ಪ್ಲಾಸ್ಟಿಕ್‌ ಹಾಗೂ ಥರ್ಮಾಕೋಲ್‌ನಿಂದಾಗುತ್ತಿರುವ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಕಡಿಮೆ ಮಾಡಲು ಜಾರ್ಖಂಡ್‌ನ ಜುಗ್‌ಸಲೈ ಪುರಸಭೆ ಹೊಸ ಐಡಿಯಾ ರೂಪಿಸಿ, ಯಶಸ್ವಿಯಾಗಿದೆ.

JAN 18: Plastic campaign story
'ಯುಟೆನ್ಸಿಲ್‌ ಬ್ಯಾಂಕ್‌' ಆರಂಭಿಸಿದ ಜುಗ್‌ಸಲೈ ಪುರಸಭೆ

ಜಾರ್ಖಂಡ್: ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಜಾರ್ಖಂಡ್​ನ ಜುಲ್‌ಸಲೈ ಪುರಸಭೆ 27 ಸ್ವಸಹಾಯ ಸಂಘಗಳ ನೆರವಿನಿಂದ 'ಯುಟೆನ್ಸಿಲ್‌ ಬ್ಯಾಂಕ್‌' ಆರಂಭಿಸಿದೆ.

'ಯುಟೆನ್ಸಿಲ್‌ ಬ್ಯಾಂಕ್' ಅನ್ನು ಕ್ರಾಕರಿ ಅಂತಲೂ ಕರೆಯಲಾಗುತ್ತೆ. ಈ ಬ್ಯಾಂಕ್‌ ಮೂಲಕ ಸಭೆ, ಸಮಾರಂಭಗಳಿಗೆ ಅತಿ ಕಡಿಮೆ ದರದಲ್ಲಿ ಸ್ಟೀಲ್‌ ಪಾತ್ರೆಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಪ್ಲಾಸ್ಟಿಕ್‌ನಿಂದಾಗುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಯುಟೆನ್ಸಿಲ್‌ ಬ್ಯಾಂಕ್ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು, ಅದನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸ್ವಚ್ಛತೆ, ಉತ್ತಮ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಭವಿಷ್ಯದಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತೇವೆ ಎನ್ನುತ್ತಾರೆ ಜುಗ್‌ಸಲೈ ಪುರಸಭೆ ವಿಶೇಷ ಅಧಿಕಾರಿ ಜೆ.ಪಿ.ಯಾದವ್‌.

ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯ ತಡೆಯಲು 'ಯುಟೆನ್ಸಿಲ್‌ ಬ್ಯಾಂಕ್‌' ಆರಂಭಿಸಿದ ಜುಗ್‌ಸಲೈ ಪುರಸಭೆ

ಇನ್ನು ಈ ಕುರಿತು ಮಾತನಾಡಿರುವ ಜುಗ್‌ಸಲೈ ಪುರಸಭೆಯ ಸಿಟಿ ಮಿಷನ್‌ ಮ್ಯಾನೇಜರ್‌ ಗ್ಲೇನೀಶ್‌ ಮಿನ್ಜ್‌, ಪ್ಲಾಸ್ಟಿಕ್‌ ಕುರಿತ ಅಭಿಯಾನವನ್ನು ಆರಂಭಿಸಿದ್ದು, 27 ಸ್ವಸಹಾಯ ಗುಂಪುಗಳನ್ನು ರಚಿಸಿದ್ದೇವೆ. ಈ ಕ್ರಾಕರಿ ಬ್ಯಾಂಕ್‌ ಕೇವಲ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಸ್ವಸಹಾಯ ಗುಂಪುಗಳಿಗೆ ಆದಾಯ ತಂದುಕೊಡಲಿದೆ. ಈ ಯೋಜನೆ ಯಶಸ್ವಿಯಾಗಿದ್ದು, ದೊಡ್ಡ ಮಟ್ಟದಲ್ಲಿ ಪಾತ್ರಗಳನ್ನು ಬಾಡಿಗೆಗೆ ನೀಡುವ ಯೋಜನೆಯನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.

ಈ ಬ್ಯಾಂಕ್‌ನ ಮತ್ತೊಂದು ವಿಶೇಷ ಅಂದ್ರೆ, ಸಸ್ಯಹಾರಿ ಹಾಗೂ ಮಾಂಸಾಹಾರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವವರಿಗೆ ಪ್ರತ್ಯೇಕವಾಗಿ ಪಾತ್ರೆಗಳನ್ನು ನೀಡಲಾಗುತ್ತದೆ. ಸ್ಟೀಲ್‌ ಪಾತ್ರೆಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡುತ್ತಿರುವುದನ್ನು ಪ್ರೋತ್ಸಾಹಿಸಲು ಜುಗ್‌ಸಲೈ ಪುರಸಭೆ ಸಾರ್ವಜನಿಕರಿಗೆ ಮೊಬೈಲ್‌ ಸಂಖ್ಯೆಯೊಂದನ್ನು ನೀಡಿದೆ. ಅಲ್ಲದೆ, ಜನರ ಅನುಕೂಲಕ್ಕಾಗಿ ವಾಟ್ಸಪ್‌ ಗ್ರೂಪ್‌ ಕೂಡ ಆರಂಭಿಸಿದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.