ETV Bharat / bharat

ಏರ್​​ಟೆಲ್​​ - ವೋಡಾಫೋನ್​ ಐಡಿಯಾ ಜತೆ ಪೋಸ್ಟ್​​ಪೇಯ್ಡ್​​ ಸಮರಕ್ಕಿಳಿದ ಜಿಯೋ!

ಪ್ರಿಪೇಯ್ಡ್​​​​ ಗ್ರಾಹಕರನ್ನ ಈಗಾಗಲೇ ತನ್ನತ್ತ ಸೆಳೆಯಲು ಯಶಸ್ವಿಯಾಗಿರುವ ರಿಲಯನ್ಸ್​ ಜಿಯೋ ಇದೀಗ ಪೋಸ್ಟ್​ಪೇಯ್ಡ್​​​ ಗ್ರಾಹಕರನ್ನ ತನ್ನ ಬಲೆಗೆ ಸೆಳೆಯಲು ಯೋಜನೆ ರೂಪಿಸಿದೆ.

JioPostpaid Plus
JioPostpaid Plus
author img

By

Published : Sep 22, 2020, 8:51 PM IST

ಮುಂಬೈ: ಟೆಲಿಕಾಂ ಇಂಡಸ್ಟ್ರಿಯಲ್ಲಿ ಈಗಾಗಲೇ ಹೊಸ ಶಕೆ ಆರಂಭ ಮಾಡಿರುವ ರಿಲಯನ್ಸ್​​ ಜಿಯೋ ಕೇವಲ ಫ್ರೀಪೇಯ್ಡ್​ ಸೇವೆಗಳಿಗೆ ಮಾತ್ರ ಸಿಮೀತವಾಗಿತ್ತು. ಆದರೆ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಜಿಯೋ ಸದ್ಯ ಫೋಸ್ಟ್​ಪೇಯ್ಡ್​​ನಲ್ಲಿ ಏರ್​ಟೆಲ್​, ವೋಡಾಫೋನ್​ ಐಡಿಯಾ ವಿರುದ್ಧ ಸಮರ ಸಾರಿದೆ.

ಪೋಸ್ಟ್​​ಪೇಯ್ಡ್​​​​ ಸೇವೆ ನೀಡಲು ಮುಂದಾಗಿರುವ ಕಂಪನಿ ಜಿಯೋ ಪೋಸ್ಟ್​ಪೇಯ್ಡ್​​​​​ ಪ್ಲಸ್​​ ಪ್ಲಾನ್​ ಘೋಷಣೆ ಮಾಡಿದೆ. ಇದರಲ್ಲಿ ನೆಟ್​​ಪ್ಲೇಕ್ಸ್​​, ಅಮೆಜಾನ್​ ಪ್ರೈಂ ಹಾಗೂ ಡಿಸ್ನಿ + ಹಾಟ್‌ಸ್ಟಾರ್​​ ಜತೆಗೆ ಫ್ಯಾಮಿಲಿ ಪ್ಲಾನ್​​ ನೀಡಲು ಮುಂದಾಗಿದೆ. ಇಷ್ಟೆಲ್ಲ ಕೇವಲ 250 ರೂ. ಪ್ಲಾನ್​​ನಲ್ಲಿ ನೀಡುವ ಉದ್ದೇಶ ಹೊಂದಿದೆ. ಜತೆಗೆ 500 ಜಿಬಿ ಇಂಟರ್​​ನೆಟ್​ ಹಾಗೂ ವೈಫೈ ಕಾಲಿಂಗ್​​​ ಸೇವೆ ಇದೆ. ಈಗಾಗಲೇ 40 ಕೋಟಿ ಪ್ರಿಪೇಯ್ಡ್​ ಗ್ರಾಹಕರನ್ನ ನಾವು ತಲುಪಿದೆ.

ಜಿಯೋ ಡೈರೆಕ್ಟರ್​ ಆಕಾಶ್ ಅಂಬಾನಿ ಮಾತನಾಡಿದ್ದು, ಈ ಯೋಜನೆ ಶೀಘ್ರವೇ ಜಾರಿಗೊಳ್ಳಲಿದ್ದು, ಗ್ರಾಹಕರಿಗೆ ಖಂಡಿತವಾಗಿ ಇಷ್ಟವಾಗಲಿದೆ ಎಂದಿದ್ದಾರೆ. ಇದೀಗ ರೂ. 399, 599, 799, 999 ಮತ್ತು 1499ರ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.