ಗೊಡ್ಡಾ (ಜಾರ್ಖಂಡ್): ಮಹಾಗಮ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಾಸಕಿ ಕ್ಷೇತ್ರದ ಇತರ ಮಹಿಳಾ ರೈತರೊಂದಿಗೆ ಭತ್ತದ ಕೃಷಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ರಾಜ್ಯದ ಹಲವಾರು ಭಾಗಗಳಲ್ಲಿ ಮಾನ್ಸೂನ್ ಪ್ರಾರಂಭವಾದ ಬಳಿಕ ಭತ್ತದ ಕೃಷಿಗೆ ಇದು ಸೂಕ್ತ ಸಮಯವಾಗಿದೆ.