ರಾಂಚಿ: ಜಾರ್ಖಂಡ್ನ 81 ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ನಡೆದ ಚುನಾವಣಾ ಫಲಿತಾಂಶ ಈಗಾಗಲೇ ಬಹುತೇಕ ಪ್ರಕಟಗೊಂಡಿದ್ದು, ಆಡಳಿತರೂಢ ಪಕ್ಷ ಭಾರತೀಯ ಜನತಾ ಪಾರ್ಟಿ ಹೀನಾಯ ಸೋಲು ಕಂಡಿದೆ.
ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಳ್ಳುವ ಮೂಲಕ ಸೋಲು ಒಪ್ಪಿಕೊಂಡಿದ್ದು, ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್,ಜೆಎಂಎಂ ಹಾಗೂ ಆರ್ಜೆಡಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಇದರ ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಮುಖ್ಯಮಂತ್ರಿ ರಘುಬರ್ ದಾಸ್, ಇದು ಪಕ್ಷದ ಸೋಲಲ್ಲ, ನನ್ನ ಸೋಲು. ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ಪರಾಮರ್ಶೆ ಮಾಡುಕೊಳ್ಳುವುದಾಗಿ ಹೇಳಿದ್ದಾರೆ. ಜತೆಗೆ ಜನರ ಜನಾದೇಶ ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಕೆಲವೊಂದು ಕ್ಷೇತ್ರಗಳಲ್ಲಿ ಇನ್ನು ಅನೇಕ ಹಂತದ ಕೌಂಟಿಂಗ್ ಆಗಬೇಕಾಗಿರುವ ಕಾರಣ ಸಂಪೂರ್ಣ ಫಲಿತಾಂಶ ಬರುವವರೆಗೂ ಕಾಯುವುದಾಗಿ ಹೇಳಿದ್ದಾರೆ.
-
Jharkhand Mukti Morcha's (JMM) Hemant Soren in Ranchi: I want to thank Lalu ji, Sonia ji, Rahul ji and Priyanka ji & all Congress leaders for all the support & for believing in me. #JharkhandAssemblyPolls pic.twitter.com/oMW8wp6xsY
— ANI (@ANI) December 23, 2019 " class="align-text-top noRightClick twitterSection" data="
">Jharkhand Mukti Morcha's (JMM) Hemant Soren in Ranchi: I want to thank Lalu ji, Sonia ji, Rahul ji and Priyanka ji & all Congress leaders for all the support & for believing in me. #JharkhandAssemblyPolls pic.twitter.com/oMW8wp6xsY
— ANI (@ANI) December 23, 2019Jharkhand Mukti Morcha's (JMM) Hemant Soren in Ranchi: I want to thank Lalu ji, Sonia ji, Rahul ji and Priyanka ji & all Congress leaders for all the support & for believing in me. #JharkhandAssemblyPolls pic.twitter.com/oMW8wp6xsY
— ANI (@ANI) December 23, 2019
ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ಜಾರ್ಖಂಡ್ ಯುವ ಮೋರ್ಚಾ ಮುಖ್ಯಸ್ಥ ಹೇಮಂತ್ ಸೊರೇನ್, ಇನ್ಮುಂದೆ ಜಾರ್ಖಂಡ್ನಲ್ಲಿ ಹೊಸ ಯುಗ ಪ್ರಾರಂಭಗೊಳ್ಳಲಿದ್ದು, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಜೆಮ್ಷೆಡ್ಪುರ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮುಖ್ಯಮಂತ್ರಿ ರಘುಬರ್ ದಾಸ್ ಹಿನ್ನಡೆ ಅನುಭವಿಸಿರುವುದು ಪಕ್ಷಕ್ಕೆ ಮತ್ತಷ್ಟು ಆಘಾತವನ್ನುಂಟು ಮಾಡಿದೆ.