ETV Bharat / bharat

ಮತಾಂತರ ವಿರೋಧಿ ಕಾನೂನಿಗೆ ಜೆಡಿಯು ಬೆಂಬಲಿಸಲಿ; ಬಿಜೆಪಿ

author img

By

Published : Jan 8, 2021, 5:41 PM IST

ಲವ್ ಜಿಹಾದ್ ವಿರುದ್ಧ ಬಿಹಾರ ಸರ್ಕಾರ ಕಾನೂನು ತರಬೇಕು ಎಂದು ಬಿಜೆಪಿ ನಾಯಕ ಪ್ರೇಮ್ ರಂಜನ್ ಪಟೇಲ್ ಪ್ರತಿಪಾದಿಸಿದ್ದಾರೆ. ಮತಾಂತರ ವಿರೋಧಿ ಕಾನೂನು ಸುಗ್ರೀವಾಜ್ಞೆಯನ್ನು ಪ್ರಕಟಿಸುವಲ್ಲಿ ಜೆಡಿಯು ಕೇಸರಿ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್
ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್

ಪಾಟ್ನಾ: ಬಿಹಾರದಲ್ಲಯೂ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ರಾಜ್ಯದ ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್ ಒಲವು ತೋರಿದ್ದು, ಇದಕ್ಕಾಗಿ ಮಿತ್ರ ಪಕ್ಷ ಜನತಾದಳ-ಯುನೈಟೆಡ್ (ಜೆಡಿಯು) ಕೂಡ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತೆಯೇ ಬಿಹಾರದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಪಕ್ಷದ ಹಿರಿಯ ಸದಸ್ಯರು ಕೂಡ ಪ್ರತಿಪಾದಿಸಿದ್ದಾರೆ.

ಈಟಿವಿ ಭಾರತ ಜೊತೆ ಮಾತನಾಡಿದ ಪ್ರೇಮ್ ರಂಜನ್, "ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯುವ ಅವಶ್ಯಕತೆಯಿದೆ. ಮುಗ್ಧ ಹುಡುಗಿಯರನ್ನು ಮೋಸದಿಂದ ಮತಾಂತರ ಮಾಡಲಾಗುತ್ತಿದೆ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಇದಕ್ಕೆ ಕಾನೂನಿನ ಅವಶ್ಯಕತೆ ಇದೆ. ಬಿಜೆಪಿಗೆ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿ ಇದೆ ಮತ್ತು ಮದುವೆಯಾಗುವ ನೆಪದಲ್ಲಿ ಅಥವಾ ಪ್ರೀತಿಯ ಹೆಸರಿನಲ್ಲಿ ಯಾರೊಬ್ಬರ ಮೇಲೂ ಮತಾಂತರ ಆಗುವಂತೆ ಒತ್ತಡ ಹಾಕಲು ಯಾರಿಗೂ ಹಕ್ಕಿಲ್ಲ." ಎಂದರು.

ಜೆಡಿಯು ಇದನ್ನು ಬೆಂಬಲಿಸುತ್ತದೆಯೆ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಿತ್ರ ಪಕ್ಷವೂ ಈ ಕಾನೂನನ್ನು ಬೆಂಬಲಿಸಬೇಕು. ಮತಾಂತರವನ್ನು ತಡೆಯಲು ಕಠಿಣ ಕಾನೂನು ತರಲು ಬಿಜೆಪಿಗೆ ಸಹಾಯ ಮಾಡಬೇಕು ಎಂದು ಅವರು ಪುನರುಚ್ಚರಿಸಿದರು.

ಓದಿ: ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮೋದನೆ

ಇದಕ್ಕೂ ಮೊದಲು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು, ಬಿಹಾರದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರಬೇಕು ಎಂದು ಹೇಳಿದ್ದರು.

'ಲವ್ ಜಿಹಾದ್' ಹೆಸರಿನಲ್ಲಿ ದೇಶದಲ್ಲಿ ದ್ವೇಷ ಮತ್ತು ವಿಭಜನೆಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಜೆಡಿಯು ವಕ್ತಾರ ಕೆ.ಸಿ ತ್ಯಾಗಿ ಹೇಳಿದ್ದಾರೆ. ಒಬ್ಬರ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಸಂವಿಧಾನ ಮತ್ತು ಸಿಆರ್‌ಪಿಸಿಯ ನಿಬಂಧನೆಗಳು ಇಬ್ಬರು ವಯಸ್ಕರಿಗೆ ತಮ್ಮ ಆಯ್ಕೆಯ ಜೀವನ ಸಾಥಿಯನ್ನು ಆಯ್ಕೆ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತವೆ ಎಂದು ತ್ಯಾಗಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.