ETV Bharat / bharat

ಶಿಶು ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ; ದೇಶಕ್ಕೆ ಮಾದರಿ ಈ ರಾಜ್ಯ - ಜಮ್ಮು-ಕಾಶ್ಮೀರ

2022 ರ ವೇಳೆಗೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ಇಳಿಸಲು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.

jammu
ಶಿಶು ಮರಣ ಪ್ರಮಾಣ
author img

By

Published : May 9, 2020, 5:10 PM IST

ಜಮ್ಮು: ಇತ್ತೀಚಿನ ವರ್ಷಗಳಲ್ಲಿ ತಾಯಿಯ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸೂಚಕಗಳಲ್ಲಿ ಜಮ್ಮು ಮತ್ತು ಕಾಶ್ಮೀರವು ಗಮನಾರ್ಹ ಸುಧಾರಣೆ ಸಾಧಿಸಲು ಸಾಧ್ಯವಾಗಿದೆ. ಶಿಶು ಮರಣ ಪ್ರಮಾಣ (ಐಎಂಆರ್) ಇಳಿಕೆಯಾಗಿದೆ ಎಂದು ಸರ್ಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಎಸ್‌ಆರ್‌ಎಸ್ ಬುಲೆಟಿನ್​ನಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಐಎಂಆರ್ 52 (2005) ಕ್ಕಿಂತ 22 (2018) ಕ್ಕಿಳಿದು ಕಡಿಮೆಯಾಗುತ್ತಿದೆ. ಜಮ್ಮು ಕಾಶ್ಮೀರ​ಗೆ ಹೋಲಿಸಿದರೆ ದೇಶದಲ್ಲಿ ಶಿಶುಗಳ ಮರಣ ಪ್ರಮಾಣ ಶೇ.32ಕ್ಕಿಂತ ಹೆಚ್ಚಿದೆ ಎಂದು ವಕ್ತಾರರು ಹೇಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಮಿಷನ್​ನ ಸಕ್ರಿಯ ಬೆಂಬಲದೊಂದಿಗೆ ಇಡೀ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ರಾಜ್ಯದಲ್ಲಿನ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನವಜಾತ ಶಿಶುಗಳ ಆರೈಕೆಯನ್ನು ಮಾಡಲು ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ಸಕಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಹಣಕಾಸು ಆಯುಕ್ತ ಅಟಲ್ ಡಲ್ಲೂ ಹೇಳಿದರು.

27 ಜಿಲ್ಲೆಗಳು ಮತ್ತು ಇತರ ಸಮಾನ ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಆರೈಕೆ ಘಟಕಗಳನ್ನು ಸ್ಥಾಪಿಸಲಾಗಿದೆ. ಮೂರು ಎನ್‌ಐಸಿಯುಗಳು, ನವಜಾತ ಸ್ಥಿರೀಕರಣ ಘಟಕಗಳು ಮತ್ತು ನವಜಾತ ಆರೈಕೆ ಕೇಂದ್ರಗಳಲ್ಲಿ (ಎನ್‌ಬಿಸಿಸಿ) 264 ವಿತರಣಾ ಕೇಂದ್ರಗಳನ್ನು ಆರ್ಥಿಕ ಸಹಾಯದೊಂದಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಬೆಂಬಲದೊಂದಿಗೆ ಸ್ಥಾಪಿಸಲಾಗಿದೆ ಎಂದರು.

2022 ರ ವೇಳೆಗೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಶಿಶು ಮರಣ ಪ್ರಮಾಣವನ್ನು ಒಂದಂಕಿಗೆ ಇಳಿಸಲು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ವಿವಿಧ ಹಂತಗಳಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.