ನವದೆಹಲಿ: ಉಸಿರಾಟದ ತೊಂದರೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಏಮ್ಸ್ ವೈದ್ಯಕೀಯ ಪ್ರಕಟಣೆ ಹೊರಡಿಸಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 10ಗಂಟೆಗೆ ಅವರು ಏಮ್ಸ್ಗೆ ದಾಖಲಾಗಿದ್ದು, ಪ್ರಸ್ತುತ ಹೃದ್ರೋಗ ಹಾಗೂ ಇತರ ತಜ್ಞ ವೈದ್ಯರ ತಂಡ ತೀವ್ರ ನಿಗಾವಹಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಆರೋಗ್ಯ ಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.
-
All India Institute of Medical Sciences, Delhi: Arun Jaitley was admitted to AIIMS today morning. He is currently undergoing treatment in the intensive care unit under the supervision of a multidisciplinary team of doctors. At present, he is haemodynamically stable. (file pic) pic.twitter.com/zqq8lK9dTP
— ANI (@ANI) August 9, 2019 " class="align-text-top noRightClick twitterSection" data="
">All India Institute of Medical Sciences, Delhi: Arun Jaitley was admitted to AIIMS today morning. He is currently undergoing treatment in the intensive care unit under the supervision of a multidisciplinary team of doctors. At present, he is haemodynamically stable. (file pic) pic.twitter.com/zqq8lK9dTP
— ANI (@ANI) August 9, 2019All India Institute of Medical Sciences, Delhi: Arun Jaitley was admitted to AIIMS today morning. He is currently undergoing treatment in the intensive care unit under the supervision of a multidisciplinary team of doctors. At present, he is haemodynamically stable. (file pic) pic.twitter.com/zqq8lK9dTP
— ANI (@ANI) August 9, 2019
ಏಮ್ಸ್ ಆಸ್ಪತ್ರೆಗೆ ದಾಖಲಾದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ... ಹಾಸ್ಪಿಟಲ್ಗೆ ದೌಡಾಯಿಸಿದ ಅಮಿತ್ ಶಾ!
ಕಳೆದ ಅನೇಕ ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಅವರು,ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿತ್ತು. ಈಗಾಗಲೇ ಏಮ್ಸ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್ ಭೇಟಿ ನೀಡಿ, ಅವರ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದಾರೆ.