ETV Bharat / bharat

ಭಾರತ-ರಷ್ಯಾ ನಡುವೆ ಸೌಹಾರ್ದತೆಗೆ ದೋವಲ್​, ಜೈ ಶಂಕರ್​ ಮಾಸ್ಕೋಗೆ ಪ್ರವಾಸ - ಜೈ ಶಂಕರ್​

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ವಿದೇಶಾಂಗ ಸಚಿವ ಎಸ್​.ಜೈಶಂಕರ್ ಅವರು ಆಗಸ್ಟ್ 27ರಿಂದ ರಷ್ಯಾದ ಮಾಸ್ಕೋಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.

Jaishankar to pay two-day visit to Moscow next week
author img

By

Published : Aug 25, 2019, 7:42 PM IST

Updated : Aug 25, 2019, 9:30 PM IST

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ವಿದೇಶಾಂಗ ಸಚಿವ ಎಸ್​.ಜೈಶಂಕರ್ ಅವರು ಆಗಸ್ಟ್ 27ರಿಂದ ರಷ್ಯಾದ ರಾಜಧಾನಿ ಮಾಸ್ಕೋಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.

ಮುಂದಿನ ತಿಂಗಳು ವ್ಲಾಡಿವೋಸ್ಟಾಕ್​​ನಲ್ಲಿ ನಡೆಯಲಿರುವ ಉಭಯ ದೇಶಗಳ 5ನೇ ಆರ್ಥಿಕ ಸಭೆ ಮತ್ತು 20ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಇವರು ಪ್ರಯಾಣ ಬೆಳೆಸಲಿದ್ದಾರೆ.

ಮೊದಲ ಬಾರಿಗೆ ಮಾಸ್ಕೋಗೆ ಭೇಟಿ ನೀಡುತ್ತಿರುವ ಸಚಿವ ಜೈಶಂಕರ್​, ಅಲ್ಲಿನ ವಿದೇಶಾಂಗ ಸಚಿವ ಸೆರ್ಜೆ ಲಾರ್ವೆ ಅವರ ಜೊತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಪರಸ್ಪರವಾಗಿ ಚರ್ಚೆ ನಡೆಸಲಿದ್ದಾರೆ.

'ಇಂಡೋ-ಪೆಸಿಫಿಕ್' ಕುರಿತ ಭಾರತದ ದೃಷ್ಟಿಕೋನ ಸಂವಾದದಲ್ಲಿ ಸಚಿವರು ಭಾಗವಹಿಸಲಿದ್ದಾರೆ. ಪ್ರಸ್ತುತ ಪ್ರಧಾನಿ ಮೋದಿ ಬಹ್ರೇನ್ ಪ್ರವಾಸದಲ್ಲಿದ್ದಾರೆ.

Intro:Body:

national

Conclusion:
Last Updated : Aug 25, 2019, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.