ETV Bharat / bharat

ಪ್ರಸ್ತುತ ಭಾರತ ಸ್ವಾವಲಂಬಿಯಲ್ಲವೆ?: ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ

ಕೊರೊನಾ ಲಾಕ್​ಡೌನ್​ ಮಧ್ಯೆ ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ ಘೋಷಣೆ ಮಾಡಿದ್ದು, ಭಾರತ ಸ್ವಾವಲಂಬಿಯಾಗಲಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆ ಶಿವಸೇನೆ, ಈ ಹಿಂದೆ ಭಾರತ ಸ್ವಾವಲಂಬಿಯಾಗಿರಲಿಲ್ಲವೇ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.

Sena
ಶಿವ ಸೇನಾ
author img

By

Published : May 14, 2020, 7:28 PM IST

ಮುಂಬೈ (ಮಹಾರಾಷ್ಟ್ರ): ಕೊರೊನಾ ಪೀಡಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಂತೆ ಘೋಷಿಸಿದ ಕೇಂದ್ರದ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಕುರಿತು ಶಿವಸೇನಾ ಪಕ್ಷ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ. ಭಾರತ ಪ್ರಸ್ತುತ ಸ್ವಾವಲಂಬಿ ದೇಶವಲ್ಲವೇ ಎಂದು ಪ್ರಶ್ನಿಸಿದೆ.

ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳನ್ನು ಹೇಗೆ ಸಂಗ್ರಹಿಸಲಾಗುವುದು, ಅದರ ದಾರಿಯಾದರೂ ಯಾವುದು ಎಂದು ಶಿವಸೇನಾ ಪ್ರಶ್ನಿಸಿದೆ. ಕೈಗಾರಿಕೋದ್ಯಮಿಗಳು, ವ್ಯಾಪಾರ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುವಂತಹ ವಾತಾವರಣವನ್ನು ಸೃಷ್ಟಿಸುವ ಅಗತ್ಯತೆ ಕೇಂದ್ರ ಸರ್ಕಾರಕ್ಕಿದೆ ಎಂದೂ ಅಭಿಪ್ರಾಯಪಟ್ಟಿದೆ.

ಈ ವಿಶೇಷ ಪ್ಯಾಕೇಜ್​ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಬಡ ಕಾರ್ಮಿಕರು, ರೈತರು ಮತ್ತು ತೆರಿಗೆ ಪಾವತಿಸುವ ಮಧ್ಯಮ ವರ್ಗದವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ದೇಶಕ್ಕೆ ತಿಳಿಸಲಾಗುತ್ತಿದೆ ಎಂದು ಸೇನೆ ಹೇಳಿದೆ.

ಕೇಂದ್ರ ಸರ್ಕಾರದ ಪ್ರಕಾರ ಈ ಪ್ಯಾಕೇಜ್​ 130 ಕೋಟಿ ಭಾರತೀಯರನ್ನು ತಲುಪುತ್ತದೆ ಹಾಗೂ ನಮ್ಮ ದೇಶವು ಸ್ವಾವಲಂಬಿಯಾಗಲಿದೆ. ಇದರರ್ಥ ಭಾರತವು ಪ್ರಸ್ತುತ ಸ್ವಾವಲಂಬಿ ದೇಶವಲ್ಲವೇ?, ಈ ಹಿಂದೆ ಸ್ವಾವಲಂಬಿಯಾಗಿ ನಮ್ಮ ದೇಶ ಇರಲಿಲ್ಲವೇ ಎಂದು ಕೆಂದ್ರಕ್ಕೆ ಸೇನೆ ಇದೇ ವೇಳೆ ಪ್ರಶ್ನೆ ಮಾಡಿದೆ.

ಎಲ್ಲ ದೇಶಗಳು ಸಹ ಬಿಕ್ಕಟ್ಟಿನಿಂದ ಮತ್ತು ಹೋರಾಟದ ಮೂಲಕ ಕಲಿಯುವುದರಿಂದಲೇ ಮುಂದುವರಿಯುತ್ತದೆ. ಸ್ವಾತಂತ್ರ್ಯದ ಮೊದಲು ಭಾರತದಲ್ಲಿ ಸೂಜಿಯನ್ನು ಸಹ ತಯಾರಿಸುತ್ತಿರಲಿಲ್ಲ. ಆದರೆ, 60 ವರ್ಷಗಳಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ, ಕೃಷಿ ವ್ಯವಹಾರ, ರಕ್ಷಣಾ, ಉತ್ಪಾದನೆ ಮತ್ತು ಪರಮಾಣು ವಿಜ್ಞಾನದಲ್ಲಿ ಸ್ವಾವಲಂಬಿಗಳಾಗಿದೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಡಿಜಿಟಲ್ ಇಂಡಿಯಾಕ್ಕೆ ಅಡಿಪಾಯ ಹಾಕದಿದ್ದರೆ, ಕೊರೊನಾ ವೈರಸ್ ಕಾಲದಲ್ಲಿ ಪ್ರಧಾನಿ ಮೋದಿ, ಸಿಎಂ ಮತ್ತು ಅಧಿಕಾರಶಾಹಿಯ ವಿಡಿಯೋ ಕಾನ್ಫರೆನ್ಸ್​​ ಚರ್ಚೆಗಳು ಇರುತ್ತಿರಲಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಮೋದಿ ಸರ್ಕಾರಕ್ಕೆ ಭರ್ಜರಿಯಾಗೇ ಟಾಂಗ್ ಕೊಟ್ಟಿದೆ.

ಪಿಪಿಇ ಕಿಟ್‌ಗಳು ಮತ್ತು ಎನ್‌ 95 ಮಾಸ್ಕ್​ಗಳನ್ನು ಈಗ ಭಾರತದಲ್ಲಿ ತಯಾರಿಸುತ್ತಿರುವುದು ಒಳ್ಳೆಯದು. ಪಿಪಿಇ ಕಿಟ್‌ಗಳ ತಯಾರಿಕೆಯಲ್ಲಿ ಸಹಾಯ ಮಾಡುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಂತಹ ಸಂಸ್ಥೆ ಸ್ವಾವಲಂಬಿ ಭಾರತದ ಭಾಗವಾಗಿದೆ ಎಂದು ಸೇನೆ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ.

ನವ ಭಾರತದ ಸ್ವಾವಲಂಬನೆ ಹಾದಿಯಲ್ಲಿರುವ ನಮ್ಮ ದೇಶದಲ್ಲಿ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಅದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಂತಹ ರಾಜಕೀಯ ಸಂಸ್ಥೆಗಳನ್ನು ಸ್ವಲ್ಪ ಸಮಯದವರೆಗೆ ಲಾಕ್ ಡೌನ್ ಮಾಡಿದರೆ ದೇಶಕ್ಕೆ ಒಳಿತಾಗಲಿದೆ ಎಂದು ಹೇಳಿದೆ.

ಪ್ರಸ್ತುತ ದಿನಗಳಲ್ಲಿ ಹೂಡಿಕೆದಾರರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಅವರಿಗೆ ವಿಶ್ವಾಸ ತುಂಬುವ ಹಾಗೂ ಬೆಂಬಲವನ್ನು ತೋರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಶಿವಸೇನೆ ಸಲಹೆ ನೀಡಿದೆ.

ಪ್ರಧಾನಿ ಮೋದಿ ಲಾಕ್‌ಡೌನ್ -4 ಮತ್ತು ಆರ್ಥಿಕ ಪ್ಯಾಕೇಜ್​ನ್ನು ಘೋಷಿಸಿದರೂ ಸಹ ಅದರ ಪ್ರಭಾವವು ಷೇರು ಮಾರುಕಟ್ಟೆಯಲ್ಲಿ ಏಕೆ ಪ್ರತಿಫಲಿಸಲಿಲ್ಲ?ಎಂದೂ ಇದೇ ವೇಳೆ ಪ್ರಶ್ನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.