ಲಂಡನ್: ಮುಂಬೈ - ಲಂಡನ್ ಏರ್ ಇಂಡಿಯಾ ಫ್ಲೈಟ್ನಲ್ಲಿ ಅಲ್ಕೋಹಾಲ್ ನಿರಾಕರಿಸಿದ ಕಾರಣಕ್ಕೆ ಸಿಬ್ಬಂದಿಯನ್ನು ಜನಾಂಗೀಯವಾಗಿ ನಿಂದಿಸಿದ ಐರಿಶ್ ಲಾಯರ್ ಇಂಗ್ಲೆಂಡ್ನ ಪೂರ್ವ ಸಸ್ಸೆಕ್ಸ್ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. 50 ವರ್ಷದ ಸಿಮೋನ್ ಬರ್ನ್ಸ್ ಜೂನ್ 1 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. 2019ರ ಏಪ್ರಿಲ್ನಲ್ಲಿ ವಿಮಾನದಲ್ಲಿ ಪಾನಮತ್ತರಾಗಿ ಪತ್ತೆಯಾಗಿದ್ದಕ್ಕೆ ಆರು ತಿಂಗಳು, ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ 2 ತಿಂಗಳ ಜೈಲು ಶಿಕ್ಷೆಗೆ ಬರ್ನ್ಸ್ ತುತ್ತಾಗಿದ್ದರು. ಮೇ 20ರಂದು ಅವರನ್ನು ಯು.ಕೆ. ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
"ಜೂನ್ 1ರಂದು ಬೀಚಿ ಹೆಡ್ನಲ್ಲಿ ಪತ್ತೆಯಾಗಿರುವ ಶವವನ್ನು ಸಿಮೋನ್ ಬರ್ನ್ಸ್ ಎಂದು ಗುರುತಿಸಲಾಗಿದೆ. ಸಾವನ್ನು ಅನುಮಾನಾಸ್ಪದ ಎಂದು ಪರಿಗಣಿಸಲಾಗುವುದಲ್ಲ. ವಿಷಯವನ್ನು ಮೇಲಧಿಕಾರಿಗಳಿಗೆ ರವಾನಿಸಲಾಗಿದೆ" ಎಂದು ಸಸ್ಸೆಕ್ಸ್ ಪೊಲೀಸ್ ವಕ್ತಾರರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಕಳೆದ ವರ್ಷದ ನವೆಂಬರ್ನಲ್ಲಿ ಮುಂಬೈ-ಲಂಡನ್ ಏರ್ ಇಂಡಿಯಾ ಫ್ಲೈಟ್ನಲ್ಲಿ ವೈನ್ ನಿರಾಕರಿಸಿದ ಕಾರಣಕ್ಕೆ ಬರ್ನ್ಸ್ ಸಿಬ್ಬಂದಿಯನ್ನು ಜನಾಂಗೀಯವಾಗಿ ನಿಂದಿಸಿದ್ದರು.