ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಇದೇ ತಿಂಗಳ 19ರಂದು ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಒಟ್ಟು 332 ಪ್ಲೇಯರ್ಸ್ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಡಿ.19ರಂದು ಐಪಿಎಲ್ ಹರಾಜು.. ಕನ್ನಡಿಗ ಉತ್ತಪ್ಪಗೆ ₹1.5 ಕೋಟಿ.. ಮತ್ಯಾರಿಗೆ ಎಷ್ಟೆಷ್ಟಿದೆ?
ಈ ಹಿಂದೆ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕೆಲವೊಂದು ಪ್ಲೇಯರ್ಸ್ ದುಬಾರಿ ಬೆಲೆಗೆ ಬಿಕರಿಯಾಗಿದ್ದು, ಇಲ್ಲಿಯವರೆಗೆ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟಾಪ್ನಲ್ಲಿದ್ದಾರೆ. 2015ರಲ್ಲಿ ಡೆಲ್ಲಿ ತಂಡ ಬರೋಬ್ಬರಿ 16 ಕೋಟಿ ರೂ. ನೀಡಿ ಅವರನ್ನ ಖರೀದಿ ಮಾಡಿತ್ತು.
2008ರಿಂದ 2019ರವರೆಗಿನ ದುಬಾರಿ ಬಿಕರಿಯಾದ ಪ್ಲೇಯರ್ಸ್
- 2008ರ ಟಾಪ್ ದುಬಾರಿ ಆಟಗಾರ 9.5 ಕೋಟಿ ಮಹೇಂದ್ರ ಸಿಂಗ್ ಧೋನಿ(ಸಿಎಸ್ಕೆ)
- 2009 ಟಾಪ್ ದುಬಾರಿ ಆಟಗಾರ 9.8 ಕೋಟಿ ಕೆವಿನ್ ಪಿಟರ್ಸನ್(ಆರ್ಸಿಬಿ) ಹಾಗೂ ಆಂಡ್ರ್ಯೋ ಪ್ಲಿಂಟಾಪ್(ಸಿಎಸ್ಕೆ)
- 2011 ಟಾಪ್ ದುಬಾರಿ ಆಟಗಾರ 14.9 ಕೋಟಿ ಗೌತಮ್ ಗಂಭೀರ್( ಕೆಕೆಆರ್)
- 2012 ಟಾಪ್ ದುಬಾರಿ ಆಟಗಾರ 12.8 ಕೋಟಿ ರವೀಂದ್ರ ಜಡೇಜಾ(ಸಿಎಸ್ಕೆ)
- 2014 ಟಾಪ್ ದುಬಾರಿ ಆಟಗಾರ 14.0 ಕೋಟಿ ಯುವರಾಜ್ ಸಿಂಗ್ (ಆರ್ಸಿಬಿ)
- 2015 ಟಾಪ್ ದುಬಾರಿ ಆಟಗಾರ 16.0 ಕೋಟಿ ಯುವರಾಜ್ ಸಿಂಗ್ (ಡಿಡಿ)
- 2016 ಟಾಪ್ ದುಬಾರಿ ಆಟಗಾರ 9.50 ಕೋಟಿ – ಶೇನ್ ವ್ಯಾಟ್ಸನ್ (ಆರ್ಸಿಬಿ)
- 2017 ಟಾಪ್ ದುಬಾರಿ ಆಟಗಾರ 14.50 ಕೋಟಿ ಬೆನ್ ಸ್ಟೋಕ್ಸ್ (ಪುಣೆ ತಂಡ)
- 2018 ಟಾಪ್ ಫೈವ್ ದುಬಾರಿ ಆಟಗಾರರು 12.50 ಕೋಟಿ ಬೆನ್ ಸ್ಟೋಕ್ಸ್ (ರಾಜಸ್ಥಾನ)
- 2019 ಟಾಪ್ ದುಬಾರಿ ಆಟಗಾರ 8.40 ಕೋಟಿ ಜಯದೇವ್ ಉನಾದ್ಕಟ್(ರಾಜಸ್ಥಾನ), ವರುಣ್ ಚಕ್ರವರ್ತಿ(ಪಂಜಾಬ್)
ಈ ಸಲದ ಬಿಕರಿಯಲ್ಲಿ ಕೆಲವೊಂದು ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಅತಿ ಹೆಚ್ಚಿನ ಬೆಲೆಗೆ ಬಿಕರಿಗೊಳ್ಳುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿವೆ.