ETV Bharat / bharat

ಅಂತಾರಾಷ್ಟ್ರೀಯ ಪ್ಲಾಸ್ಟಿಕ್​ ಬ್ಯಾಗ್​ ಮುಕ್ತ ದಿನ: ಭೂ ತಾಯಿಗೆ ವಿಷ ಕಕ್ಕುತ್ತಿರುವ ಪ್ಲಾಸ್ಟಿಕ್​​​

ಪ್ಲಾಸ್ಟಿಕ್‌ ವಸ್ತುಗಳ ಬಳಕೆಯಿಂದಾಗಿ ವಾತಾವರಣ ಕಲುಷಿತಗೊಳ್ಳುತ್ತಿದೆ. ಯುವಜನರು ಈ ವಿಷಕಾರಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸಲು ಪ್ಲಾಸ್ಟಿಕ್ ರಹಿತ ಭಾರತಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಪ್ಲಾಸ್ಟಿಕ್​​ನಿಂದಾಗುವ ಅನಾಹುತಗಳ ಕುರಿತು ಜನರಲ್ಲಿ ಮನವರಿಕೆ ಮಾಡಬೇಕು.

author img

By

Published : Jul 3, 2020, 6:38 AM IST

International Plastic Bag Free Day
ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ

ಇಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್​ ಬ್ಯಾಗ್​ ಮುಕ್ತ ದಿನ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲಗಳನ್ನು (ಬ್ಯಾಗ್​​​​) ಬಳಸಲು ಸರ್ಕಾರಗಳು ಗೋಗರೆಯುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಆಗುತ್ತಿರುವುದೇ ಬೇರೆ. ಮುಂದೆ ಓದಿ. ಭೂಮಿಯ ಮೇಲೆ ಹೆಮ್ಮಾರಿ ಪ್ಲಾಸ್ಟಿಕ್​ ಬ್ಯಾಗ್​​​ಗಳನ್ನು ಯಾವ ರೀತಿ ಬಳಕೆ ಮಾಡುತ್ತಿದ್ದೇವೆ. ಅದರ ಪ್ರಮಾಣ ಎಷ್ಟಿದೆ. ಹೀಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದೇವೆ ಈ ಲೇಖನದ ಮೂಲಕ.

ಅಧಿಕ ಪ್ರಮಾಣದ ಪ್ಲಾಸ್ಟಿಕ್​ ಬಳಕೆಯಿಂದ ಭೂ ತಾಯಿ ಉಸಿರು ಕಟ್ಟಿಕೊಂಡಿದ್ದಾಳೆ. ಅದು ಹೀಗೆ ಮುಂದುವರಿದರೆ, ಭೂ ತಾಯಿ ಸಂಪೂರ್ಣ ವಿಷವಾಗುತ್ತಾಳೆ. ಬಳಸಿದ ಪ್ಲಾಸ್ಟಿಕ್​ ಅನ್ನು ಎಲ್ಲೆಂದರಲ್ಲಿ ಬಿಸಾಡುವ ಹಿನ್ನೆಲೆ ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತದೆ. ಅವುಗಳ ಸೇವನೆಯಿಂದ ಭೂಮಿಯಲ್ಲಿ ಮತ್ತು ಸಾಗರದಲ್ಲಿ ವನ್ಯಜೀವಿಗಳು ಸೇವಿಸಿ ಜೀವ ತೆತ್ತುತ್ತಿವೆ. ಇದಕ್ಕೆ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೂ ಇವೆ. ಹಾಗೆಯೇ ಕೆಲ ಅಧ್ಯಯನಗಳು ತಿಳಿಸಿವೆ.

ಏಕ-ಬಳಕೆಯ ಪ್ಲಾಸ್ಟಿಕ್​ ಅನ್ನು ತೊಡೆದು ಹಾಕುವ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ ಪರಿಸರ ಸಂರಕ್ಷಣೆಗೆ ಉತ್ತೇಜಿಸುವ ಸಲುವಾಗಿ ಅಂತಾರಾಷ್ಟ್ರೀಯ ಪ್ಲಾಸ್ಟಿಕ್​​​ ಬ್ಯಾಗ್​ ಮುಕ್ತ ದಿನ ಎಂದು ಆಚರಿಸಲಾಗುತ್ತಿದೆ. ಉದ್ದೇಶ ಉತ್ತಮವಾಗಿದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಸರ್ಕಾರಗಳು ನೆಪ ಮಾತ್ರಕ್ಕೆ ಪ್ಲಾಸ್ಟಿಕ್​ ಬಳಸಬೇಡಿ ಎಂದು ಹೇಳುತ್ತಿವೆಯೇ ಹೊರತು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಇದೂ ಪ್ಲಾಸ್ಟಿಕ್ ಎಂಬ ಪೆಡಂಭೂತಕ್ಕೆ ಮುಕ್ತಿ ಸಿಗದಿರಲು ಕಾರಣ.

ನದಿಗಳಲ್ಲಿ, ಸಾಗರದಲ್ಲಿ, ರಸ್ತೆಗಳಲ್ಲಿ, ಮೋರಿಗಳಲ್ಲಿ, ಕೆರೆಕಟ್ಟೆಗಳಲ್ಲಿ ಎಲ್ಲೆಲ್ಲಿಯೂ ಪ್ಲಾಸ್ಟಿಕ್ ಚೀಲಗಳ, ಬಾಟಲಿಗಳು ರಾಶಿಗಟ್ಟಲೆ ಬಿದ್ದಿರುತ್ತವೆ. ಒಟ್ಟಿನಲ್ಲಿ ಪ್ಲಾಸ್ಟಿಕ್​ ಇರದ ಜಾಗವಿಲ್ಲ. ಪ್ಲಾಸ್ಟಿಕ್​ ವಸ್ತುಗಳು ಒಮ್ಮೆ ಭೂಮಿಯೊಳಗೆ ಸೇರಿದರೆ ಅವು ಎಂದೂ ಗೊಬ್ಬರವಾಗುವುದಿಲ್ಲ. ಇದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸಿ, ಕೃಷಿ ಸಂಬಂಧಿತ ಕಾರ್ಯಗಳಿಗೆ ತೊಡಕುಂಟಾಗುತ್ತದೆ. ಪ್ಲಾಸ್ಟಿಕ್​ ವಿಲೇವಾರಿ ಕೂಡ ವಾಯು ಮಾಲಿನ್ಯ ಉಂಟು ಮಾಡುತ್ತದೆ.

ಪ್ಲಾಸ್ಟಿಕ್ ಚೀಲಗಳು ಚರಂಡಿಗಳು ಮತ್ತು ಜಲಮಾರ್ಗಗಳನ್ನು ಮುಚ್ಚಿಹಾಕುತ್ತಿವೆ. ಅಲ್ಲದೆ, ವಿಷಕಾರಿ ಅನಿಲಗಳನ್ನು ಅಪಾಯಕಾರಿ ಪ್ರಮಾಣದಲ್ಲಿ ಹೊರಸೂಸುತ್ತವೆ. ಇದೇ ರೀತಿ ಒಳ ಚರಂಡಿಗಳಲ್ಲಿ ಪ್ಲಾಸ್ಟಿಕ್​ ಕಟ್ಟಿಕೊಂಡು 1988 ಮತ್ತು 1998 ರಲ್ಲಿ ಬಾಂಗ್ಲಾದೇಶದ ಪ್ರವಾಹದ ತೀವ್ರತೆ ಹೆಚ್ಚಿಸಿತು. ಹೀಗಾಗಿ, ಸರ್ಕಾರ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿತು.

ನಾವು ವರ್ಷಕ್ಕೆ ಒಂದರಿಂದ ಐದು ಟ್ರಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತೇವೆ. ಅದು ಸೆಕೆಂಡಿಗೆ 1,60,000. ಮತ್ತು ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ 700ಕ್ಕಿಂತ ಹೆಚ್ಚು ಪ್ಲಾಸ್ಟಿಕ್​ ಚೀಲಗಳನ್ನು ಬಳಸುತ್ತಿದ್ದಾನೆ. ನಿಮಿಷಕ್ಕೆ ಸುಮಾರು 10 ಮಿಲಿಯನ್​​ ಪ್ಲಾಸ್ಟಿಕ್​​​ ಚೀಲಗಳನ್ನು ಬಳಸುತ್ತಿದ್ದೇವೆ. ವಿಶ್ವಾದ್ಯಂತ 1 ರಿಂದ 3ರಷ್ಟು ಪ್ಲಾಸ್ಟಿಕ್ ಚೀಲಗಳನ್ನು ಮಾತ್ರ ಮರುಬಳಕೆ ಮಾಡಲಾಗುತ್ತದೆ.

ಚರಂಡಿಗಳಲ್ಲಿ ನೀರು ಹೋಗದಂತೆ ಪ್ಲಾಸ್ಟಿಕ್​​​ ಕಟ್ಟಿಹಾಕುವ ಮೂಲಕ ಸೊಳ್ಳೆಗಳು ಮತ್ತು ಕೀಟಗಳಿಗೆ ಸಂತಾನೋತ್ಪತ್ತಿಗೆ ಅವಕಾಶ ನೀಡಿದಂತಾಗುತ್ತದೆ. ಮಲೇರಿಯಾದಂತಹ ರೋಗಗಳು ಹರಡಲಿವೆ. ಆಮೆಗಳು ನೀರಿನಲ್ಲಿ ತೇಲುವ ಪ್ಲಾಸ್ಟಿಕ್​ ಚೀಲವನ್ನು ಆಹಾರವೆಂದುಕೊಂಡು ತಿಂದು ಸಾವಿಗೀಡಾಗುತ್ತಿವೆ. ದೈತ್ಯಾಕಾರದ ತಿಮಿಂಗಿಲಗಳಿಗೂ ಪ್ಲಾಸ್ಟಿಕ್ಕಿನ ಭಾದೆ ತಪಿದ್ದಲ್ಲ. ಸತ್ತ ಎಷ್ಟೋ ತಿಮಿಂಗಿಲಗಳ ಹೊಟ್ಟೆಯಿಂದ ಪ್ಲಾಸ್ಟಿಕ್ ಚೂರುಗಳನ್ನು ತೆಗೆಯಲಾಗಿದೆ.

ಸ್ಟೈರೀನ್ ಮತ್ತು ಬೆಂಜಿನ್​ನಂತಹ ಕ್ಯಾನ್ಸರ್ ರಾಸಾಯನಿಕಗಳನ್ನು ಒಳಗೊಂಡಿರುವ ಸ್ಟೈರೋಫೊಮ್ ಉತ್ಪನ್ನಗಳು ಹೆಚ್ಚು ವಿಷಕಾರಿ. ಅವುಗಳನ್ನು ಸೇವಿಸಿದರೆ ನರಮಂಡಲಗಳು, ಶ್ವಾಸಕೋಶ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಹಾನಿಯಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಚ್ಚಾಗಿ ಸುಡಲಾಗುತ್ತಿದೆ. ತೆರೆದ ಗಾಳಿ ಹೊಂಡಗಳಲ್ಲಿ ಸುಡುವುದರಿಂದ ಫ್ಯೂರನ್ ಮತ್ತು ಡಯಾಕ್ಸಿನ್ ನಂತಹ ಹಾನಿಕಾರಕ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಇದು ಮಾನವನ ದೇಹದ ಮೇಲೆ ಅತಿ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಇಷ್ಟೆಲ್ಲಾ ತೊಂದರೆಯಾಗುತ್ತಿರುವ ಪ್ಲಾಸ್ಟಿಕ್ಕಿನ ಪಾಶದಿಂದ ಮುಕ್ತಿ ಸಿಗಲು ಅದರ ಉತ್ಪಾದನೆ ಮೊದಲು ನಿಲ್ಲಬೇಕು. ಆದಷ್ಟು ಪ್ಲಾಸ್ಟಿಕ್ಕಿನ ಬಳಕೆಯನ್ನು ಕಡಿಮೆ ಮಾಡಬೇಕು.

ಪ್ರಪಂಚದ ಪ್ಲಾಸ್ಟಿಕ್​ ನೋಟ

  • 2018 ಜುಲೈ ಹೊತ್ತಿಗೆ ಪ್ಲಾಸ್ಟಿಕ್​ ಚೀಲಗಳ ಬಳಸದಿರಲು 192 ರಾಷ್ಟ್ರಗಳ ಪೈಕಿ 127 ರಾಷ್ಟ್ರಗಳು ಹಲವು ರೀತಿಯ ಶಾಸನಗಳನ್ನು ಅಳವಡಿಸಿಕೊಂಡಿವೆ ಎಂದು ಯುಎನ್​​​ ಎನ್ವಿರಾನ್​ಮೆಂಟ್​ ಆ್ಯಂಡ್​ ಡಬ್ಲ್ಯೂಆರ್​ಐ ವರದಿ ತಿಳಿಸಿದೆ.
  • ಪ್ಲಾಸ್ಟಿಕ್ ಚೀಲ ನಿಷೇಧವನ್ನು ಹೊಂದಿರುವ 91 ದೇಶಗಳಲ್ಲಿ ಇಪ್ಪತ್ತೈದು ವಿನಾಯಿತಿಗಳನ್ನು ಒಳಗೊಂಡಿದೆ. ಮತ್ತು ಹಲವು ದೇಶಗಳು ಅನೇಕ ವಿನಾಯಿತಿಗಳನ್ನು ಹೊಂದಿವೆ.
  • ಮರುಬಳಕೆ ಮಾಡಬಹುದಾದ ಚೀಲಗಳು ಅಥವಾ ಪ್ಲಾಸ್ಟಿಕ್​​ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಆಧಾರಿತ ವಸ್ತುಗಳಿಂದ ತಯಾರಿಸಿದ ಚೀಲಗಳನ್ನು ಕೇವಲ 16 ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ.
  • ಫ್ರಾನ್ಸ್, ಭಾರತ, ಇಟಲಿ, ಮಡಗಾಸ್ಕರ್ ಮತ್ತು ಇತರ ಹಲವಾರು ದೇಶಗಳು ಎಲ್ಲಾ ಪ್ಲಾಸ್ಟಿಕ್ ಚೀಲಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೊಂದಿಲ್ಲ. ಆದರೆ ಅವು 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿವೆ ಅಥವಾ ಬಳಸಲು ಅದಕ್ಕೆ ತೆರಿಗೆ ವಿಧಿಸುತ್ತಿವೆ.
  • ಚೀನಾ ಪ್ಲಾಸ್ಟಿಕ್ ಚೀಲ ಆಮದನ್ನು ನಿಷೇಧಿಸಿದೆ. ಮತ್ತು ಚಿಲ್ಲರೆ ವ್ಯಾಪಾರಿಗಳು ಪ್ಲಾಸ್ಟಿಕ್ ಶಾಪಿಂಗ್ ಚೀಲಗಳಿಗಾಗಿ ಗ್ರಾಹಕರಿಗೆ ಶುಲ್ಕ ವಿಧಿಸುತ್ತಾರೆ. ಆದರೆ, ಅವುಗಳ ಉತ್ಪಾದನೆ ಅಥವಾ ರಫ್ತಿಗೆ ನಿರ್ಬಂಧ ಹೇರಿಲ್ಲ.
  • ಈಕ್ವೆಡಾರ್, ಎಲ್ ಸಾಲ್ವಡಾರ್ ಮತ್ತು ಗಯಾನಾ ಪ್ಲಾಸ್ಟಿಕ್ ಚೀಲಗಳ ವಿಲೇವಾರಿಯನ್ನು ಮಾತ್ರ ನಿಯಂತ್ರಿಸುತ್ತದೆ. ಆದರೆ, ಅವುಗಳ ಆಮದು, ಉತ್ಪಾದನೆಗೆ ನಿಯಂತ್ರಣವಿಲ್ಲ.
  • ಕೇಪ್ ವರ್ಡೆ, ಪ್ಲಾಸ್ಟಿಕ್ ಚೀಲ ಉತ್ಪಾದನೆಯ ಮೇಲೆ ಶೇಕಡಾವಾರು (ಆರಂಭದಲ್ಲಿ) ಕಡಿತವನ್ನು ವಿಧಿಸಿತು. ಅದು 2015ಕ್ಕೆ 60 ಪ್ರತಿಶತದಿಂದ ಪ್ರಾರಂಭವಾಯಿತು ಮತ್ತು 2016ರಲ್ಲಿ 100 ಪ್ರತಿಶತಕ್ಕೆ ಬೆಳೆಯಿತು. ಪ್ಲಾಸ್ಟಿಕ್ ಚೀಲಗಳ ಮೇಲಿನ ಸಂಪೂರ್ಣ ನಿಷೇಧವು ಜಾರಿಗೆ ಮಾಡಿದಾಗ ಅಂದಿನಿಂದ, ದೇಶದಲ್ಲಿ ಜೈವಿಕ ವಿಘಟನೀಯ ಮತ್ತು ಮಿಶ್ರಗೊಬ್ಬರ ಪ್ಲಾಸ್ಟಿಕ್ ಚೀಲಗಳಿಗೆ ಮಾತ್ರ ಅನುಮತಿ ನೀಡಲಾಯಿತು.

ಭಾರತದಲ್ಲಿ ಪ್ಲಾಸ್ಟಿಕ್

  • ಪ್ರಧಾನಿ ಮೋದಿ ಅವರು 2022ರ ವೇಳೆಗೆ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುವ ಪ್ರತಿಜ್ಞೆ ಘೋಷಿಸಿಸಿದ್ದಾರೆ.
  • 1998ರಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ಮೊದಲ ರಾಜ್ಯ ಸಿಕ್ಕಿಂ. ಅಲ್ಲದೆ, ಪರಿಸರ ಮತ್ತು ಅರಣ್ಯ ಸಚಿವಾಲಯವು ರಾಜ್ಯವನ್ನು ಅಭಿನಂದಿಸಿದೆ. ದೇಶಕ್ಕೆ ಸಿಕ್ಕಿಂ ಮಾದರಿ ಎಂದೂ ಬಣ್ಣಿಸಿದೆ.
  • ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ಮೇಲಿನ ಸಂಪೂರ್ಣ ನಿಷೇಧಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಚಯಿಸುವ ಅಧಿಸೂಚನೆಗಳು/ಆದೇಶಗಳನ್ನು ರಾಜ್ಯಗಳು ಹೊರಡಿಸಿವೆ. ಆದರೆ, ಯಾವ ರಾಜ್ಯದಲ್ಲೂ ಪರಿಣಾಮಕಾರಿಯಾಗಿ ನಿಮಯಗಳು ಅನುಷ್ಠಾನಗೊಂಡಿಲ್ಲ.
  • ಮುಖ್ಯ ಸಮಸ್ಯೆಗಳು: ಜಾರಿಗೊಳಿಸುವಿಕೆ ಕೊರತೆ ಮತ್ತು ಪ್ಲಾಸ್ಟಿಕ್​​​​ ಬ್ಯಾಗ್​ ಬದಲಿಗೆ ಪರ್ಯಾಯ ಬ್ಯಾಗ್​​ಗಳ ಕೊರತೆ. ಪ್ಲಾಸ್ಟಿಕ್​​ನ ಕಳ್ಳಸಾಗಣೆ.
  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ತಿಳಿಸಿದ ಪ್ರಕಾರ 18 ರಾಜ್ಯಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಿವೆ. 5 ರಾಜ್ಯಗಳು ಆಂಧ್ರಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಪಶ್ಚಿಮ ಬಂಗಾಳ ಧಾರ್ಮಿಕ / ಐತಿಹಾಸಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್/ಉತ್ಪನ್ನಗಳಿಗೆ ಭಾಗಶಃ ನಿಷೇಧ ಹೇರಿವೆ.

ಪ್ಲಾಸ್ಟಿಕ್​ ಬಳಕೆ ಬದಲಿಸಿದ ಕೊರೊನಾ

ಕೊರೊನಾ ವೈರಸ್​​​ ಹರಡುವಿಕೆ ಹೆಚ್ಚಾದ ಪರಿಣಾಮ ಸಾರ್ವಜನಿಕರ ನಡವಳಿಕೆ ಬದಲಾಯಿತು. ಈ ಸಂದರ್ಭದಲ್ಲಿ ಪ್ಲಾಸ್ಟಿಕ್​ ಬಳಕೆಗೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದಿದೆ. ಕೋವಿಡ್​​-19 ಸಾಂಕ್ರಾಮಿಕ ಸಮಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿತಿಗೊಳಿಸುವ ಮಾರ್ಗಗಳಿವೆ. ಅದು ಸಾಧ್ಯವಾದರೆ ದಿನಸಿ ವಸ್ತುಗಳನ್ನು ಬುಟ್ಟಿಯಿಂದ ಅಥವಾ ಬಟ್ಟೆ ಬ್ಯಾಗ್​​ಗಳನ್ನು ಬಳಸಿ. ಕಾಗದದ ಚೀಲಗಳು ಮತ್ತೊಂದು ಪರ್ಯಾಯವಾಗಿದೆ. ಇದು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲಿದೆ.

ನಮ್ಮ ಜೀವನಶೈಲಿಯಲ್ಲಾಗುವ ಸಣ್ಣ ಬದಲಾವಣೆಯಿಂದ ಪ್ಲಾಸ್ಟಿಕ್​​​ ನಿಯಂತ್ರಿಸಬಹುದು. ಮುಂದಿನ ದಿನಗಳಲ್ಲಿ ಪಾನೀಯ ಕುಡಿಯುವಾಗ ಸ್ಟ್ರಾ ನಿರಾಕರಿಸಿ, ಅಂಗಡಿಗೆ ನಿಮ್ಮದೇ ಚೀಲವನ್ನು ಕೊಂಡೊಯ್ಯಿರಿ, ಪ್ಲಾಸ್ಟಿಕ್ ಲೋಟಗಳನ್ನು ತ್ಯಜಿಸಿ, ನಿಮ್ಮ ನೆರೆಹೊರೆಯ ಅಂಗಡಿಮುಂಗಟ್ಟುಗಳಿಗೆ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿ, ಕಸ ವಿಂಗಡಿಸಿ ಮತ್ತು ನಿಮ್ಮ ನಗರ ಪಾಲಿಕೆಯವರಿಗೆ ಕಸ ಸರಿಯಾಗಿ ಸಂಸ್ಕರಿಸುವಂತೆ ಒತ್ತಾಯಿಸಿ. ಪ್ರತಿಯೊಬ್ಬರ ಸಣ್ಣ ಬದಲಾವಣೆ ನಮ್ಮ ಮುಂದಿನ ಪ್ಲಾಸ್ಟಿಕ್ ರಹಿತ ಪ್ರಪಂಚಕ್ಕೆ ನಾಂದಿ ಹಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.