ETV Bharat / bharat

ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ: ಭಾರತದ ಸಾಕ್ಷರತೆ ಪ್ರಮಾಣವೆಷ್ಟು?

author img

By

Published : Sep 8, 2020, 7:01 AM IST

ಸಾಕ್ಷರತೆ ಎಂಬುದು ಮನುಷ್ಯನ ಘನತೆ ಮತ್ತು ಮಾನವ ಹಕ್ಕು ಆಗಿದೆ. ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1966ರಲ್ಲಿ ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8 ನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಿಸಲಾಯಿತು.

ಅಂತಾರಾಷ್ಟ್ರೀಯ ಸಾಕ್ಷರತಾ ದಿನ
ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಪ್ರತಿ ವರ್ಷದಂತೆ ಈ ವರ್ಷ ಕೂಡ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವವ್ಯಾಪಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಾಕ್ಷರತೆಯೂ ಯುಎನ್‌ನ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಪ್ರಮುಖ ಅಂಶವಾಗಿದೆ ಮತ್ತು ಯುಎನ್‌ನ 2030 ರ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಯಾಗಿದೆ.

ಸರ್ಕಾರಗಳಿಗೆ, ನಾಗರಿಕ ಸಮಾಜಗಳಿಗೆ ಮತ್ತು ಜನರಿಗೆ ವಿಶ್ವದ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಅವಕಾಶವನ್ನು ಮತ್ತು ಸಾಕ್ಷರತಾ ಸವಾಲುಗಳನ್ನು ಮೀರಿ ನಿಲ್ಲಲು ಈ ದಿನವನ್ನು ಆಚರಿಸಲಾಗುತ್ತದೆ ಎಂದು ಯುನೆಸ್ಕೋ ಹೇಳುತ್ತದೆ.

ಎಲ್ಲಾ ಯುವಜನರು ಸಾಕ್ಷರತೆ ಸಾಧಿಸುವುದನ್ನು ಖಾತ್ರಿಪಡಿಸುವ ಸುಸ್ಥಿರ ಅಭಿವೃದ್ಧಿ ಗುರಿ 4 ಈ ಗುರಿಗಳಲ್ಲಿ ಒಂದಾಗಿದೆ. ಈ ಕೌಶಲ್ಯಗಳಿಲ್ಲದ ವಯಸ್ಕರಿಗೆ ಅವುಗಳನ್ನು ಪಡೆಯಲು ಅವಕಾಶವನ್ನು ನೀಡಲಾಗುತ್ತದೆ. ದೇಶದಾದ್ಯಂತ ಜನರಿಗೆ ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವುದು ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಅಂಶ ಎಂದು ಪರಿಗಣಿಸಲಾಗಿದೆ.

ಬಡತನ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಪ್ರತಿಯೊಬ್ಬ ಮನುಷ್ಯನು ಸಾಕ್ಷರನಾಗಿರುವುದು ಅತಿ ಮುಖ್ಯವಾಗಿರುತ್ತದೆ.ಬಡತನ ನಿರ್ಮೂಲನೆಯಿಂದ, ಜನಸಂಖ್ಯೆ ನಿಯಂತ್ರಣದಿಂದ ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದರಿಂದ ಜನರ ವೈಯುಕ್ತಿಕ ಬೆಳವಣಿಗೆ ಸಮಗ್ರ ರೀತಿಯಲ್ಲಿ ಆಗುತ್ತದೆ. ಇದು ರಾಷ್ಟ್ರ ಮತ್ತು ವಿಶ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ.

ಯುನಿಸ್ಕೊ ​​ಎಸ್‌ಡಿಜಿ 4 ನಿಂದ ಕೋವಿಡ್ -19 ರ ನಂತರದ ಯುಗದಲ್ಲಿ ಯುವಕರು ಮತ್ತು ವಯಸ್ಕರ ಸಾಕ್ಷರತೆ ಪ್ರಮಾಣ ಮತ್ತು ಕಲಿಕೆಯನ್ನು ಮರುರೂಪಿಸಲು ಸಾಮೂಹಿಕವಾಗಿ ಜಾಗತಿಕ ಚರ್ಚೆಯನ್ನು ಪ್ರಾರಂಭಿಸುತ್ತದೆ. ಕಳೆದ ದಶಕಗಳಲ್ಲಿ ವಿಶ್ವವು ಸಾಕ್ಷರತೆಯಲ್ಲಿ ಸ್ಥಿರ ಪ್ರಗತಿಯನ್ನು ಸಾಧಿಸಿದೆ. ಆದರೂ ಜಾಗತಿಕವಾಗಿ 773 ಮಿಲಿಯನ್ ವಯಸ್ಕರು ಮತ್ತು ಯುವಜನರಿಗೆ ಮೂಲ ಸಾಕ್ಷರತೆಯ ಕೌಶಲ್ಯವಿಲ್ಲ. 617 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ಓದುವಿಕೆ ಮತ್ತು ಗಣಿತಶಾಸ್ತ್ರದಲ್ಲಿ ಕನಿಷ್ಠ ಪ್ರಾವೀಣ್ಯತೆಯನ್ನು ಸಾಧಿಸುತ್ತಿಲ್ಲ.

ಇತ್ತೀಚಿನ ಕೋವಿಡ್​​-19 ಬಿಕ್ಕಟ್ಟು ಅಸ್ತಿತ್ವದಲ್ಲಿರುವ ಸಾಕ್ಷರತಾ ಸವಾಲುಗಳ ವರ್ಧಕವಾಗಿದೆ, ಇದು ಶಾಲಾ ಶಿಕ್ಷಣ ಮತ್ತು ಕಲಿಕೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ 190ಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಇದು ವಿಶ್ವದ ವಿದ್ಯಾರ್ಥಿ ಜನಸಂಖ್ಯೆಯ ಶೇ.91 ರಷ್ಟು ಅಂದರೇ 1.6 ಶತಕೋಟಿ ಜನಸಂಖ್ಯೆಯ ಶಿಕ್ಷಣದ ಮೇಲೆ ಪರಿಣಾಮ ಬೀರಿತು. ಕೊರೊನಾವೂ ಸುಮಾರು 63 ದಶಲಕ್ಷ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ಮೇಲೆ ಪರಿಣಾಮ ಬೀರಿದೆ.

ಸರ್ಕಾರವೂ ಕೋವಿಡ್​ನಿಂದಾಗಿ ಆನ್​ಲೈನ್​ ತರಗತಿಗಳನ್ನು ಪ್ರಾರಂಭಿಸಿದೆ. ಅಲ್ಲದೇ ಟಿವಿ, ರೇಡಿಯೋ ಅಥವಾ ದೊಡ್ಡ ಹಾಲ್​ಗಳಲ್ಲಿ ಪಾಠಗಳನ್ನು ಮಾಡಲು ಪ್ರಾರಂಭಿಸಲಾಗಿದೆ. ಇದು ಯುವಕರ ಮತ್ತು ವಯಸ್ಕರ ಸಾಕ್ಷರತೆ ಮತ್ತು ಶಿಕ್ಷಣ ಸೇರಿದಂತೆ ಕೆಲವು ನಿರ್ದಿಷ್ಟ ಉಪ-ವಲಯಗಳ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ.

ಅನೇಕ ದೇಶಗಳಲ್ಲಿ ವಯಸ್ಕರು ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವುದಿಲ್ಲ. ಕೋವಿಡ್​-19 ಬಿಕ್ಕಟ್ಟಿನ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಹಲವಾರು ವಯಸ್ಕ ಸಾಕ್ಷರತಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಅನೇಕ ಯುವಕರು ಮತ್ತು ವಯಸ್ಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 1946 ರಿಂದ ಯುನೆಸ್ಕೋ ಜಾಗತಿಕ ಸಾಕ್ಷರತಾ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ. 2030 ರ ವೇಳೆಗೆ ಶಿಕ್ಷಣದ ಮೂಲಕ ಇಡೀ ವಿಶ್ವವನ್ನು ಬಡತನ ಮುಕ್ತವನ್ನಾಗಿ ಮಾಡೋ ಯೋಜನೆಯನ್ನು ಯುನೆಸ್ಕೋ ಹಾಕಿಕೊಂಡಿದೆ.

ಸಾಕ್ಷರತೆಯು ಸುಸ್ಥಿರ ಅಭಿವೃದ್ಧಿಗೆ ಒಂದು ವೇದಿಕೆಯಾಗಿದ್ದು. ಉತ್ತಮ ಶಿಕ್ಷಣ ಸಿಕ್ಕರೇ ಮಕ್ಕಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಭಾವಹಿಸುವಿಕೆಯನ್ನು ಶಕ್ತಗೊಳಿಸುತ್ತದೆ. ಅಲ್ಲದೇ ಬಡತನವನ್ನು ಕಡಿಮೆ ಮಾಡುತ್ತದೆ ಮತ್ತು ಜೀವನ ಅವಕಾಶಗಳನ್ನು ವಿಸ್ತರಿಸುತ್ತದೆ.

ಜಾಗತಿಕವಾಗಿ ಕನಿಷ್ಠ 750 ಮಿಲಿಯನ್ ಯುವಕರು ಮತ್ತು ವಯಸ್ಕರಿಗೆ ಇನ್ನೂ ಓದಲು ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲ. 250 ಮಿಲಿಯನ್ ಮಕ್ಕಳು ಮೂಲ ಸಾಕ್ಷರತಾ ಕೌಶಲ್ಯಗಳನ್ನು ಪಡೆಯಲು ವಿಫಲರಾಗಿದ್ದಾರೆ. ಇದು ಕಡಿಮೆ ಸಾಕ್ಷರರು ಮತ್ತು ಕಡಿಮೆ-ನುರಿತ ಯುವಕರು, ವಯಸ್ಕರನ್ನು ತಮ್ಮ ಸಮುದಾಯಗಳು ಮತ್ತು ಸಮಾಜಗಳಲ್ಲಿ ಪೂರ್ಣ ಭಾಗವಹಿಸುವಿಕೆಯಿಂದ ಹೊರಗಿಡುತ್ತದೆ. ಯುನೆಸ್ಕೋ ವಿಶ್ವಾದ್ಯಂತ ಸಾಕ್ಷರತೆಯನ್ನು ಉತ್ತೇಜಿಸಲು ಈ ಕೆಳಗಿನ ವಿಧಾನಗಳನ್ನು ಅನುಸರಿಸುತ್ತದೆ.

ಬಾಲ್ಯದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು.

ಶಿಕ್ಷಣದಿಂದ ವಂಚಿತರಾದ ಯುವಕರು ಮತ್ತು ವಯಸ್ಕರಿಗೆ ಶಿಕ್ಷಣ ಸಿಗುವಂತೆ ಮಾಡಬೇಕು.

ಸಾಕ್ಷರತೆ ಪರಿಸರವನ್ನು ಅಭಿವೃದ್ಧಿಪಡಿಸಬೇಕು

ವಿಶ್ವ ಸಾಕ್ಷರತೆಯ ಕುರಿತು ಕೆಲವು ಸಂಗತಿಗಳು:

ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಯುನೆಸ್ಕೋ 1965 ರ ನವೆಂಬರ್ 7 ರಂದು ಆಚರಿಸಬೇಕೆಂದು ನಿರ್ಧರಿಸಿತು.

ಈ ದಿನವನ್ನು ಮೊದಲ ಬಾರಿಗೆ 1966 ರಲ್ಲಿ ಸೆಪ್ಟೆಂಬರ್ 8 ರಂದು ಆಚರಿಸಲಾಯಿತು.

ಯುನೆಸ್ಕೋ ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಶ್ವ ಜನಸಂಖ್ಯೆಯ ಶೇ.84 ರಷ್ಟು ಸಾಕ್ಷರರು ಇದ್ದಾರೆ.

ಪ್ರಪಂಚದಾದ್ಯಂತ 250 ಮಿಲಿಯನ್ ಮಕ್ಕಳು ಚೆನ್ನಾಗಿ ಓದಲು ಅಥವಾ ಬರೆಯಲು ಅಶಕ್ತರಾಗಿದ್ದಾರೆ.

ವಿಶ್ವದ 775 ಮಿಲಿಯನ್ ಅನಕ್ಷರಸ್ಥ ವಯಸ್ಕರ ಮುಕ್ಕಾಲು ಭಾಗವು ಹತ್ತು ದೇಶಗಳಲ್ಲಿ ಕಂಡುಬರುತ್ತದೆ. ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೈಜೀರಿಯಾ, ಇಥಿಯೋಪಿಯಾ, ಈಜಿಪ್ಟ್, ಬ್ರೆಜಿಲ್, ಇಂಡೋನೇಷ್ಯಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ.

ವಿಶ್ವಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಐದು ವಯಸ್ಕರಲ್ಲಿ ಒಬ್ಬರು ಅನಕ್ಷರಸ್ಥರು ಇದ್ದಾರೆ. 75 ಮಿಲಿಯನ್ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅನೇಕರು ಅನಿಯಮಿತವಾಗಿ ಹಾಜರಾಗುತ್ತಾರೆ ಅಥವಾ ಡ್ರಾಪ್ ಔಟ್ ಆಗಿದ್ದಾರೆ.

ಭಾರತದ ಸಾಕ್ಷರತೆ ಕುರಿತ ಕೆಲವು ಮಾಹಿತಿ:

2011 ರ ಜನಗಣತಿಯ ಪ್ರಕಾರ, ಭಾರತದ ಸಾಕ್ಷರತೆಯ ಪ್ರಮಾಣ 74.04 ರಷ್ಟಿದೆ.

2011 ರ ಜನಗಣತಿಯ ಪ್ರಕಾರ, ಹೆಚ್ಚು ಸಾಕ್ಷರತೆ ಹೊಂದಿರುವ ಐದು ರಾಜ್ಯಗಳೆಂದರೇ, ಕೇರಳ- ಶೇ.93.91, ಲಕ್ಷದ್ವೀಪ- ಶೇ. 92.28, ಮಿಜೋರಾಂ- ಶೇ.91.58, ತ್ರಿಪುರ- ಶೇ.87.75 ಮತ್ತು ಗೋವಾ- ಶೇ.87.40 ರಷ್ಟು ಹೊಂದಿದ್ದಾವೆ.

ಭಾರತದಲ್ಲಿ 313 ಮಿಲಿಯನ್ ಅನಕ್ಷರಸ್ಥರಿದ್ದಾರೆ. ಅವರಲ್ಲಿ 59 ಪ್ರತಿಶತದಷ್ಟು ಮಹಿಳೆಯರು.

ಶಿಕ್ಷಣ, ಉದ್ಯೋಗ ಮತ್ತು ವೇತನಗಳಲ್ಲಿನ ಲಿಂಗ ತಾರತಮ್ಯ 1983 ಮತ್ತು 2010 ರ ನಡುವೆ ಕುಗ್ಗಿದೆ ಎಂದು ಡೇಟಾ ತೋರಿಸುತ್ತದೆ. ಭಾರತದಲ್ಲಿ ಪ್ರಸ್ತುತ 186 ಮಿಲಿಯನ್ ಮಹಿಳೆಯರು ಇದ್ದಾರೆ. ಅವರು ಯಾವುದೇ ಭಾಷೆಯಲ್ಲಿ ಸರಳವಾಗಿ ವಾಕ್ಯವನ್ನು ಓದಲು ಮತ್ತು ಬರೆಯಲು ಅರ್ಹರಾಗಿದ್ದಾರೆ.

ಇತ್ತೀಚೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಕ್ಕಳ ಮತ್ತು ಯುವ ಸಾಕ್ಷರತೆ ಕ್ರಮವಾಗಿ 93 ಮತ್ತು 94 ಪ್ರತಿಶತದಷ್ಟಿದೆ.

ಸರ್ಕಾರದ ಕ್ರಮಗಳು:

1988 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಸಾಕ್ಷರತಾ ಮಿಷನ್ (ಎನ್‌ಎಲ್‌ಎಂ) ವಯಸ್ಕರಿಗೆ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖವಾಗಿದೆ ಒಂದಾಗಿದೆ. ಇದು 15-35 ವರ್ಷದೊಳಗಿನ ಸಾಕ್ಷರರಲ್ಲದವರಿಗೆ ಕ್ರಿಯಾತ್ಮಕ ಸಾಕ್ಷರತೆಯನ್ನು ನೀಡುವತ್ತ ಗಮನಹರಿಸುತ್ತದೆ.

ಉದಾಹರಣೆಗೆ, ಮಿಡ್-ಡೇ- ಸ್ಕೀಮ್ (1995) ಮತ್ತು ಸರ್ವ ಶಿಕ್ಷಣ ಅಭಿಯಾನ್ (2001), ಜೊತೆಗೆ ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ, 2009) ಜಾರಿಗೆ ಸಾಕ್ಷರತೆಯನ್ನು ಸುಧಾರಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಶಿಕ್ಷಣದ ವರದಿ:

ಟಾಪ್ 5 ರಾಜ್ಯಗಳು:

ಕೇರಳ - 96.2%

ದೆಹಲಿ - 88.7%

ಉತ್ತರಾಖಂಡ- 87.6%

ಹಿಮಾಚಲ ಪ್ರದೇಶ -86.6%

ಅಸ್ಸಾಂ- 85.9%

ಕಡಿಮೆ ಸಾಕ್ಷರತೆ ಹೊಂದಿರುವ ರಾಜ್ಯಗಳು:

ಯುಪಿ- 73%

ತೆಲಂಗಾಣ -72.8%

ಬಿಹಾರ- 70.9%

ರಾಜಸ್ಥಾನ - 69.7%

ಆಂಧ್ರಪ್ರದೇಶ -66.4%

ETV Bharat Logo

Copyright © 2024 Ushodaya Enterprises Pvt. Ltd., All Rights Reserved.