ಶಾಂತಿನಿಕೇತನ್( ಪಶ್ಚಿಮಬಂಗಾಳ): ವಿಶ್ವ ಭಾರತಿ ಕ್ಯಾಂಪಸ್ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಸಾವಿರಾರೂ ಜನ ಕ್ಯಾಂಪಸ್ ಮೇಲೆ ಏಕಾಏಕಿ ದಾಳಿ ಮಾಡಿ ಕಟ್ಟುತ್ತಿರುವ ಕಾಂಪೌಂಡ್ ಗೋಡೆಯನ್ನು ಕೆಡವಿದರು. ಈ ಘಟನೆ ಪಶ್ಚಿಮಬಂಗಾಳದ ಬಿರ್ಭೋಮ್ ಜಿಲ್ಲೆಯಲ್ಲಿ ನಡೆದಿದೆ.
ವಿಶ್ವ ಭಾರತಿ ಕ್ಯಾಂಪಸ್ ಗೋಡೆ ನಿರ್ಮಾಣ ವಿವಾದ ಬಹು ದಿನಗಳಿಂದ ನಡೆಯುತ್ತಲೇ ಇದೆ. ರವೀಂದ್ರನಾಥ್ ಟಾಗೂರ್ ಅವರ ನೀತಿ ಪ್ರಕಾರ ಈ ಕ್ಯಾಂಪಸ್ ಸುತ್ತ - ಮುತ್ತ ಗೋಡೆ ನಿರ್ಮಾಣ ಮಾಡುವಂತಿಲ್ಲ. ಆದರೆ ವಿವಿ ಇದೀಗ ತನ್ನ ಜಾಗದ ಸುತ್ತ ಆವರಣ ನಿರ್ಮಾಣ ಮಾಡಲು ಮುಂದಾಗಿದೆ. ಆದರೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ರೊಚ್ಚಿಗೆದ್ದ ಸ್ಥಳೀಯರು ಏಕಾಏಕಿ ದಾಳಿ ನಡೆಸಿ ಗೋಡೆಯನ್ನು ಕೆಡವಿದರು. ಬಳಿಕ ಗೋಡೆ ಕಟ್ಟಲು ತಂದಿದ್ದ ಸಾಮಗ್ರಿಗಳನ್ನು ಸಹ ಧ್ವಂಸ ಮಾಡಿದರು.