ಚಿತ್ತೂರು(ಆಂಧ್ರಪದೇಶ): ಮೃತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಐದು ಊರ ಜನರೆಲ್ಲ ಆಸ್ಪದ ನೀಡದಿರೋ ಘಟನೆ ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಗ್ರಾಮೀಣ ವಲಯದ ವಲಸಪಲ್ಲೆಯಲ್ಲಿ ನಡೆದಿದೆ. ಸುತ್ತಮುತ್ತಲಿನ ಐದು ಹಳ್ಳಿಗಳ ಜನ ಕೊರೊನಾದಿಂದ ಸಾವನ್ನಪ್ಪಿರಬಹುದೆಂಬ ಅನುಮಾನದಿಂದ ಅಂತ್ಯಕ್ರಿಯೆ ತಡೆದಿದ್ದಾರೆ.
ಮದನಪಲ್ಲೆ ಗ್ರಾಮೀಣ ವಲಯದ ಈಶ್ವರಮ್ಮ ಕಾಲೋನಿಯ 43 ವರ್ಷದ ವ್ಯಕ್ತಿಯು ಸಾವನ್ನಪ್ಪಿದ್ದು, ಮೃತ ವ್ಯಕ್ತಿಯು ಉಸಿರಾಡಲು ತೊಂದರೆಯಿಂದ ಬಳಲುತ್ತಿದ್ದರು. ಕೋವಿಡ್-19 ಪರೀಕ್ಷೆ ನಡೆಸಿ ನೆಗೆಟಿವ್ ಬಂದ್ರೇ ಮಾತ್ರ ಮಣ್ಣು ಮಾಡಲು ಅವಕಾಶ ಮಾಡಿ ಕೊಡುವುದಾಗಿ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಮೃತರ ಸಂಬಂಧಿಕರು ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದ್ದಾರೆ. ಪೊಲೀಸರು ಬಂದರೂ ಕೂಡ ವೈದ್ಯಕೀಯ ಸಿಬ್ಬಂದಿ ಬಂದಿಲ್ಲ. ಸಂಬಂಧಿಕರು ಬೆಳಗ್ಗೆಯಿಂದ ಮೃತ ದೇಹದೊಂದಿಗೆ ಕಾಯುತ್ತಿದ್ದಾರೆ.