ನವದೆಹಲಿ: ಮೊದಲ ಬ್ಯಾಚ್ನಲ್ಲಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದ ಐದು ರಫೇಲ್ ಫೈಟರ್ ಜೆಟ್ಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು, 17 ಸ್ಕ್ವಾಡ್ರನ್ ಗೋಲ್ಡನ್ ಆರೋಸ್ನ ಭಾಗವಾಗಿವೆ.
-
#WATCH: Water cannon salute given to the five Rafale fighter aircraft at Ambala airbase. #Haryana pic.twitter.com/SB9jhyp1Ox
— ANI (@ANI) September 10, 2020 " class="align-text-top noRightClick twitterSection" data="
">#WATCH: Water cannon salute given to the five Rafale fighter aircraft at Ambala airbase. #Haryana pic.twitter.com/SB9jhyp1Ox
— ANI (@ANI) September 10, 2020#WATCH: Water cannon salute given to the five Rafale fighter aircraft at Ambala airbase. #Haryana pic.twitter.com/SB9jhyp1Ox
— ANI (@ANI) September 10, 2020
ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಹಾಗೂ ಭಾರತದ ವಾಯುಪಡೆಯ ಉನ್ನತಾಧಿಕಾರಿಗಳ ಸಮಕ್ಷಮದಲ್ಲಿ ನಡೆದ ಸಮಾರಂಭದಲ್ಲಿ ರಫೇಲ್ ಫೈಟರ್ ಜೆಟ್ಗಳು ವಾಯುಪಡೆಗೆ ಸೇರ್ಪಡೆಯಾದವು. ರಫೇಲ್ ವಿಮಾನಕ್ಕೆ ಸಾಂಪ್ರದಾಯಿಕ ಜಲ ಫಿರಂಗಿ ವಂದನೆ ಸಲ್ಲಿಸುವ ಮೂಲಕ 17 ಸ್ಕ್ವಾಡ್ರನ್‌ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸಲಾಯಿತು.
-
#WATCH Rafale fighter aircraft flying at low-speed during an air display at Indian Air Force base in Ambala pic.twitter.com/8UhgbROzRN
— ANI (@ANI) September 10, 2020 " class="align-text-top noRightClick twitterSection" data="
">#WATCH Rafale fighter aircraft flying at low-speed during an air display at Indian Air Force base in Ambala pic.twitter.com/8UhgbROzRN
— ANI (@ANI) September 10, 2020#WATCH Rafale fighter aircraft flying at low-speed during an air display at Indian Air Force base in Ambala pic.twitter.com/8UhgbROzRN
— ANI (@ANI) September 10, 2020
ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್ ಯುದ್ಧ ವಿಮಾನಗಳಿಗಿದೆ. ಏರ್ ಟು ಏರ್ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ ಏರ್ ಟು ಅರ್ತ್ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ ನೈಪುಣ್ಯವನ್ನು ಈ ಸಮರ ವಿಮಾನಗಳು ಹೊಂದಿವೆ.
-
#WATCH Defence Minister Rajnath Singh and Minister of the Armed Forces of France Florence Parly, witness the traditional 'Sarva Dharma Puja' at the Rafale induction ceremony, at Ambala airbase pic.twitter.com/0z74ECflJd
— ANI (@ANI) September 10, 2020 " class="align-text-top noRightClick twitterSection" data="
">#WATCH Defence Minister Rajnath Singh and Minister of the Armed Forces of France Florence Parly, witness the traditional 'Sarva Dharma Puja' at the Rafale induction ceremony, at Ambala airbase pic.twitter.com/0z74ECflJd
— ANI (@ANI) September 10, 2020#WATCH Defence Minister Rajnath Singh and Minister of the Armed Forces of France Florence Parly, witness the traditional 'Sarva Dharma Puja' at the Rafale induction ceremony, at Ambala airbase pic.twitter.com/0z74ECflJd
— ANI (@ANI) September 10, 2020
ಎಂತಹ ಹವಾಮಾನದಲ್ಲೂ ಶತ್ರು ಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಕಣ್ಣಿಗೆ ಕಾಣಿಸದಷ್ಟು ದೂರದಿಂದ ದಾಳಿ ಮಾಡಬಲ್ಲ ಶಕ್ತಿ ರಫೇಲ್ ಯುದ್ಧ ವಿಮಾನಗಳಿಗಿದ್ದು, ನೂತನ ಜೆಟ್ಗಳಿಂದ ಭಾರತೀಯ ರಕ್ಷಣಾ ವ್ಯವಸ್ಥೆಯ ಬಲ ಮತ್ತಷ್ಟು ಹೆಚ್ಚಿದೆ.