ಇಂದೋರ್ (ಮಧ್ಯ ಪ್ರದೇಶ) : ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ, ಮಧ್ಯಪ್ರದೇಶದ ಇಂದೋರ್ನಲ್ಲಿ ಡೆಡ್ಲಿ ವೈರಸ್ ವೇಗವಾಗಿ ಹರಡತೊಡಗಿದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸದ್ದು ಮಾಡುತ್ತಿದ್ದು ಇಂದೋರ್ ಇದೀಗ ಕೊರೊನಾ ವೈರಸ್ ಪೀಡಿತರಿಂದ ತುಂಬುತ್ತಿದೆ. ರಾಜ್ಯ ಶೇ 72 ರಷ್ಟು ಸೋಂಕಿತ ಪ್ರಕರಣಗಳು ಇದೇ ನಗರದಲ್ಲಿ ಪತ್ತೆಯಾಗಿದೆ.
ರಾಜ್ಯದಲ್ಲಿ ಸೋಂಕು ತಗುಲಿ 36 ಮಂದಿ ಸಾವನ್ನಪ್ಪಿದ್ದು, 27 ಜನರು ಇಂದೋರ್ನವರೇ ಆಗಿದ್ದಾರೆ. ಜೊತೆಗೆ ಇಬ್ಬರು ವೈದ್ಯರು ಕೂಡಾ ಇಲ್ಲಿ ಸಾವಿಗೆ ಶರಣಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ 402 ಸೋಂಕಿತ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 249 ಪ್ರಕರಣಗಳು ಇಂದೋರ್ನಲ್ಲಿ ದಾಖಲಾಗಿವೆ. ಉಳಿದಂತೆ 29 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ದೇಶದಲ್ಲಿ 7,447 ಪ್ರಕರಣಗಳು ಕಂಡು ಬಂದಿದ್ದು, ಇದರಲ್ಲಿ 643 ಮಂದಿ ಗುಣಮುಖರಾದರೆ, 239 ಸಾವು ಸಂಭವಿಸಿವೆ. ಮಹಾರಾಷ್ಟ್ರದಲ್ಲೂ 1,500ಕ್ಕೂ ಹೆಚ್ಚು ಪ್ರಕರಣ ವರದಿಯಾಗಿದೆ.