ETV Bharat / bharat

ಪಿಪಿಇ ಕಿಟ್​ ಅವಾಂತರ.. ಕ್ಯಾನ್ಸರ್​ನಿಂದ ಸತ್ತ ಉದ್ಯಮಿ ಕುಟುಂಬಕ್ಕೆ ಕೋವಿಡ್​ ರೋಗಿಯ ಶವ ಹಸ್ತಾಂತರ

ಮಧ್ಯಪ್ರದೇಶದ ಖಂದ್ವಾ ಜಿಲ್ಲೆಯ ಗ್ರೇಟರ್​ ಕೈಲಾಸ್​​ ಆಸ್ಪತ್ರೆ ಉದ್ಯಮಿಯೊಬ್ಬರ ಮೃತದೇಹವೆಂದು ಕೋವಿಡ್​ ರೋಗಿಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದೆ.

COVID-19
ಆಸ್ಪತ್ರೆ ಎಡವಟ್ಟು
author img

By

Published : Sep 27, 2020, 5:05 PM IST

ಖಂದ್ವಾ (ಮಧ್ಯಪ್ರದೇಶ): ಖಾಸಗಿ ಆಸ್ಪತ್ರೆಯೊಂದು ಉದ್ಯಮಿಯೊಬ್ಬರ ಮೃತದೇಹವೆಂದು ಕೋವಿಡ್​ ರೋಗಿಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿರುವ ಘಟನೆ ಮಧ್ಯಪ್ರದೇಶದ ಖಂದ್ವಾ ಜಿಲ್ಲೆಯಲ್ಲಿ ನಡೆದಿದೆ.

ಯಾವುದೋ ಕುಟುಂಬಕ್ಕೆ ಕೋವಿಡ್​ ರೋಗಿಯ ಮೃತದೇಹ ಹಸ್ತಾಂತರ

ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿದ್ದ ​ಖಂದ್ವಾ ನಿವಾಸಿಯಾಗಿರುವ ಗೆಂಡಾಲಾಲ್ ರಾಥೋಡ್ ಎಂಬ ಉದ್ಯಮಿ ನಾಲ್ಕು ದಿನಗಳ ಹಿಂದೆ ಇಂದೋರ್​ನ ಗ್ರೇಟರ್​ ಕೈಲಾಸ್​​ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶುಕ್ರವಾರ ರಾತ್ರಿ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಬಳಿಕ ಮೃತಪಟ್ಟಿದ್ದಾರೆ.

ಗೆಂಡಾಲಾಲ್ ರಾಥೋಡ್​ರ ಮೃತದೇಹವನ್ನು ಕೊರೊನಾ ರೋಗಿಗಳ ಮೃತದೇಹಗಳ ಜೊತೆ ಇಟ್ಟಿದ್ದಾರೆ. ಯಾರದ್ದೋ ಮೃತದೇಹವನ್ನು ರಾಥೋಡ್ ಕುಟುಂಬಕ್ಕೆ ಕೊರೊನಾ ನಿಯಮಗಳನ್ನು ಪಾಲಿಸದೆ ಹಸ್ತಾಂತರ ಮಾಡಿದ್ದು, ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.