ನವದೆಹಲಿ: ದೇಶೀಯ ಕೊರೊನಾ ವೈರಸ್ ಪರೀಕ್ಷಾ ಕಿಟ್‌ಗಳನ್ನು ಮೇ ಅಂತ್ಯದ ವೇಳೆಯಲ್ಲಿ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಮಂಗಳವಾರ ಹೇಳಿದ್ದಾರೆ.
"ನಾವು ಮೇ ವೇಳೆಗೆ ಭಾರತದಲ್ಲಿ ರಿವರ್ಸ್ ಟ್ರಾನ್ಸ್ಕ್ರಿಪ್ಷನ್ - ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ಟಿ-ಪಿಸಿಆರ್) ಮತ್ತು ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಸುಧಾರಿತ ಹಂತದಲ್ಲಿವೆ ಮತ್ತು ಐಸಿಎಂಆರ್‌ನಿಂದ ಅನುಮೋದನೆ ಪಡೆದ ನಂತರ ಉತ್ಪಾದನೆ ಪ್ರಾರಂಭವಾಗುತ್ತದೆ. ಮೇ 31 ರೊಳಗೆ ದಿನಕ್ಕೆ ಒಂದು ಲಕ್ಷ ಪರೀಕ್ಷೆಗಳ ಗುರಿ ಹೊಂದಲಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈ ಹಿಂದೆ ದೆಹಲಿಯ ಎಲ್ಜಿ, ದೆಹಲಿ ಆರೋಗ್ಯ ಸಚಿವರು, ಎಂಸಿಡಿ ಆಯುಕ್ತರು, ದೆಹಲಿಯ ಎಲ್ಲ ಜಿಲ್ಲೆಗಳ ಡಿಎಂಗಳು ಮತ್ತು ಡಿಸಿಪಿ ಹಾಗೂ ಕೇಂದ್ರ / ರಾಜ್ಯ ಮತ್ತು ಜಿಲ್ಲಾ ಕಣ್ಗಾವಲು ಅಧಿಕಾರಿಗಳು, ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಮಾವೇಶವನ್ನು ಕೇಂದ್ರ ಆರೋಗ್ಯ ಸಚಿವರು ನಡೆಸಿದ್ದರು.
ಭಾರತದಲ್ಲಿ ಒಟ್ಟು 29,435 COVID-19 ಪ್ರಕರಣಗಳು ವರದಿಯಾಗಿವೆ. 6,869 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.