ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜೂನ್ ತಿಂಗಳಲ್ಲಿ ಭಾರತದ ಸೇವಾ ವಲಯದಲ್ಲಿನ ಚಟುವಟಿಕೆಗಳು ತೀವ್ರ ಕುಸಿತ ಕಂಡಿವೆ ಎಂದು ಮಾಸಿಕ ಸಮೀಕ್ಷೆಯಿಂದ ತಿಳಿದುಬಂದಿದೆ.
ಐಎಚ್‌ಎಸ್ ಮಾರ್ಕಿಟ್ ಇಂಡಿಯಾ ಸರ್ವೀಸಸ್ ಬಿಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್ ಸಮೀಕ್ಷೆ ಅನ್ವಯ, ಜೂನ್‌ನಲ್ಲಿ ಶೇ 33.7ರಷ್ಟು ಆಗಿದ್ದು, ಮೇ ತಿಂಗಳಲ್ಲಿ 2.6ರಷ್ಟು ದಾಖಲಾಗಿತ್ತು.
ಜೂನ್ ವೇಳೆ ದೇಶದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟು ತೀವ್ರ ಉಲ್ಬಣಗೊಂಡಿದ್ದರಿಂದ ಸೇವಾ ವಲಯದ ವಹಿವಾಟಿಗೆ ಹಿನ್ನಡೆ ಆಗಿದೆ ಎಂದು ಐಎಚ್‌ಎಸ್ ಮಾರ್ಕಿಟ್‌ನ ಅರ್ಥಶಾಸ್ತ್ರಜ್ಞ ಜೋ ಹೇಯ್ಸ್ ಹೇಳಿದ್ದಾರೆ.
ಸರಳವಾಗಿ ಹೇಳುವುದಾದರೆ, ದೇಶವು ಅಭೂತಪೂರ್ವ ಆರ್ಥಿಕ ಕುಸಿತದಲ್ಲಿ ಸಿಲುಕಿಕೊಂಡಿದೆ. ಇದು ಸೋಂಕಿನ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದ ಹೊರತು ಈ ವರ್ಷದ ದ್ವಿತೀಯಾರ್ಧದಲ್ಲಿ ಖಂಡಿತವಾಗಿಯೂ ಏರಿಕೆಯತ್ತ ಮುಖಮಾಡುವುದಿಲ್ಲ ಎಂದು ಹೇಯ್ಸ್ ಹೇಳಿದರು.
ಸಮೀಕ್ಷೆಯ ಪ್ರಕಾರ, ನಿಧಾನಗತಿಯ ಕುಸಿತವು ಚಟುವಟಿಕೆಯ ಮಟ್ಟಗಳಲ್ಲಿ ಕೆಲವು ಸ್ಥಿರೀಕರಣವನ್ನು ಪ್ರತಿಬಿಂಬಿಸುತ್ತದೆ. ಸುಮಾರು 59 ಪ್ರತಿಶತದಷ್ಟು ಸಂಸ್ಥೆಗಳು ಮೇ ತಿಂಗಳಿನಿಂದ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಯನ್ನು ವರದಿ ಮಾಡಿಲ್ಲ. ಕೇವಲ ಶೇ 4ರಷ್ಟು ಬೆಳವಣಿಗೆಯನ್ನು ಹೊಂದಿದ್ದರೆ, ಶೇ. 37ರಷ್ಟು ಕಡಿತ ದಾಖಲಾಗಿದೆ.