ಕೇರಳ: ಇಟಲಿಯಿಂದ ವಾಪಸ್ಸಾಗಿದ್ದ ಕೊರೊನಾ ಸೋಂಕಿತ ವೃದ್ಧ ದಂಪತಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಇಂದು ಡಿಸ್ಚಾರ್ಜ್ ಮಾಡಲು ನಿರ್ಧರಿಸಲಾಗಿದೆ.
ಕೋವಿಡ್-19 ವೈರಸ್ ಸೋಂಕು ತಗುಲಿ 93 ವರ್ಷದ ವೃದ್ಧ ಥಾಮಸ್ ಅಬ್ರಾಹಂ ಐಸೋಲೇಶನ್‌ನಲ್ಲಿದ್ದಾಗ ಕೇರಳದ ಜನಪ್ರಿಯ ಆಹಾರವಾದ ಹಲಸಿನ ಹಣ್ಣಿನ ತಿನಿಸುಗಳು ಮತ್ತು ಹಾಗೂ ಅಕ್ಕಿಯಿಂದ ಮಾಡಲ್ಪಟ್ಟ ಖಾದ್ಯಗಳನ್ನು ಸೇವಿಸುತ್ತಿದ್ದರಂತೆ.
ವಿದೇಶದಿಂದ ಕೊರೊನಾ ಅಂಟಿಸಿಕೊಂಡು ಬಂದಿದ್ದ ಥಾಮಸ್ (93) ಮತ್ತವರ ಪತ್ನಿ ಮರಿಯಮ್ಮ, (88) ಇಬ್ಬರನ್ನು ಐಸೋಲೇಶನ್ ಕೇಂದ್ರದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಇವರು ರಾಜ್ಯದ ಜನಪ್ರಿಯ ಹಲಸಿನ ಹಣ್ಣಿನ ತಿನಿಸುಗಳು ಮತ್ತು ಹಾಗೂ ಅಕ್ಕಿಯಿಂದ ಮಾಡಲ್ಪಟ್ಟ ಖಾದ್ಯಗಳನ್ನು ಸೇವಿಸುತ್ತಿದ್ದರಂತೆ.
ಇದೀಗ ಈ ದಂಪತಿ ಗುಣಮುಖರಾಗಿದ್ದು, ಮನೆಗೆ ಹಿಂತಿರುಗುವ ತಯಾರಿಯಲ್ಲಿದ್ದರೆ. ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಇಂದು ಈ ದಂಪತಿಯನ್ನು ಡಿಸ್ಚಾರ್ಜ್ ಮಾಡಲಾಗುವುದೆಂದು ವೈದ್ಯರು ತಿಳಿಸಿದ್ದಾರೆ.
ಅಬ್ರಾಹಂ 'ಕಪ್ಪಾ' (ಟಪಿಯೋಕಾ) ಮತ್ತು 'ಚಕ್ಕಾ' (ಜಾಕ್‌ಫ್ರೂಟ್) ತಿಂಡಿಗಳನ್ನು ಇಷ್ಟಪಡುತ್ತಾರೆ. ಮರಿಯಮ್ಮ ಮೀನಿನ ಖಾದ್ಯಗಳನ್ನು ಇಷ್ಟಪಡುತ್ತಾರೆ. ಐಸೊಲೇಷನ್ ವಾರ್ಡ್‌ನಲ್ಲಿದ್ದಾಗಲೂ, ಈ ದಂಪತಿ ಊಟಕ್ಕೆಂದು ತೆಂಗಿನಕಾಯಿ ಚಟ್ನಿ ಮತ್ತು 'ಕಪ್ಪಾ' ಇತ್ಯಾದಿಗಳನ್ನು ನೀಡುವಂತೆ ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ.
ಈ ವೃದ್ಧ ದಂಪತಿ ಇಷ್ಟು ಬೇಗ ಗುಣಮುಖರಾಗಲು ಇವರ ಉತ್ತಮ ಜೀವನ ಶೈಲಿಯೇ ಕಾರಣ ಎನ್ನುತ್ತಾರೆ ಮೊಮ್ಮಗ. ಅಬ್ರಾಹಂ ಧೂಮಪಾನ, ಮದ್ಯಪಾನ ಮಾಡುತ್ತಿರಲಿಲ್ಲ. ಜಿಮ್‌ಗೂ ಹೋಗದೆ, ಸಿಕ್ಸ್ ಪ್ಯಾಕ್ ದೇಹ ಹೊಂದಿದ್ದರು. ಕೊರೊನಾ ರೋಗದಿಂದ ಬದುಕುಳಿದಿರುವುದು ಒಂದು ಪವಾಡ ಎಂದಿದ್ದಾರೆ ಇಟಲಿಯಲ್ಲಿರುವ ಇವರ ಮಗ. ಅಲ್ಲದೇ ಇಟಲಿಯಲ್ಲಿರುವುದಕ್ಕಿಂತ ಕೇರಳದಲ್ಲಿದ್ದರೆ ಕೊರೊನಾದಿಂದ ಬದುಕುಳಿಯಬಹುದು ಅನ್ನೋದು ಇವರ ಅಭಿಪ್ರಾಯ.
ಮಾರಕ ಖಾಯಿಲೆಯಿಂದ ತಮ್ಮ ತಂದೆ ತಾಯಿ ಗುಣಮುಖವಾಗಿದ್ದು ಕೇರಳ ರಾಜ್ಯ ಸರ್ಕಾರವನ್ನು ಇಟಲಿಯಲ್ಲಿರುವ ಈ ದಂಪತಿಯ ಮಗ ಶ್ಲಾಘಿಸಿದ್ದಾರೆ. ಚಿಕಿತ್ಸೆಯಲ್ಲಿ 7 ವೈದ್ಯರು 25 ದಾದಿಯರು ಸೇರಿ 40 ವೈದ್ಯಕೀಯ ಸಿಬ್ಬಂದಿ ಇದ್ದರು.
ಮೂರು ಕೊರೊನಾ ವೈರಸ್ ಪ್ರಕರಣಗಳನ್ನು ಗುಣಪಡಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಇದೀಗ ಕೇರಳ ಪಾತ್ರವಾಗಿದೆ.