ಈಟಿವಿ ಭಾರತ(ಹೈದರಾಬಾದ್, ತೆಲಂಗಾಣ): ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಸ್ಕೈರೂಟ್ ಏರೋಸ್ಪೇಸ್, ಎಲ್ಎನ್ಜಿ ಇಂಧನದಲ್ಲಿ ಚಲಿಸುವ ಭಾರತದ ಮೊದಲ ಕ್ರಯೋಜೆನಿಕ್ ರಾಕೆಟ್ ಎಂಜಿನ್‌ನ ಶುಕ್ರವಾರ ಅನಾವರಣಗೊಳಿಸಿದೆ.
ಖ್ಯಾತ ಭಾರತೀಯ ರಾಕೆಟ್ ವಿಜ್ಞಾನಿ ಡಾ. ಸತೀಶ್ ಧವನ್ ಅವರ ಜನ್ಮ ದಿನಾಚರಣೆಯಂದು ಉಡಾವಣೆಯಾಗುತ್ತಿರುವ ಈ ರಾಕೆಟ್ ಎಂಜಿನ್‌ನ ಕಂಪನಿಯು ಧವನ್-ಐ ಎಂದು ಹೆಸರಿಸಿದೆ. ಧವನ್-ಐ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕ್ರೈಯೊಜೆನಿಕ್ ರಾಕೆಟ್ ಎಂಜಿನ್ ಆಗಿದೆ. ಇದು 100% 3D ಮುದ್ರಿತವಾಗಿದೆ, 100% ಕ್ರಯೋಜೆನಿಕ್ ಪ್ರೊಪೆಲ್ಲೆಂಟ್ಸ್ ಬಳಸುತ್ತದೆ ಮತ್ತು ಇದು 100% ಮೇಡ್ ಇನ್ ಇಂಡಿಯಾ” ಎಂದು ಸ್ಕೈರೂಟ್ ಏರೋಸ್ಪೇಸ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಈಟಿವಿ ಭಾರತದೊಂದಿಗೆ ಸ್ಕೈರೂಟ್ ಏರೋಸ್ಪೇಸ್ ಸಹ-ಸಂಸ್ಥಾಪಕ ಮತ್ತು ಸಿಇಒ ಪವನ್ ಕುಮಾರ್ ಚಂದನಾ ಅವರು ಮಾತನಾಡುತ್ತಾ, “ಎಲ್ಎನ್ಜಿ ಸಂಪೂರ್ಣ ಉರಿಯುವ, ಕಡಿಮೆ ವೆಚ್ಚ, ಹೆಚ್ಚು ಮರುಬಳಕೆ ಮಾಡಬಹುದಾದ ಮತ್ತು ಸುರಕ್ಷಿತ ಕ್ರೈಯೊಜೆನಿಕ್ ಇಂಧನವಾಗಿದೆ.
ಇದು ಉಪಗ್ರಹಗಳು ಅಥವಾ ಮನುಷ್ಯರನ್ನು ಹೊತ್ತೊಯ್ಯುವ ದೀರ್ಘಾವಧಿಯ ಆಳವಾದ ಬಾಹ್ಯಾಕಾಶ ಯಾತ್ರೆಗಳಿಗೆ ಸೂಕ್ತವಾಗಿದೆ. ಸ್ಕೈರೂಟ್‌ನ ದೀರ್ಘಕಾಲೀನ ದೃಷ್ಟಿಯೊಂದಿಗೆ ಇದನ್ನು ತಯಾರಿಸಲಾಗಿದೆ ಎಂದು ಹೇಳಿದರು.
”ಇಂಧನ ಹರಿವು ಮತ್ತು ರಚನಾತ್ಮಕ ಸಮಗ್ರತೆ ಪರೀಕ್ಷಿಸಲು ನಾವು ಅನೇಕ ಪರೀಕ್ಷೆಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಈ ಎಂಜಿನ್‌ನ ತಾಪದ ಪರೀಕ್ಷೆಗಾಗಿ ನಾವು ಮೀಸಲಾದ ಪರೀಕ್ಷಾ ಸೌಲಭ್ಯವನ್ನು ನಿರ್ಮಿಸುತ್ತಿದ್ದೇವೆ ” ಎಂದು ಹೇಳಿದರು.