ETV Bharat / bharat

ಒಂದೇ ದಿನ ಅತಿ ಹೆಚ್ಚು ಕೇಸ್​ ದಾಖಲು: ಭಾರತದಲ್ಲಿ 12 ಲಕ್ಷದ ಗಡಿ ದಾಟಿದ ಸೋಂಕಿತರು

ದೇಶದಲ್ಲಿ ಸೋಂಕಿತರ ಸಂಖ್ಯೆ 12,38,635ಕ್ಕೆ ಹಾಗೂ ಮೃತರ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ.

India's COVID tally crosses 12 lakh mark
ಭಾರತದಲ್ಲಿ 12 ಲಕ್ಷ ಗಡಿ ದಾಟಿದ ಕೋವಿಡ್​ ಕೇಸ್​
author img

By

Published : Jul 23, 2020, 10:09 AM IST

Updated : Jul 23, 2020, 11:37 AM IST

ನವದೆಹಲಿ: ಭಾರತದಲ್ಲಿ ಕೋವಿಡ್​ ಅಬ್ಬರ ಜೋರಾಗಿದ್ದು, ಕೇವಲ ಒಂದೇ ದಿನದಲ್ಲಿ ಅರ್ಧ ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು, ಪ್ರಕರಣಗಳ ಸಂಖ್ಯೆ ಇದೀಗ 12 ಲಕ್ಷದ ಗಡಿ ದಾಟಿದೆ. ಸಾವಿನ ಸಂಖ್ಯೆ 30 ಸಾವಿರ ಗಡಿ ತಲುಪುತ್ತಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 45,720 ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಜತೆ ಜತೆಗೆ ಸಾವಿನ ಸಂಖ್ಯೆ ದಿನವೊಂದಕ್ಕೆ ಸಾವಿರದ ಗಡಿ ದಾಟಿದೆ. ಒಂದೇ ದಿನ 1,129 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 12,38,635ಕ್ಕೆ ಹಾಗೂ ಮೃತರ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ.63.13 ರಷ್ಟು ಅಂದರೆ 7,82,606 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 4,26,167 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Last Updated : Jul 23, 2020, 11:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.