ಕೊಚ್ಚಿ, (ಕೇರಳ): ಯೋಧರು ಗಡಿಯಲ್ಲಷ್ಟೇ ಎದೆಯೊಡ್ಡಿ ಹೋರಾಡಲ್ಲ. ದೇಶ ರಕ್ಷಣೆ ಜತೆ ಎಲ್ಲೇ ಪ್ರಕೃತಿ ವಿಕೋಪವಾದ್ರೂ ಅಮೂಲ್ಯ ಜೀವಗಳನ್ನ ಕಾಪಾಡಲು ಸನ್ನದ್ಧವಾಗಿರುತ್ತಾರೆ. ಡ್ಯೂಟಿ ಮೇಲಿದ್ದರೂ, ಇಲ್ಲದಿದ್ದರೂ ಸಂಕಷ್ಟಕ್ಕೆ ಸಿಲುಕಿದವರನ್ನ ಬದುಕಿಸುವ ಮಹತ್ಕಾರ್ಯ ಮರೆಯೋದಿಲ್ಲ. ಕೇರಳದ ಕೊಚ್ಚಿಯಲ್ಲೂ ಸೇನಾ ಅಧಿಕಾರಿಯೊಬ್ಬರು ಅದನ್ನ ನಿಜವಾಗಿಸಿದ್ದಾರೆ.
ಕೇರಳದ ಕೊಚ್ಚಿನ ವೈಬಿನ್ ಬಂದರು ಬಳಿಯ ಹಿನ್ನೀರಿನ ಕಾಲುವೆಯೊಳಗೆ ವ್ಯಕ್ತಿಯೊಬ್ಬ ಮುಳುಗುತ್ತಿದ್ದ. ಅದೇ ಟೈಮ್‌ಗೆ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್ ಮುಳುಗುತ್ತಿದ್ದ ವ್ಯಕ್ತಿಯನ್ನ ಬದುಕಿಸಿದ್ದಾರೆ.
ನೀರು ಕುಡಿದಿದ್ದ ದಿಲೀಪ್ ಉಸಿರಾಡೋದಕ್ಕೆ ಆಗ್ತಿರಲಿಲ್ಲ. ದೇಹದೊಳಗಿದ್ದ ನೀರನ್ನ ಹೊರತೆಗೆದ ರಾಹುಲ್, ದಿಲೀಪ್ ಉಸಿರಾಡುವಂತೆ ಮಾಡಿದರು. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲ ಕ್ಷಣಗಳಲ್ಲಿ ಅಸ್ವಸ್ಥಗೊಂಡ ದಿಲೀಪ್‌ಕುಮಾರ್‌ನ ಆಸ್ಪತ್ರೆಗೆ ಸೇರಿಸಿದರು.
ಮುಳುಗುತ್ತಿದ್ದ ವ್ಯಕ್ತಿಯ ಅಮೂಲ್ಯ ಜೀವ ಉಳಿಸಿದ ಲೆಫ್ಟಿನೆಂಟ್ ರಾಹುಲ್ ದಲಾಲ್ ಧೈರ್ಯ, ಸಾಹಸವನ್ನ ಅಲ್ಲಿಂದ ಜನ ಕೊಂಡಾಡಿದರು. ಸೋಷಿಯಲ್ ಮೀಡಿಯಾದಲ್ಲೂ ರಾಹುಲ್ ಜೀವ ಬದುಕಿಸುತ್ತಿರುವ ಫೋಟೋಗಳು ವೈರಲಾಗಿವೆ. ಸೇನಾಧಿಕಾರಿ ರಾಹುಲ್ ಸಾಹಸಕ್ಕೆ ನೆಟಿಜನ್ಸ್ ಟ್ವೀಟ್ ಮೂಲಕ ಸೆಲ್ಯೂಟ್ ಮಾಡಿದ್ದಾರೆ.