ನವದೆಹಲಿ: ಎಲ್ಲಾ ರೀತಿಯಾ ದಾಳಿಗಳನ್ನು ಎದುರಿಸಿ ದೇಶವನ್ನು ರಕ್ಷಿಸಿಕೊಳ್ಳಲು ಭಾರತೀಯ ನೌಕಾಪಡೆ ಸಮರ್ಥವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
-
#WATCH Defence Minister Rajnath Singh fired medium machine gun on-board INS Vikramaditya, earlier today. pic.twitter.com/8EnkZrusvf
— ANI (@ANI) September 29, 2019 " class="align-text-top noRightClick twitterSection" data="
">#WATCH Defence Minister Rajnath Singh fired medium machine gun on-board INS Vikramaditya, earlier today. pic.twitter.com/8EnkZrusvf
— ANI (@ANI) September 29, 2019#WATCH Defence Minister Rajnath Singh fired medium machine gun on-board INS Vikramaditya, earlier today. pic.twitter.com/8EnkZrusvf
— ANI (@ANI) September 29, 2019
ಗೋವಾ ಕರಾವಳಿಯ ತೀರದ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಕುಳಿತು ಮಾತನಾಡಿದ ಅವರು, ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ ಭಾರತೀಯ ನೌಕಾಪಡೆ ಸರ್ವ ರೀತಿಯಿಂದಲೂ ಸಮರ್ಥವಾಗಿದ್ದು, ಎಂತಹ ಸನ್ನಿವೇಶ ಎದುರಾದರು ಎದುರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ನೌಕಾಪಡೆಯ ಧೈರ್ಯಶಾಲಿ ನಾವಿಕರು ತೋರಿಸಿದ ವೃತ್ತಿಪರತೆ, ಬದ್ಧತೆ ಮತ್ತು ಉತ್ಸಾಹವನ್ನು ನೋಡಿ ನಾನು ಪ್ರಭಾವಿತನಾಗಿದ್ದೇನೆ. ನಮ್ಮ ರಾಷ್ಟ್ರ ಸುರಕ್ಷಿತವಾಗಿದೆ ಎಂಬ ಭರವಸೆ ನನಗಿದೆ. ಸಮುದ್ರ ವಲಯಗಳಲ್ಲಿ ಭಾರತದ ಭದ್ರತೆ ಬಲಶಾಲಿಯಾಗಿದೆ ಎಂದರು.
ಈಗಾಗಲೇ ಭಾರತೀಯ ನೌಕಾಪಡೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದು, ಸಾಗರ ತೀರದ ಎಲ್ಲಾ ಅಪಾಯಗಳನ್ನು ಹಿಮ್ಮೆಟ್ಟಲಿವೆ ಎಂದು ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.
ರಕ್ಷಣಾ ವ್ಯವಸ್ಥೆಯ ಸಮವಸ್ತ್ರ ಧರಿಸಿಕೊಂಡ ರಾಜನಾಥ್ ಸಿಂಗ್ ಅವರು, ಈ ಯುದ್ಧ ನೌಕೆಯ ಸೀನಾ ಸಿಬ್ಬಂದಿ ಸಹಾಯದೊಂದಿಗೆ ಹಲವು ಸುತ್ತು ಅಣಕು ಫೈರಿಂಗ್ ನಡೆಸುವ ವಿಡಿಯೋ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.