ETV Bharat / bharat

ಮಹಾವೀರ ಜಯಂತಿಗೆ ಭಾರತೀಯ ಷೇರು ಮಾರುಕಟ್ಟೆಗಳು ಸ್ತಬ್ಧ.. - ಭಾರತೀಯ ಷೇರು ಮಾರುಕಟ್ಟೆ

ಕೆಲವು ಏಷ್ಯಾದ ಷೇರು ಮಾರುಕಟ್ಟೆಗಳೊಂದಿಗೆ ದಕ್ಷಿಣ ಕೊರಿಯಾದ ಕೋಸ್ಪಿ ಶೇ.1.4ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಜಪಾನ್​ನ ನಿಕ್ಕಿ ಕೂಡಾ ಶೇ.0.2ರಷ್ಟು ಏರಿಕೆ ಕಂಡಿತ್ತು. ಚೀನಾ ಷೇರು ಮಾರುಕಟ್ಟೆ ಸಾರ್ವಜನಿಕ ರಜೆಯ ಕಾರಣಕ್ಕೆ ಮುಚ್ಚಲ್ಪಟ್ಟಿವೆ.

bombay stock exchange
ಬಾಂಬೆ ಸ್ಟಾಕ್​ ಎಕ್ಸ್​​ಚೇಂಜ್​
author img

By

Published : Apr 6, 2020, 12:55 PM IST

ಮುಂಬೈ(ಮಹಾರಾಷ್ಟ್ರ): ಭಗವಾನ್​ ಮಹಾವೀರ್​ ಜಯಂತಿಯ ಅಂಗವಾಗಿ ಭಾರತೀಯ ಷೇರು ಮಾರುಕಟ್ಟೆಗಳನ್ನು ಇಂದು ಮುಚ್ಚಲಾಗಿದೆ. ಮುಂಬೈನ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ ಹಾಗೂ ದೆಹಲಿಯ ನ್ಯಾಷನಲ್​ ಸ್ಟಾಕ್​ನಲ್ಲಿ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ.

ಫಾರೆಕ್ಸ್​(ಫಾರಿನ್​ ಎಕ್ಸ್​ಚೇಂಜ್​) ಹಾಗೂ ಸರಕುಗಳ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಸ್ತಬ್ಧವಾಗಿವೆ. ಸಾವಿರ ಕೋಟಿ ವ್ಯವಹಾರ ಮಾಡುವ ಲೋಹಗಳ ಸಗಟು ಮಾರುಕಟ್ಟೆಗಳು ಬಂದ್ ಆಗಿವೆ. ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಣೆಯಾದ ಕಾರಣದಿಂದ ಈಗಾಗಲೇ ಬಹುತೇಕ ಜೈನ್ ದೇವಾಲಯಗಳು ಮುಚ್ಚಿವೆ.

ಏಪ್ರಿಲ್​ 3ರಂದು ಮುಂಬೈನ ಎಸ್​ ಮತ್ತು ಪಿ (ಸ್ಟಾಂಡರ್ಡ್​ ಅಂಡ್​ ಪೂರ್​​)ನ ಸೆನ್ಸೆಕ್ಸ್​ 674 ಪಾಯಿಂಟ್ ಅಥವಾ ಶೇ.2.39ರಷ್ಟು ಕುಸಿದು 27,591ಕ್ಕೆ ತಲುಪಿತ್ತು. ಇದೇ ವೇಳೆ ನಿಫ್ಟಿ-50 ಸುಮಾರು 170 ಪಾಯಿಂಟ್​ ಅಥವಾ ಶೇ.2.06ರಷ್ಟು ಕುಸಿದು 8,084ಕ್ಕೆ ತಲುಪಿತ್ತು.

ಕೆಲವು ಏಷ್ಯಾದ ಷೇರು ಮಾರುಕಟ್ಟೆಗಳೊಂದಿಗೆ ದಕ್ಷಿಣ ಕೊರಿಯಾದ ಕೋಸ್ಪಿ ಶೇ.1.4ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಜಪಾನ್​ನ ನಿಕ್ಕಿ ಕೂಡಾ ಶೇ.0.2ರಷ್ಟು ಏರಿಕೆ ಕಂಡಿತ್ತು. ಚೀನಾ ಷೇರು ಮಾರುಕಟ್ಟೆ ಸಾರ್ವಜನಿಕ ರಜೆಯ ಕಾರಣಕ್ಕೆ ಮುಚ್ಚಲ್ಪಟ್ಟಿವೆ. ಡೊನಾಲ್ಡ್​ ಟ್ರಂಪ್​ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ ನಂತರ ಅಮೆರಿಕದ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.