ETV Bharat / bharat

'ಲಡಾಖ್​ನಲ್ಲಿ ಯೋಧರದ್ದು ಅಪ್ರತಿಮ ಶೌರ್ಯ' ಎಂದ ರಾಜನಾಥ್​ ಸಿಂಗ್ - ಚೀನಾ ಅಕ್ರಮಕಾರಿ ನೀತಿ ಮತ್ತು ರಾಜನಾಥ್ ಸಿಂಗ್​

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ಪ್ರತಿಭಟನೆ ಕೃಷಿ ಅಭಿವೃದ್ಧಿಯನ್ನು ಹಿಮ್ಮೆಟ್ಟುವ ಕ್ರಮ' ಎಂದು ಹರಿಹಾಯ್ದಿದ್ದಾರೆ.

Rajanath singh
ರಾಜನಾಥ್ ಸಿಂಗ್
author img

By

Published : Dec 14, 2020, 3:33 PM IST

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಭಾರತೀಯ ಸೈನಿಕರು ಅಪ್ರತಿಮ ಶೌರ್ಯದಿಂದ ಚೀನಾದ ಸೈನಿಕರನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಫ್​​ಐಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಭಾರತದ ಹಿಮಾಲಯದಲ್ಲಿನ ಅಪ್ರಚೋದಿತ ದಾಳಿ ಅಂತಾರಾಷ್ಟ್ರೀಯ ಒಪ್ಪಂದಗಳು ಎಷ್ಟರ ಮಟ್ಟಿಗೆ ಅಸ್ಥಿತ್ವದಲ್ಲಿವೆ?, ಜಗತ್ತು ಹೇಗೆ ಬದಲಾಗುತ್ತಿದೆ? ಎಂಬುದನ್ನು ಸೂಚಿಸುತ್ತದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ಯೋಧರು, ಪೀಪಲ್ಸ್​​ನ ಲಿಬರೇಷನ್ ಆರ್ಮಿ (ಪಿಎಲ್​ಎ) ಸೈನಿಕರ ವಿರುದ್ಧ ಶೌರ್ಯದಿಂದ ಹೋರಾಡಿ, ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಭಾರತದ ಮುಂದಿನ ತಲೆಮಾರುಗಳು ಈ ವಿಚಾರಕ್ಕೆ ಹೆಮ್ಮೆ ಪಡುತ್ತವೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಮೊಬೈಲ್ ಉತ್ಪಾದನೆಯಲ್ಲಿ ಚೀನಾ ಹಿಂದಿಕ್ಕಲಿದೆ ಭಾರತ: ರವಿಶಂಕರ್ ಪ್ರಸಾದ್ ವಿಶ್ವಾಸ

ಇಂಡೋ - ಪೆಸಿಫಿಕ್ ಭಾಗದಲ್ಲೂ ಕೂಡಾ ಅಪ್ರಚೋದಿತವಾಗಿ ರಾಷ್ಟ್ರವಿರೋಧಿ ಕಾರ್ಯಗಳು ನಡೆಯುತ್ತಿವೆ ಎಂದು ಚೀನಾದ ವಿರುದ್ಧ ರಾಜನಾಥ್ ಸಿಂಗ್ ಗುಡುಗಿದ್ದಾರೆ.

ಇದೇ ವೇಳೆ, ಕೃಷಿ ಸುಧಾರಣಾ ಕಾಯ್ದೆಗಳ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ರೈತರ ಪ್ರತಿಭಟನೆ 'ಕೃಷಿ ಕ್ಷೇತ್ರದದ ಅಭಿವೃದ್ಧಿಯನ್ನು ಹಿಮ್ಮೆಟ್ಟುವ ಕ್ರಮ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೃಷಿ ಸುಧಾರಣಾ ಕಾಯ್ದೆಗಳನ್ನು ರೈತರ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಜಾರಿಗೆ ತರಲಾಗಿದೆ. ನಾವು ರೈತ ಸಹೋದರರ ಕಷ್ಟಗಳನ್ನು ಕೇಳಿಸಿಕೊಳ್ಳಲು ಸಿದ್ಧವಿದ್ದೇವೆ. ಅವರ ಅನುಮಾನಗಳನ್ನು ನಿವಾರಿಸಿ, ಅವರ ಹಿತಕ್ಕಾಗಿ ದುಡಿಯುವ ವಿಶ್ವಾಸ ನೀಡುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.