ಚೆನ್ನೈ : ಮೀನುಗಾರಿಕೆಗೆ ಬಂದು ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಆರು ಜನ ಶ್ರೀಲಂಕಾ ಮೀನುಗಾರರನ್ನ ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ.
ಜುಲೈ 5 ಬೆಳಗ್ಗೆ ಮುಂಬೈ ಮತ್ತು ಚೆನ್ನೈನ ಭಾರತೀಯ ಕೋಸ್ಟ್ ಗಾರ್ಡ್ ಮ್ಯಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರ (ಎಂಆರ್ಸಿಸಿ) ರಕ್ಷಣಾ ಕಾರ್ಯಾಚರಣೆ ಮಾಡಿದೆ. ವ್ಯಾಪಾರಿ ಹಡಗು ವಿಶಾಖಪಟ್ಟಣಂಗೆ ತೆರಳುತ್ತಿದ್ದಾಗ, ಕ್ಯಾಪ್ಸೈಸ್ಡ್ ಫಿಶಿಂಗ್ ಬೋಟ್ ಅನ್ನು ನೋಡಿ ಅದರಲ್ಲಿದ್ದ ಆರು ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಈ ಕುರಿತು ಮುಂಬೈನ ಎಂಆರ್‌ಸಿಸಿಗೆ ಮಾಹಿತಿಯನ್ನು ರವಾನಿಸಿದ್ದಾರೆ.
ಬದುಕುಳಿದ ಆರು ಮಂದಿಯನ್ನು ಶ್ರೀಲಂಕಾದ ತ್ರಿಕೋನಮಲಿಯ ಸ್ಥಳೀಯರು ಎಂದು ಗುರುತಿಸಲಾಗಿದೆ. ಅವರು ಮೀನುಗಾರಿಕೆಗೆ ಬಂದಾಗ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಇವರ ಬಗ್ಗೆ ಚೆನ್ನೈನ ಎಂಆರ್ಸಿಸಿ ಶ್ರೀಲಂಕಾದ ಉಪ ಹೈಕಮಿಷನ್ ನಲ್ಲಿ ತಿಳಿದು ಕೊಂಡು, ಇವರನ್ನ ಸುರಕ್ಷಿತವಾಗಿ ಮರಳಲು ವ್ಯವಸ್ಥೆ ಮಾಡಲಾಗಿದೆ.