ನವದೆಹಲಿ: ಸಿಕ್ಕಿಂನ ನತುಲಾ ಪಾಸ್ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಭಾರತ-ಚೀನಾ ಯೋಧರು ಕೈ-ಕೈ ಮಿಲಾಯಿಸಿರುವ ಕಾರಣ ಘರ್ಷಣೆ ಉಂಟಾಗಿದೆ ಎಂದು ತಿಳಿದು ಬಂದಿದೆ.
ಘಟನೆ ವೇಳೆ ಎರಡು ದೇಶದ ಸೈನಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎನ್ನಲಾಗಿದೆ. ಭಾರತೀಯ ಸೇನೆಯ 15ರಿಂದ 20 ಯೋಧರು ಹಾಗೂ ಚೀನಾದ ಯೋಧರು ಈ ಘರ್ಷಣೆಯಲ್ಲಿ ಭಾಗಿಯಾಗಿದ್ದ ವೇಳೆ ಕಲ್ಲು ತೂರಾಟ ನಡೆಸಿದ್ದಾಗಿ ತಿಳಿದು ಬಂದಿದೆ.
2017 ರಲ್ಲಿ ಇದೇ ಸ್ಥಳದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ತೀವ್ರ ಮಾರಾಮಾರಿ ನಡೆದಿತ್ತು. ಗಸ್ತು ತಿರುಗುತ್ತಿದ್ದಾಗ, ಭಾರತೀಯ ಸೈನಿಕರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿತು. ಇದೀಗ ಮತ್ತೊಮ್ಮೆ ಈ ಘರ್ಷಣೆ ಉಂಟಾಗಿದೆ.
ಭಾರತೀಯ ಸೇನೆ ಸ್ಪಷ್ಟನೆ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ ಮೇ 5 ಹಾಗೂ 6ನೇ ತಾರೀಖಿನಿಂದು ಉಭಯ ದೇಶದ ಯೋಧರ ಮಧ್ಯೆ ಲಡಾಕ್ ಪ್ರದೇಶದಲ್ಲಿ ಸಣ್ಣ ಮಟ್ಟದ ಗಲಾಟೆಯಾಗಿದ್ದು, ಅದನ್ನ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ ಎಂದಿದೆ.