ನವದೆಹಲಿ : ರೆಜಾಂಗ್ ಲಾ ಸಮೀಪ ಚೀನಾದ ಸೈನ್ಯವು ಭಾರತೀಯ ಸೈನಿಕರೊಂದಿಗೆ ಮುಖಾಮುಖಿಯಾಗಿರುವ ಮಧ್ಯೆಯೇ ಭಾರತ ಮತ್ತು ಚೀನಾ ಸೈನ್ಯಗಳು ಪರಸ್ಪರ ಸಂವಹನ ನಡೆಸುತ್ತಿವೆ ಎಂದು ಭಾರತೀಯ ಸೇನಾ ಮೂಲ ತಿಳಿಸಿವೆ.
ಸೋಮವಾರ ರಾತ್ರಿ ಪೂರ್ವ ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ಭಾರತೀಯ ಸೇನೆ ಹೋಗಲು ಪ್ರಯತ್ನಿಸುತ್ತಿರುವಾಗ ಚೀನಾದ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಭಾರತೀಯ ಸೇನೆಯು ಮಂಗಳವಾರ ತಿಳಿಸಿದೆ.
"ಪಿಎಲ್‌ಎ ಒಪ್ಪಂದಗಳನ್ನು ಚೀನಾ ನಿರ್ದಯವಾಗಿ ಉಲ್ಲಂಘಿಸುತ್ತಿದೆ ಮತ್ತು ಆಕ್ರಮಣಕಾರಿ ಕುಶಲತೆ ನಡೆಸುತ್ತಿದೆ. ಆದರೆ, ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಪ್ರಗತಿಯಲ್ಲಿದೆ" ಎಂದು ಭಾರತೀಯ ಸೇನೆ ಹೇಳಿದೆ.
ಸೋಮವಾರ ಪಾಂಗೊಂಗ್ ತ್ಸೊ ಬಳಿ ಭಾರತೀಯ ಪಡೆ ಎಲ್‌ಎಸಿಯನ್ನು "ಅಕ್ರಮವಾಗಿ ದಾಟಿದೆ" ಎಂದು ಚೀನಾ ಹೇಳಿಕೊಂಡ ನಂತರ, ಸೇನೆಯ ಹೇಳಿಕೆ ಬಂದಿದೆ. ಈ ಪ್ರಚೋದನೆಯ ಹೊರತಾಗಿಯೂ, ಭಾರತೀಯ ಪಡೆಗಳು ಬಹಳ ಸಂಯಮ ಮತ್ತು ಜವಾಬ್ದಾರಿಯುತ ರೀತಿ ವರ್ತಿಸಿದವು ಎಂದು ಹೇಳಲಾಗಿದೆ.