ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಿಮಾನ ಸೇವೆ ಮತ್ತೆ ಪುನಾರಂಭಗೊಳ್ಳುತ್ತಿದೆ. ಭಾರತದಿಂದ ಬ್ರಿಟನ್ಗೆ ಜನವರಿ 6ರಿಂದ ಹಾಗೂ ಬ್ರಿಟನ್ನಿಂದ ಭಾರತಕ್ಕೆ ಜನವರಿ 8ರಿಂದ ಮತ್ತೆ ವಿಮಾನಗಳು ಹಾರಾಟ ನಡೆಸಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
-
Resumption of flights between India & UK:
— Hardeep Singh Puri (@HardeepSPuri) January 2, 2021 " class="align-text-top noRightClick twitterSection" data="
India to UK from 6 Jan 2021.
UK to India from 8 Jan 2021.
30 flights will operate every week. 15 each by Indian & UK carriers.
This schedule is valid till 23 Jan 2021. Further frequency will be determined after review.
">Resumption of flights between India & UK:
— Hardeep Singh Puri (@HardeepSPuri) January 2, 2021
India to UK from 6 Jan 2021.
UK to India from 8 Jan 2021.
30 flights will operate every week. 15 each by Indian & UK carriers.
This schedule is valid till 23 Jan 2021. Further frequency will be determined after review.Resumption of flights between India & UK:
— Hardeep Singh Puri (@HardeepSPuri) January 2, 2021
India to UK from 6 Jan 2021.
UK to India from 8 Jan 2021.
30 flights will operate every week. 15 each by Indian & UK carriers.
This schedule is valid till 23 Jan 2021. Further frequency will be determined after review.
ಭಾರತದಿಂದ 15 ಹಾಗೂ ಯುಕೆಯಿಂದ 15 ವಿಮಾನಗಳಂತೆ ಪ್ರತಿ ವಾರ 30 ವಿಮಾನಗಳು ಉಭಯ ರಾಷ್ಟ್ರಗಳ ನಡುವೆ ಹಾರಾಡಲಿದೆ. ಈ ವೇಳಾಪಟ್ಟಿಯು ಜನವರಿ 23ರವರೆಗೆ ಮಾನ್ಯವಾಗಿರುತ್ತದೆ. ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪುರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ 20 ಮಿಲಿಯನ್ ಗಡಿ ದಾಟಿದ ಕೊರೊನಾ ಕೇಸ್: ಮೂರೂವರೆ ಲಕ್ಷ ಮಂದಿ ಬಲಿ
ಈ ಹಿಂದೆ ಸಚಿವರು ಜ. 8ರಿಂದ ಭಾರತ - ಯುಕೆ ನಡುವೆ ವಿಮಾನ ಸೇವೆ ಪುನಾರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಇಂಗ್ಲೆಂಡ್ನಲ್ಲಿ ಕೋವಿಡ್ ಹೊಸ ರೂಪ ಪಡೆದ ಹಿನ್ನೆಲೆ ರೂಪಾಂತರಿ ವೈರಸ್ ಹರಡುವುದನ್ನು ತಡೆಯಲು ಭಾರತವು ಎರಡು ದೇಶಗಳನ್ನು ಸಂಪರ್ಕಿಸುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಡಿ. 23ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.