ETV Bharat / bharat

ಭಾರತದಿಂದ ಅಮೆರಿಕಕ್ಕೇ  ಪಿಪಿಇ ಕಿಟ್- ವೆಂಟಿಲೇಟರ್​ ರಫ್ತು: ​ಆರೋಗ್ಯ ಸಚಿವಾಲಯ ಮಾಹಿತಿ - PPE kit

ದೇಶದಲ್ಲಿ ಅಗತ್ಯಕ್ಕೆ ಅನುಸಾರವಾಗಿ ಪಿಪಿಇ ಕಿಟ್​ಗಳನ್ನು ಶೇಖರಿಸಿಕೊಂಡು ಉಳಿದ ಕಿಟ್​ಗಳನ್ನು ಅಮೆರಿಕ ಹಾಗೂ ಯುರೋಪ್​ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತೀಯ ​ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ.

ಭಾರತದಿಂದ ಅಮೇರಿಕಾಗೆ ಪಿಪಿಇ ಕಿಟ್- ವೆಂಟಿಲೇಟರ್​ ರಫ್ತು

author img

By

Published : Jun 26, 2020, 12:30 PM IST

ನವದೆಹಲಿ: ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗಳಿಗೆ ಪಿಪಿಇ ಕಿಟ್​ ಅಗತ್ಯ. ಈ ಹಿನ್ನೆಲೆಯಲ್ಲಿ ನಿತ್ಯ ಸುಮಾರು 6 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಸದ್ಯ ದೇಶದಲ್ಲಿ ಅಗತ್ಯಕ್ಕೆ ಅನುಸಾರವಾಗಿ ಕಿಟ್​ಗಳನ್ನು ಶೇಖರಿಸಿಕೊಂಡು ಉಳಿದ ಕಿಟ್​ಗಳನ್ನು ಅಮೆರಿಕ ಹಾಗೂ ಯುರೋಪ್​ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತ ತೀರ್ಮಾನಿಸಿದೆ.

ಭಾರತದಿಂದ ಅಮೆರಿಕಕ್ಕೆ ಪಿಪಿಇ ಕಿಟ್- ವೆಂಟಿಲೇಟರ್​ ರಫ್ತು

ಕೊರೊನಾ ಸೋಂಕು ದೇಶದಲ್ಲಿ ಅಟ್ಟಹಾಸ ಶುರು ಮಾಡಿದ ಪ್ರಾರಂಭದಲ್ಲಿ ಇತರ ಹೊರ ದೇಶಗಳಿಂದ ಸುಮಾರು 80 ಸಾವಿರ ಪಿಪಿಇ ಕಿಟ್​ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಷ್ಟೇ ಅಲ್ಲದೇ, ವೆಂಟಿಲೇಟರ್​ಗಳ ತಯಾರಿಕೆಗೂ ಅಗತ್ಯ ವಸ್ತುಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಬದಲಾವಣೆಯಾಗಿದ್ದು, ಭಾರತದಲ್ಲೇ 50ಕ್ಕೂ ಹೆಚ್ಚು ಕಂಪನಿಗಳು ವೆಂಟಿಲೇಟರ್​ಗಳನ್ನು ಹಾಗೂ 600ಕ್ಕೂ ಹೆಚ್ಚು ಕಂಪನಿಗಳು ಪಿಪಿಇ ಕಿಟ್​ಗಳನ್ನು ತಯಾರಿಸುತ್ತಿವೆ.

ವಿದೇಶದಿಂದ ಬರುತ್ತಿರುವ ಬೇಡಿಕೆಯನ್ನು ಮತ್ತು ದೇಶೀಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪಿಪಿಇ ಕಿಟ್​ ಹಾಗೂ ವೆಂಟಿಲೇಟರ್​ಗಳನ್ನು ರಫ್ತು ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ - ಯುರೋಪ್ ದೇಶಗಳು ಸೇರಿದಂತೆ ಹಲವು ದೇಶಗಳಿಗೆ ಭಾರತದಿಂದ ಕಿಟ್​ಗಳು ರಫ್ತಾಗಲಿವೆ. ಭಾರತವು ಪಿಪಿಇ ಮತ್ತು ವೆಂಟಿಲೇಟರ್‌ಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಎನ್‌ಐಟಿಐ ಆಯೋಗ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.