ಓವೆಲ್: ಅಂಡರ್-19 ವಿಶ್ವಕಪ್ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ಥ ಲೂಯಿಸ್ ಪ್ರಕಾರ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದು, ಈಗಾಗಲೇ ಸರಣಿಯಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿರುವ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.
ಈಗಾಗಲೇ ಶ್ರೀಲಂಕಾ ವಿರುದ್ಧ 90ರನ್ ಹಾಗೂ ಜಪಾನ್ ತಂಡದ ವಿರುದ್ಧ 10 ವಿಕೆಟ್ಗಳ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ಪ್ರಕಾರ 44ರನ್ಗಳ ಗೆಲುವು ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 23 ಓವರ್ಗಳಲ್ಲಿ 115ರನ್ಗಳಿಕೆ ಮಾಡಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಅಜೇಯ 57ರನ್, ಹಾಗೂ ಸಕ್ಸೆನ್ ಅಜೇಯ 52ರನ್ಗಳಿಕೆ ಮಾಡಿದರು. ಈ ವೇಳೆ ಮಳೆ ಸುರಿದ ಕಾರಣ ಡಕ್ವರ್ಥ್ ನಿಯಮದ ಪ್ರಕಾರ ಎದುರಾಳಿ ತಂಡಕ್ಕೆ 23 ಓವರ್ಗಳಲ್ಲಿ 193ರನ್ಗಳಿಕೆ ಮಾಡುವ ಅವಕಾಶ ನೀಡಲಾಯಿತು. ಆದರೆ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು 21 ಓವರ್ಗಳಲ್ಲಿ 147ರನ್ ಮಾತ್ರ ಗಳಿಕೆ ಮಾಡಿತು. ಹೀಗಾಗಿ ಟೀಂ ಇಂಡಿಯಾ 44ರನ್ಗಳ ಗೆಲುವು ದಾಖಲು ಮಾಡಿಕೊಂಡಿದೆ.
ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕೆರ್ 3ವಿಕೆಟ್ ಹಾಗೂ ರವಿ ಬಿಷ್ಣೋಯ್ 4ವಿಕೆಟ್ ಪಡೆದುಕೊಂಡರೆ ಕಾರ್ತಿಕ್ ತ್ಯಾಗಿ 1 ಹಾಗೂ ಶುಶಾಂತ್ ಮಿಶ್ರಾ 1ವಿಕೆಟ್ ಪಡೆದುಕೊಂಡರು. ಮುಂದಿನ ಪಂದ್ಯ ಜನವರಿ 28ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.